ಆರಂಭದಲ್ಲಿದ್ದ ಪಾಲಿಕೆಯ ಉತ್ಸುಕತೆ ದಿನಕಳೆದಂತೆ ಇಳಿಕೆ ನಿತ್ಯ 40 ಸಾವಿರದಂತೆ 10 ದಿನದಲ್ಲಿ ನಗರದ ಎಲ್ಲ ಮಕ್ಕಳಿಗೆ ಲಸಿಕೆ ನೀಡಲು ಗುರಿ 15-18 ವರ್ಷದೊಳಗಿನ ಸುಮಾರು 4.42 ಲಕ್ಷ ಮಕ್ಕಳು
ಬೆಂಗಳೂರು(ಫೆ.03): ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ(Covid Vaccine) ನೀಡುವ ಅಭಿಯಾನ ಆರಂಭವಾಗಿ (ಜ.3)ತಿಂಗಳು ಕಳೆದರೂ ಶೇ.62ರಷ್ಟುಗುರಿ ಸಾಧಿಸಲಾಗಿದೆ. ಕೊರೋನಾ ಮೂರನೇ(Corona 3rd wave) ಅಲೆ ತೀವ್ರವಾದ ಕಾರಣದಿಂದ ಪಾಲಿಕೆ ನಿಗದಿತ ಗುರಿ ತಲುಪುವಲ್ಲಿ ಹಿಂದೆ ಬಿದ್ದಿದೆ.
ರಾಜ್ಯಾದ್ಯಂತ ಮಕ್ಕಳಿಗೆ ಲಸಿಕೆ ನೀಡುವ(Childrens Vaccination) ಅಭಿಯಾನಕ್ಕೆ ಜ.3ರಂದು ಚಾಲನೆ ದೊರೆತಿತ್ತು. ಇದರನ್ವಯ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಮೊದಲ ಡೋಸ್(First Dose) ಪಡೆಯಲು 15-18 ವರ್ಷದೊಳಗಿನ ಸುಮಾರು 4.42 ಲಕ್ಷ ಮಕ್ಕಳನ್ನು ಗುರುತಿಸಲಾಗಿತ್ತು. ಎಲ್ಲ ಲಸಿಕಾ ಕೇಂದ್ರಗಳ ಮೂಲಕ ನಿತ್ಯ 40 ಸಾವಿರ ಮಕ್ಕಳಂತೆ ಹತ್ತು ದಿನದಲ್ಲಿ ಎಲ್ಲ ಮಕ್ಕಳಿಗೆ ಲಸಿಕೆ ನೀಡಲು ಅಧಿಕಾರಿಗಳು ಯೋಜನೆ ರೂಪಿಸಿದ್ದರು.
Vaccine Drive ಕರ್ನಾಟಕದಲ್ಲಿ 100% ಮೊದಲ ಡೋಸ್, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ!
ಆದರೆ ನಗರದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ದಿಢೀರನೇ ಹೆಚ್ಚಾಗಿದ್ದರಿಂದ ಅಭಿಯಾನಕ್ಕೆ ಅಡ್ಡಿ ಉಂಟಾಯಿತು. ಇದೇ ವೇಳೆ ಸೋಂಕಿನ ಭೀತಿಯಿಂದಾಗಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡುವಂತೆ ಪೋಷಕರು ಪಟ್ಟು ಹಿಡಿದಿದ್ದರು. ನಂತರ ಆನ್‌ಲೈನ್ ತರಗತಿಗಳ ಆರಂಭದ ಜತೆಗೆ ಶಾಲಾ-ಕಾಲೇಜುಗಳು ಬಂದ್ ಆದವು. ಇದೇ ವೇಳೆ ಕೋವಿಡ್ ನಿಯಂತ್ರಣದಲ್ಲಿ ಮುಳುಗಿದ ಬಿಬಿಎಂಪಿ ಅಭಿಯಾನದತ್ತ ಅಷ್ಟಾಗಿ ಗಮನಹರಿಸಲಿಲ್ಲ. ಹೀಗಾಗಿ ಈವರೆಗೆ (ಫೆ.3ರವರೆಗೆ) 2,75,702 ಮಕ್ಕಳಿಗೆ (ಶೇ.62) ಮಾತ್ರ ಲಸಿಕೆ ನೀಡಲಾಗಿದ್ದು, ಮುಂದಿನ ವಾರದಲ್ಲಿ ನಿಗದಿತ ಗುರಿ ತಲುಪಲಿದ್ದೇವೆ ಎಂದು ಆರೋಗ್ಯಾಧಿಕಾರಿ ಬಾಲಸುಂದರ ಮಾಹಿತಿ ನೀಡಿದರು.
ಮಹದೇವಪುರ ವಲಯ ಮೊದಲು
ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಎಲ್ಲಿಯೂ ಉದ್ದೇಶಿತ ಶೇ.100ರಷ್ಟುಲಸಿಕಾಕರಣ ಸಾಧ್ಯವಾಗಿಲ್ಲ. ಈ ಪೈಕಿ ಈವರೆಗೆ ಶೇ.79ರಷ್ಟುಲಸಿಕಾಕರಣ ಮೂಲಕ ಮಹದೇವಪುರ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಪಶ್ಚಿಮ ವಲಯ ಶೇ.73 ಹಾಗೂ ಮೂರನೇ ಸ್ಥಾನದಲ್ಲಿ ದಾಸರಹಳ್ಳಿ ವಲಯದಲ್ಲಿ ಶೇ.71ರಷ್ಟುಮಕ್ಕಳಿಗೆ ಲಸಿಕೆ ನೀಡಲಾಗಿದೆ. ಕೊನೆಯ ಸ್ಥಾನದಲ್ಲಿರುವ ಯಲಹಂಕ ವಲಯದಲ್ಲಿ ಉದ್ದೇಶಿತ ಒಟ್ಟು ಮಕ್ಕಳ ಪೈಕಿ ಅರ್ಧದಷ್ಟುಮಕ್ಕಳಿಗೂ ಲಸಿಕೆ ನೀಡಲಾಗಿಲ್ಲ. ಇಲ್ಲಿ ಕೇವಲ ಶೇ.48ರಷ್ಟುಮಾತ್ರ ಲಸಿಕಾಕರಣ ನಡೆದಿದೆ.
Vaccine Drive in Karnataka: ಮಕ್ಕಳ ಲಸಿಕೆ, 3ನೇ ಡೋಸ್ ನಿಧಾನ: ವ್ಯಾಕ್ಸಿನ್ ಪಡೆಯಲು ಹಿಂದೇಟು..!
ಮೊದಲ ದಿನ 29 ಸಾವಿರ ಡೋಸ್ ನೀಡಿಕೆ
ಜ.3ರಂದು ಮೊದಲ ದಿನ ಮಕ್ಕಳಿಗೆ ಲಸಿಕೆ ನೀಡಿಕೆ ವೇಗವಾಗಿ ನಡೆದರೂ ನಂತರದ ದಿನಗಳಲ್ಲಿ ಕಡಿಮೆಯಾಯಿತು. ಅತೀ ಕಡಿಮೆ ಮಕ್ಕಳಿರುವ ವಲಯಗಳಲ್ಲೂ ಲಸಿಕೆ ನೀಡುವಲ್ಲಿ ಹಿಂದೆ ಬಿದ್ದಿದೆ. ಇದರ ನಡುವೆ ಕೊರೋನಾ ಹೆಚ್ಚಳ, ಸೇರಿದಂತೆ ಹಲವು ಅಡೆ ತಡೆಗಳು ಮಕ್ಕಳ ಲಸಿಕೆ ನೀಡುವಿಕೆಯಲ್ಲಿ ಹಿನ್ನಡೆ ತಂದಿತ್ತು. ಇದೀಗ ಲಸಿಕೆ ನೀಡುವಿಗೆ ವೇಗ ಹೆಚ್ಚಿಸಲು ಸೂಚಿಸಲಾಗಿದೆ.
ಕೊರೋನಾ 3ನೇ ಅಲೆ ವೇಳೆ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಅಷ್ಟಾಗಿ ಬರುತ್ತಿರಲಿಲ್ಲ. ನಂತರ ದಿಢೀರನೆ ಕೋವಿಡ್ ಸೋಂಕು ಹೆಚ್ಚಾದ್ದರಿಂದ ನಗರದಲ್ಲಿ ಶಾಲೆ-ಕಾಲೇಜುಗಳು ಸ್ಥಗಿತಗೊಂಡವು. ಹೀಗಾಗಿ ಅಂದುಕೊಂಡಷ್ಟುಲಸಿಕಾಕರಣ ಆಗಲಿಲ್ಲ. ಮುಂದಿನ ಐದಾರು ದಿನಗಳಲ್ಲಿ ಅಷ್ಟೂಮಕ್ಕಳಿಗೆ ಲಸಿಕೆ ನೀಡಲು ಬಿಬಿಎಂಪಿ ಕ್ರಮ ಕೈಗೊಳ್ಳಲಿದ್ದು, ಮಕ್ಕಳು ಹಾಗೂ ಪೋಷಕರು ಸಹಕರಿಸಬೇಕಿದೆ.
-ಗೌರವ್ ಗುಪ್ತಾ, ಮುಖ್ಯ ಆಯುಕ್ತರು, ಬಿಬಿಎಂಪಿ.
8 ವಲಯದ ಲಸಿಕಾಕರಣ ಸಾಧನೆ (ಜ.30ರವರೆಗೆ)
ವಲಯ ಗುರಿ ಸಾಧನೆ ಶೇ.ಸಾಧನೆ
ಬೊಮ್ಮನಹಳ್ಳಿ 42,980 28,299 66
ದಾಸರಹಳ್ಳಿ 19,791 14,066 71
ಪೂರ್ವ 79,340 41,624 52
ಮಹದೇವಪುರ 42,878 34,071 79
ಆರ್‌ಆರ್‌ನಗರ 40,519 25,355 63
ದಕ್ಷಿಣ 95,982 57,371 60
ಪಶ್ಚಿಮ 68,991 50,846 73
ಯಲಹಂಕ 50,655 24,130 48
ಶಂಕರ್.ಎನ್.ಪರಂಗಿ
ಕನ್ನಡಪ್ರಭ ವಾರ್ತೆ
