ಬೆಂಗಳೂರಿನ ಪಿಜಿ ಮಾಲೀಕರ ಬಗ್ಗೆ ವ್ಯಂಗ್ಯವಾಗಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೊನಾಲಿಕಾ, ಪಿಜಿ ಮಾಲೀಕರಾಗುವುದು ತಮ್ಮ ಕನಸಿನ ಕೆಲಸವೆಂದಿದ್ದಾರೆ. ಏನೂ ಮಾಡದೆ ಬಾಡಿಗೆ ಪಡೆಯುವುದು ಮತ್ತು ಭದ್ರತಾ ಠೇವಣಿ ಹಿಂತಿರುಗಿಸದಿರುವುದು ಅವರ ವಾದ. ಈ ಪೋಸ್ಟ್ ವೈರಲ್ ಆಗಿದ್ದು, ಪಿಜಿ ಮಾಲೀಕರ ಕಾರ್ಯವೈಖರಿ ಹಾಗೂ ಭದ್ರತಾ ಠೇವಣಿ ಹಿಂತಿರುಗಿಸದಿರುವ ಬಗ್ಗೆ ಚರ್ಚೆಗಳು ನಡೆದಿವೆ.
ಜನರು ಯಾವ್ದೆ ಸಮಸ್ಯೆ ಬರಲಿ ಮೊದಲು ಬರೋದು ಸೋಶಿಯಲ್ ಮೀಡಿಯಾ (Social media) ಕ್ಕೆ. ಅಲ್ಲಿ ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟು, ಅದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡ್ತಾರೆ. ಪ್ರತಿ ದಿನ ಸೋಶಿಯಲ್ ಮೀಡಿಯಾದಲ್ಲಿ ನಾನಾ ಸಮಸ್ಯೆಗಳ ಬಗ್ಗೆ ಜನರು ಬೆಳಕು ಚೆಲ್ಲುತ್ತಿರುತ್ತಾರೆ. ಕೆಲವಕ್ಕೆ ಪರಿಹಾರ ಸಿಕ್ರೆ ಮತ್ತೆ ಕೆಲವನ್ನು ಸರಿಪಡಿಸಲಾಗದೆ ತಮಾಷೆಯಾಗಿ ಸ್ವೀಕರಿಸಲಾಗುತ್ತದೆ. ಈಗ ಮಹಿಳೆಯೊಬ್ಬಳು ತನ್ನ ಡ್ರೀಮ್ ಜಾಬ್ (dream job) ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾಳೆ. ಬೆಂಗಳೂರಿನಲ್ಲಿ ಪಿಜಿ ಓನರ್ ಆಗೋದು ಆಕೆಯ ಕನಸಿನ ಕೆಲಸ. ಏನೂ ಮಾಡ್ದೆ ಹಣ ಸಂಪಾದನೆ ಮಾಡ್ಬಹುದು ಎಂಬುದು ಆಕೆಯ ವಾದ. ಮಹಿಳೆ ಪಿಜಿ ಪೋಸ್ಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅನೇಕರು ಬೆಂಗಳೂರು ಮಾತ್ರವಲ್ಲ ಇಡೀ ದೇಶದಾದ್ಯಂತ ಪಿಜಿ ಓನರ್ ಗಳ ಸಮಸ್ಯೆ ಇದೇ ಆಗಿದೆ ಎನ್ನುತ್ತ, ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ.
ಮೊನಾಲಿಕಾ ಪಟ್ನಾಯಕ್, ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಪಿಜಿ ಮಾಲೀಕರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಂಗ್ಯವಾದ ಪೋಸ್ಟ್ ಹಾಕಿದ್ದಾರೆ. ಅದ್ರಲ್ಲಿ ಅವ್ರು ಸ್ವತಃ ಪಿಜಿ ಓನರ್ ಆಗುವ ಬಗ್ಗೆ ಬರೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಪಿಜಿ ಬಾಡಿಗೆ ಹೆಚ್ಚಿರುವ ಕಾರಣ, ಮೋನಾಲಿಕಾ ಸ್ವತಃ ಪಿಜಿ ಶುರು ಮಾಡುವ ಆಲೋಚನೆ ಮಾಡಿದ್ದಾರೆ. ಅದ್ರಲ್ಲಿ ಮಾಡ್ಬೇಕಾದ ಕೆಲಸ ಏನೂ ಇಲ್ಲ ಅನ್ನೋದು ಮೋನಾಲಿಸಾ ಅಭಿಪ್ರಾಯ. ನನ್ನ ಕನಸಿನ ಕೆಲಸವೆಂದರೆ ಬೆಂಗಳೂರಿನಲ್ಲಿ ಪಿಜಿ ಮಾಲೀಕರಾಗುವುದು. ಏನೂ ಮಾಡದೆ, ಪ್ರತಿ ತಿಂಗಳ ಕೊನೆಯಲ್ಲಿ ದುಬಾರಿ ಬಾಡಿಗೆ ಪಡೆಯುವುದು ಮತ್ತು ಭದ್ರತಾ ಠೇವಣಿಯನ್ನು ಹಿಂತಿರುಗಿಸದಿರುವುದು ಎಂದು ಶೀರ್ಷಿಕೆ ಹಾಕಿದ್ದಾರೆ. ಇಲ್ಲಿ ಮೋನಾಲಿಸಾ, ಪಿಜಿ ಓನರ್ಗಳು ಭದ್ರತಾ ಠೇವಣಿಯನ್ನು ಹಿಂತಿರುಗಿಸುವುದಿಲ್ಲ ಎಂಬುದನ್ನು ಜನರ ಮುಂದಿಡುವ ಪ್ರಯತ್ನ ಮಾಡಿದ್ದಾರೆ.
ಕಚೇರಿಯಲ್ಲಿ ಒಬ್ಬರೂ ಹುಡ್ಗೀರ್ ಇಲ್ಲ; ಹೊಸ ಉದ್ಯೋಗಿ ಮಾತಿಗೆ ಕೆಲವರು ಗರಂ, ಪುರುಷರು ಖುಷ್
ಮೋನಾಲಿಕಾ ಈ ಪೋಸ್ಟ್ ನಲ್ಲಿ ಅನೇಕರು ಭದ್ರತಾ ಠೇವಣಿ ಹಿಂತಿರುಗಿಸದಿರುವುದು ಎಂಬು ಮಾತನ್ನು ಮೆಚ್ಚಿಕೊಂಡಿದ್ದಾರೆ. ನಮ್ಮ ಪಿಜಿ ಮಾಲೀಕರು ಕೂಡ ಭದ್ರತಾ ಠೇವಣಿ ಹಿಂದಿರುಗಿಸಿಲ್ಲ ಎಂದು ಕೆಲವರು ನೋವು ತೋಡಿಕೊಂಡಿದ್ದಾರೆ. ಅನ್ನದ ಹೆಸರಿನಲ್ಲಿ ಮೂರು ಬಾರಿ ಊಟ ನೀಡಿದ್ರೆ ಆಯ್ತು, ಎರಡು – ಮೂರು ವಾರಕ್ಕೊಮ್ಮೆ ಕ್ಲೀನ್ ಮಾಡಿದ್ರೆ ಅವ್ರ ಕೆಲಸ ಮುಗೀತು ಅಂತ ಮತ್ತೆ ಕೆಲವರು, ಪಿಜಿ ಓನರ್ಗಳ ಕೆಲಸವನ್ನು ವಿವರಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಇಟ್ಟು, ರಣವೀರ್ ಶೋಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್!
ಎಕ್ಸ್ ಖಾತೆಯ ಈ ಪೋಸ್ಟನ್ನು ಈವರೆಗೆ 3.5 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. 12 ಸಾವಿರಕ್ಕೂ ಹೆಚ್ಚು ಬಳಕೆದಾರರು ಲೈಕ್ ಮಾಡಿದ್ದಾರೆ. 200ಕ್ಕೂ ಹೆಚ್ಚು ಕಮೆಂಟ್ ಬಂದಿದೆ. ಪಿಜಿ ಓನರ್ ಕೆಲಸ ಎಷ್ಟು ಆರಾಮ ಎಂಬುದನ್ನು ಅನೇಕರು ಕಮೆಂಟ್ನಲ್ಲಿ ವಿವರಿಸಿದ್ದಾರೆ. ಭದ್ರತಾ ಹಣವನ್ನು ದೋಚುವ ಈ ಕೃತ್ಯ ಪಿಜಿ ಮಾಲೀಕರಲ್ಲಿ ಸಾಮಾನ್ಯವಾಗಿದೆ. ಇದರಲ್ಲಿ ಯಾವುದೇ ಪ್ರಾದೇಶಿಕ ಮತ್ತು ಭಾಷಾ ತಡೆಗೋಡೆ ಇಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಪಿಜಿ ಮಾಲೀಕರು ಬಾಸ್ ಗಳಂತೆ ವರ್ತಿಸುತ್ತಾರೆ. ನಮ್ಮ ಜೊತೆ ಬಂದ ಹುಡುಗಿಯರನ್ನು ಗದರಿಸ್ತಾರೆ, ನಮ್ಮನ್ನು ಮುಜುಗರಕ್ಕೀಡು ಮಾಡ್ತಾರೆ ಎಂದಿದ್ದಾರೆ.
ಬೆಂಗಳೂರು ಸೇರಿದಂತೆ ದೇಶದಾದ್ಯಂತ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಪಿಜಿ ಆಸರೆಯಾಗಿದೆ. ಆದ್ರೆ ಅನೇಕ ಪಿಜಿಗಳು ಸರಿಯಾಗಿ ಆಹಾರ ನೀಡೋದಿಲ್ಲ, ಕ್ಲೀನ್ ಇಲ್ಲ, ಹೆಚ್ಚಿನ ಹಣ ವಸೂಲಿ ಮಾಡುತ್ವೆ ಎಂಬ ಆರೋಪವನ್ನು ಹೊತ್ತಿವೆ.
