ಗ್ರಾಫಿಕ್ಸ್ ಡಿಸೈನರ್ ಹೊಸ ಕಂಪನಿಗೆ ಕೆಲಸಕ್ಕೆ ಸೇರಿದ್ದಾರೆ. ಕಂಪನಿಯಲ್ಲಿ ಒಬ್ಬರೇ ಒಬ್ಬರು ಮಹಿಳಾ ಉದ್ಯೋಗಿಗಳಿಲ್ಲ. ಇದು ಯುವ ಡಿಸೈನರ್ ಬೇಸರ ತರಿಸಿಲ್ಲ, ಬದಲಾಗಿ ಇದರ ಪ್ರಯೋಜನ ಏನು ಅನ್ನೋದು ವಿವರಿಸಿದ್ದಾನೆ. ಇದೀಗ ಈತನ ಮಾತಿಗೆ ಮಹಿಳಾ ಮಣಿಗಳು ಗರಂ ಆಗಿದ್ದರೆ, ಪುರುಷರ ಖುಷಿಯಲ್ಲಿ ತೇಲಾಡುತ್ತಿದ್ದಾರೆ.
ನವದೆಹಲಿ(ಮಾ.03) ಒಳ್ಳೆ ಆಫರ್, ಸ್ಯಾಲರಿ ಸೇರಿದಂತೆ ಹಲವು ಕಾರಣಗಳಿಂದ ಕೆಲಸ ಬದಲಾಯಿಸುತ್ತಾರೆ. ಹೀಗೆ ಯುವ ಗ್ರಾಫಿಕ್ಸ್ ಡಿಸನೈರ್ ಬೇರೆ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ. ಹೆಚ್ಆರ್ ಹೇಳಿದ ದಿನ ಕೆಲಸಕ್ಕೆ ಹಾಜರಾದಾಗ ಅಚ್ಚರಿಯಾಗಿದೆ. ಕಾರಣ ದೊಡ್ಡ ಕಚೇರಿಯಲ್ಲಿ ಒಬ್ಬರೇ ಒಬ್ಬ ಮಹಿಳಾ ಉದ್ಯೋಗಿ ಇಲ್ಲ. ಮೊದಲೇ ಯುವ ಗ್ರಾಫಿಕ್ಸ್ ಡಿಸೈನರ್ ಬೇಸರವಾಗದೇ ಇರದು. ಆದರೆ ಈ ಯುವ ಉದ್ಯೋಗಿಗೆ ಕಚೇರಿಯಲ್ಲಿ ಹುಡ್ಗೀರ್ ಇಲ್ಲಾ ಅನ್ನೋದು ಬೇಸರ ತರಿಸಿಲ್ಲ. ಬದಲಾಗಿ ಖುಷಿ ನೀಡಿದೆ. ಇದಕ್ಕೆ ಕಾರಣವನ್ನೂ ನೀಡಿದ್ದಾನೆ. ಆದರೆ ಈತನ ಕಾರಣ ಕೇಳಿ ಮಹಿಳೆಯರು ಗರಂ ಆಗಿದ್ದಾರೆ. ಆದರೆ ಪುರುಷುರ ಸಂಭ್ರಮದಲ್ಲಿದ್ದಾರೆ.
ದೆಹಲಿಯ ಅನುರಾಗ್ ಮೌರ್ಯ ಅನ್ನೋ ಯುವ ಗ್ರಾಪಿಕ್ಸ್ ಡಿಸೈನರ್ ಹೊಸ ಕಂಪನಿಗೆ ಸೇರಿಕೊಂಡಿದ್ದಾರೆ. ಮೊದಲ ದಿನ ಕಚೇರಿಗೆ ಫಾರ್ಮಲ್ ಡ್ರೆಸ್, ಹೊಸ ವಾಚ್, ಶೂ ಸೇರಿದಂತೆ ಫುಲ್ ಗೆಟಪ್‌ನಲ್ಲಿ ತೆರಳಿದ್ದಾರೆ. ಆದರೆ ಕಚೇರಿ ಒಳಹೊಕ್ಕ ಬಳಿಕ ಮಾನವ ಸಂಪಲನ್ಮೂಲ ಅಧಿಕಾರಿ ಎಲ್ಲರ ಪರಿಚಯ ಮಾಡಲು ಮುಂದಾಗಿದ್ದಾರೆ. ಈ ವಳೆ ಕಚೇರಿಯಲ್ಲಿನ ಉದ್ಯೋಗಿಗಳು ಆಗಮಿಸಿದ್ದಾರೆ. ಬಳಿಕ ಹೊಸದಾಗಿ ಕಂಪನಿಗೆ ಸೇರಿಕೊಂಡ ಅನುಗಾರ್ ಮೌರ್ಯ ಅವರನ್ನು ಪರಿಚಯಿಸಿದ್ದಾರೆ. ವಿಶೇಷ ಅಂದರೆ ಕಚೇರಿಯಲ್ಲಿ ಒಬ್ಬರೇ ಒಬ್ಬರು ಮಹಿಳಾ ಉದ್ಯೋಗಿಗಳಿಲ್ಲ.
ವಿಡಿಯೋ ಮೀಟಿಂಗ್‌ನಲ್ಲಿ ಕ್ಯಾಮೆರಾ ಆನ್ ಮಾಡಲು ಸೂಚಿಸಿದ ಬಾಸ್‌ಗೆ ಎದುರಾಯ್ತು ಶಾಕ್
ಸಾಮಾನ್ಯವಾಗಿ ಮೊದಲ ದಿನವೇ ಈ ವಿಚಾರ ಯುವ ಉದ್ಯೋಗಿಗಳಿಗೆ ಬೇಸರ ತರಿಸುವುದು ಸುಳ್ಳಲ್ಲ. ಆದರೆ ಅನುರಾಗ್ ಮೌರ್ಯಕ್ಕೆ ಯಾವುದೇ ಬೇಸರವಾಗಿಲ್ಲ. ತನ್ನ ಹೊಸ ಕಚೇರಿ, ಮೊದಲ ದಿನದ ಕುರಿತು ಎಕ್ಸ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮಾತುಗಳೇ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕೊನೆಗೂ ನಾನು ಮಹಿಳಾ ಉದ್ಯೋಗಿಗಳು ಇಲ್ಲದ ಕಚೇರಿಗೆ ಸೇರಿಕೊಂಡೆ. ನನ್ನ ಎಲ್ಲಾ ಸಹೋದ್ಯೋಗಿಗಳು 40 ಪ್ಲಸ್ ವಯಸ್ಸಿನವರು. ಇಲ್ಲಿ ಯಾವುದೇ ಡ್ರಾಮಾ ಇಲ್ಲ, ಯಾವುದೇ ರಾಜಕೀಯವಿಲ್ಲ. ಏನಿದ್ದರು ಅವರವರ ಕೆಲಸ ಅಷ್ಟೇ ಎಂದು ಟ್ವೀಟ್ ಮಾಡಿದ್ದಾನೆ. ಇದೇ ಮಾತು ಭಾರಿ ಚರ್ಚೆಯಾಗುತ್ತಿದೆ. ಕಾರಣ ಮಹಿಳೆಯರು ಈ ಗ್ರಾಫಿಕ್ಸ್ ಡಿಸೈನ್ ಮಾತಿಗೆ ಗರಂ ಆಗಿದ್ದಾರೆ. ಆದರೆ ಪುರುಷರು ಈ ಗ್ರಾಪಿಕ್ಸ್ ಡಿಸೈನ್ ಮಾತಿಗೆ ಧನಿಗೂಡಿಸಿದ್ದಾರೆ. ನಿಮ್ಮ ಕಚೇರಿಯಲ್ಲಿ ಕೆಲಸ ಕಾಲಿ ಇದ್ದರೆ ಹೇಳಿ ಎಂದು ಹಲವರು ಈತನ ಟ್ವೀಟ್‌ಗೆ ಕಮೆಂಟ್ ಮಾಡಿದ್ದಾರೆ. ಇದೀಗ ಕಚೇರಿಯಲ್ಲಿನ ರಾಜಕೀಯವೂ ಚರ್ಚೆಯಾಗುತ್ತಿದೆ. ಯಾರು ಹೆಚ್ಚು ರಾಜಕೀಯ ಮಾಡುತ್ತಾರೆ, ಯಾರು ಡ್ರಾಮ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಇದು ಯಾವ ಕಂಪನಿ? ಭಾರಿ ಯೋಚನೆ ಮಾಡಿ ಉದ್ಯೋಗಿಗಳ ನೇಮಕ ಮಾಡುತ್ತಿದೆ. ಈ ರೀತಿಯ ಕಂಪನಿಗಳು ಮತ್ತಷ್ಟು ಬೆಳೆಯಲಿ ಎಂದು ಹಲವರು ಆಶಿಸಿದ್ದಾರೆ. ಇದೇ ವೇಳೆ ಮಹಿಳೆಯರು ಇಲ್ಲದ ಕಂಪನಿ ತುಂಬಾ ಬೋರ್. ಇದಕ್ಕಿಂತ ಜೈಲಲ್ಲಿ ಇರಬಹುದು, ಅಲ್ಲೂ ಸಂಬಳ ಬರುತ್ತೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ವರ್ಕ್ ಫ್ರಮ್ ಕಾರ್, ಡ್ರೈವಿಂಗ್ ಜೊತೆ ಕೆಲಸ ಮಾಡಿದ ಬೆಂಗಳೂರು ಮಹಿಳೆಗೆ ಪೊಲೀಸರ ಉಡುಗೊರೆ
