65 Acre Tree Park: ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿರುವ ಎನ್‌ಜಿಇಎಫ್‌ ಕಾರ್ಖಾನೆಯ 105 ಎಕರೆ ಜಾಗದಲ್ಲಿ, 65 ಎಕರೆ ವಿಸ್ತೀರ್ಣದಲ್ಲಿ ಬೃಹತ್ ವೃಕ್ಷೋದ್ಯಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಬೆಂಗಳೂರು: ನಗರದ ಬೈಯ್ಯಪ್ಪನಹಳ್ಳಿಯಲ್ಲಿನ ಸರ್ಕಾರಿ ಸ್ವಾಮ್ಯದ ಎನ್‌ಜಿಇಎಫ್‌ ಕಾರ್ಖಾನೆಗೆ ಸೇರಿದ 105 ಎಕರೆ ಜಾಗದಲ್ಲಿ 65 ಎಕರೆಯಲ್ಲಿ ವೃಕ್ಷೋದ್ಯಾನ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದ್ದು, ಮೊದಲ ಹಂತದ ವೃಕ್ಷೋದ್ಯಾನವನ್ನು ಮಾರ್ಚ್‌ ತಿಂಗಳಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಹೇಳಿದರು.

ಎನ್‌ಜಿಇಎಫ್‌ ಕಾರ್ಖಾನೆಗೆ ಶನಿವಾರ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ವೃಕ್ಷೋದ್ಯಾನ ಕಾಮಗಾರಿ ಪರಿಶೀಲಿಸಿ ನಂತರ ಮಾತನಾಡಿದರು, ವೃಕ್ಷೋದ್ಯಾನವನ್ನು 37.75 ಕೋಟಿ ರು. ವೆಚ್ಚದಲ್ಲಿ ನಾಲ್ಕು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಮೊದಲ ಹಂತದ ಕಾಮಗಾರಿ ಈಗಾಗಲೇ ಆರಂಭವಾಗಿದ್ದು ಮಾರ್ಚ್‌ ಅಂತ್ಯದೊಳಗೆ ಅದನ್ನು ಲೋಕಾರ್ಪಣೆ ಮಾಡಲಾಗುವುದು. ಎನ್‌ಜಿಇಎಫ್‌ ಕಾರ್ಖಾನೆ ಜಾಗದಲ್ಲಿ ಈಗಾಗಲೇ 8,500 ಬಗೆಯ ಮರಗಳಿದ್ದು, ಅವುಗಳನ್ನು ಉಳಿಸಿಕೊಂಡು ವೃಕ್ಷೋದ್ಯಾನ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

Scroll to load tweet…

4.5 ಎಕರೆ ಜಾಗದಲ್ಲಿ ಬಹುಮಹಡಿ ವಾಹನ ನಿಲುಗಡೆ ಕಟ್ಟಡ

ವೃಕ್ಷೋದ್ಯಾನದಲ್ಲಿ ಜಾಗತಿಕ ಮಟ್ಟದ ಶಿಲ್ಪಕಲೋದ್ಯಾನ, ಎನ್‌ಜಿಇಎಫ್‌ ವಸ್ತು ಸಂಗ್ರಹಾಲಯ, ಸುಸಜ್ಜಿತ ಆ್ಯಂಪಿ ಥಿಯೇಟರ್‌, 15 ಸಾವಿರ ಆಸನ ವ್ಯವಸ್ಥೆಯ 2 ಪ್ರತ್ಯೇಕ ಕನ್ವೆನ್ಷನ್‌ ಸೆಂಟರ್‌ ನಿರ್ಮಿಸಲಾಗುತ್ತದೆ. ಜತೆಗೆ ಇನ್ನೋವರ್ಸ್‌ ಹೆಸರಿನಲ್ಲಿ ನವೋದ್ಯಮ ಪರಿಪೋಷಣಾ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ಐಟಿ-ಬಿಟಿ ಇಲಾಖೆ 100 ಕೋಟಿ ರು. ವೆಚ್ಚದಲ್ಲಿ ಟೆಕ್ನಾಲಜಿ ಇನ್ನೋವೇಶನ್‌ ಮ್ಯೂಸಿಯಂ ಅಭಿವೃದ್ಧಿಪಡಿಸಲಿದೆ. ಇನ್ನು, ಎನ್‌ಜಿಇಎಫ್‌ ಕಾಂಪೌಂಡ್‌ ಹೊರಭಾಗದಲ್ಲಿನ ಕಾರ್ಖಾನೆಗೆ ಸೇರಿದ 4.5 ಎಕರೆ ಜಾಗದಲ್ಲಿ ಬಹುಮಹಡಿ ವಾಹನ ನಿಲುಗಡೆ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಆಯುಕ್ತೆ ಗುಂಜನ್‌ ಕೃಷ್ಣ, ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಡಾ. ಜೆ. ರವಿಶಂಕರ್‌, ಎಂಎಸ್‌ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್‌ಕುಮಾರ್‌, ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ವಿಶಾಲ್‌, ಐಟಿ-ಬಿಟಿ ಇಲಾಖೆ ಕಾರ್ಯದರ್ಶಿ ಡಾ. ಎನ್‌.ಮಂಜುಳಾ ಇತರರಿದ್ದರು.

ವೃಕ್ಷೋದ್ಯಾನದ ವಿಶೇಷತೆಗಳು

ಮೊದಲ ಹಂತದ ವೃಕ್ಷೋದ್ಯಾನದಲ್ಲಿ ಎಲಿವೇಟೆಡ್‌ ವಾಕ್‌ವೇ, ಸೈಕಲ್‌ ಪಥ, ಕಾರಂಜಿ, ಮಕ್ಕಳು ಆಟವಾಡಲು ವ್ಯವಸ್ಥೆ, ಸಾಕು ಪ್ರಾಣಿಗಳಿಗಾಗಿ ಜಾಗ ಸೇರಿದಂತೆ ಮೂಲಸೌಕರ್ಯ ವ್ಯವಸ್ಥೆ ಮಾಡಲಾಗುತ್ತದೆ.

ಫೇಸ್‌ 1ಬಿ ಅಡಿಯಲ್ಲಿ ಎಲಿವೇಟೆಡ್‌ ವಾಕ್‌-ವೇ, ವೀಕ್ಷಣಾ ಗೋಪುರ, ಎನ್‌ಜಿಇಎಫ್‌ನ ಆಡಳಿತ ಕಟ್ಟಡದ ನವೀಕರಣ, ಓಪನ್‌ ಆ್ಯಂಪಿ ಥಿಯೇಟರ್‌ ಅಭಿವೃದ್ಧಿಪಡಿಸಲಾಗುವುದು. ಫೇಸ್‌ 2ರಲ್ಲಿ ಎನ್‌ಜಿಇಎಫ್‌ ಕಾರ್ಖಾನೆಯ ಶೆಡ್‌ಗಳನ್ನು ಕ್ರೀಡಾ ಹಬ್‌, ಕಲೆ ಮತ್ತು ಸಾಂಸ್ಕೃತಿಕ ಕೇಂದ್ರ, ಸಮುದಾಯ ಭವನ, ಫುಡ್‌ಕೋರ್ಡ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

Scroll to load tweet…