ಬೆಂಗಳೂರು(ನ.05): ದೇಶಕ್ಕಾಗಿ ಮಡಿದ ವೀರ ಯೋಧರ ಹೆಸರು ಕೆತ್ತನೆ ಇರುವ ‘ವೀರಗಲ್ಲ’ನ್ನು ಸೋಮವಾರ ರಾಷ್ಟ್ರೀಯ ಮಿಲಿಟರಿ ಸ್ಮಾರಕದ ಆವರಣದಲ್ಲಿ ಪ್ರತಿಷ್ಠಾಪಿಸಲಾಯಿತು.

75 ಅಡಿ ಉದ್ದ, 14 ಮೀಟರ್‌ ಅಗಲ ಇರುವ ಸುಮಾರು 500 ಟನ್‌ ತೂಕದ ಈ ಏಕಶಿಲೆಯಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ 22,600 ವೀರಯೋಧರ ಹೆಸರುಗಳನ್ನು ಕೆತ್ತಿಸಲಾಗಿದೆ. ದೇವನಹಳ್ಳಿಯ ಕೊಯಿರಾ ಗ್ರಾಮದ ಬಳಿ ಶಿಲ್ಪಿಗಳಾದ ಮ್ಯಾಥ್ಯು ಮತ್ತು ಘೋಷ್‌ ಅವರಿಂದ ಈ ವೀರಗಲ್ಲನ್ನು ಕೆತ್ತಿಸಲಾಗಿದೆ.

‘ಕೋರ್ಟಲ್ಲಿ ಸಿ.ಡಿ ಸಾಕ್ಷಿ ಆಗಲ್ಲ ಎಂಬ ಜ್ಞಾನ ಇಲ್ಲ’

ಕಳೆದ ಜೂನ್‌ನಲ್ಲಿ ಈ ವೀರಗಲ್ಲನ್ನು ಟ್ರಕ್‌ನಲ್ಲಿ ಕೊಯಿರಾದಿಂದ ರಾಷ್ಟ್ರೀಯ ಸೈನಿಕ ಸ್ಮಾರಕ ಆವರಣಕ್ಕೆ ಸಾಗಿಸಲಾಗಿತ್ತು. ನಾನಾ ಕಾರಣಗಳಿಂದ ವೀರಗಲ್ಲು ಪ್ರತಿಷ್ಠಾಪನೆ ವಿಳಂಬವಾಗಿತ್ತು. ಸೋಮವಾರ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ದೊಡ್ಡ ಕ್ರೇನ್‌ಗಳ ಸಹಾಯದಿಂದ ಈ ವೀರಗಲ್ಲು ಪ್ರತಿಷ್ಠಾಪಿಸಿದರು.

ಸುಮ್ಮನಹಳ್ಳಿ ಮೇಲ್ಸೇತುವೆ ಗುಂಡಿ ಪರಿಶೀಲನೆಗೆ ಡ್ರೋನ್‌