ಸಾರ್ವಜನಿಕರ ನಿರಂತರ ಹೋರಾಟ ಮತ್ತು ಪತ್ರಿಕಾ ವರದಿಯ ಫಲವಾಗಿ ಕಮಲನಗರದಲ್ಲಿ ನಾಂದೇಡ-ಬೆಂಗಳೂರು ಎಕ್ಸ್‌ಪ್ರೆಸ್ ರೈಲು ನಿಲುಗಡೆ ಆರಂಭವಾಗಿದೆ. ಮತ್ತೊಂದೆಡೆ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆಗಳು ಸ್ಥಗಿತಗೊಂಡಿದೆ.
ಕಮಲನಗರ: ಕಮಲನಗರ ರೈಲು ನಿಲ್ದಾಣದಲ್ಲಿ ಎಕ್ಸಪ್ರೆಸ್ ರೈಲುಗಳ ನಿಲುಗಡೆಗೆ ಸಾರ್ವಜನಿಕರ ಆಗ್ರಹ ಅಲ್ಲದೇ ಕಳೆದ ಸೆ.22ರಂದು ಕನ್ನಡಪ್ರಭ ಪತ್ರಿಕೆ ವರದಿ ಮಾಡಿದ ಪರಿಣಾಮ ಜನವರಿ 1ರಿಂದ ನಾಂದೇಡ-ಬೆಂಗಳೂರು ರೈಲು ನಿಲುಗಡೆಗೆ ಗ್ರಿನ್ ಸಿಗ್ನಲ್ ಸಿಕ್ಕಿದೆ. ಆದಾಯ ನಷ್ಟದ ಕಾರಣ ನೀಡಿ ರೈಲುಗಳ ನಿಲುಗಡೆ ರದ್ದುಗೊಳಿಸಿದ್ದರಿಂದ ಕಮಲನಗರದಿಂದ ಹಾದು ಹೋಗುವ ಎಕ್ಸಪ್ರೆಸ್ ರೈಲು ನಿಲ್ಲುತ್ತಿದ್ದಿಲ್ಲ. ಕಳೆದ ಸೆ.22ರಂದು ಸುದ್ದಿ ಪ್ರಕಟಿಸಿದಕ್ಕೆ ದಕ್ಷಿಣ ಮಧ್ಯ ರೈಲ್ವೆಯ ಸಿಕಿಂದ್ರಾಬಾದ್ ಉಪವಿಭಾಗದ ರೇಲ್ವೇ ವ್ಯವಸ್ಥಾಪಕರಾದ ಆರ್.ಗೋಪಾಲಕೃಷ್ಣ ಕಮಲನಗರ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಹಾಗೂ ವಿವಿಧ ಸಂಘಟನೆಗಳಿಂದ ಮನವಿ ಸ್ವೀಕರಿಸಿದರು.
ಅಲ್ಲದೇ ಡಿ.24ರಂದು ಮತ್ತೊಮ್ಮೆ ಕನ್ನಡ ಪ್ರಭದ ವರದಿಯ ಆಧಾರದ ಮೇಲೆ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಮನವಿ ಸ್ವೀಕರಿಸಿ ಆದಷ್ಟು ಬೇಗ ರೈಲುಗಳ ನಿಲುಗಡೆಗೆ ಮೇಲಾಧಿಕಾರಿಗಳಿಗೆ ಮನವಿ ಮಾಡುತ್ತೆನೆ ಎಂದು ಭರವಸೆ ನೀಡಿದರು.
ನಾಂದೇಡ-ಬೆಂಗಳೂರು ರೈಲು ನಿಲ್ಲಿಸಿದ್ದಕ್ಕೆ ಸಂಭ್ರಮ
ವಿವಿಧ ಸಂಘಟನೆ ಹಾಗೂ ಸಾರ್ವಜನಿಕರಿಗೆ ಶ್ರಮದ ಫಲ ಅಲ್ಲದೇ ಪತ್ರಿಕೆಯ ನಿರಂತರ ಸುದ್ದಿಯಿಂದಾಗಿ 2026ರ ನೂತನ ವರ್ಷದ ಪ್ರಥಮ ದಿನವಾದ ಜ.01 ರಿಂದ ನಾಂದೇಡ-ಬೆಂಗಳೂರು ರೈಲು ನಿಲ್ಲಿಸಿದ್ದಕ್ಕೆ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ರೈಲಿನ ಚಾಲಕರಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ನೂತನ ತಾಲೂಕು ಹೊರಾಟ ಸಮಿತಿಯ ಅಧ್ಯಕ್ಷ ಬಾಲಾಜಿ ತೆಲಂಗೆ, ಗೌರವಾಧ್ಯಕ್ಷ ಎಸ್.ಎನ್.ಶಿವಣಕರ, ಯಶವಂತ ಬಿರಾದಾರ, ಸುರೇಶ ಚಾಂಗುಣೆ, ಮಂಜುನಾಥ ಸ್ವಾಮಿ, ಗುಂಡಪ್ಪಾ ದಾನಾ, ಬಾಲಾಜಿ ಗಾಯಕವಾಡ, ಮಹೇಶ ಸಜ್ಜನ, ಸಂತೊಷ ಸುಲಾಖೆ, ಬಾಲಾಜಿ ವಡೆಯರ್, ಅಶೋಕ ಸಂಗಮೆ, ಶ್ರೀರಾಮ ಕಾಂಬಳೆ ಹಾಗೂ ಅನೇಕ ಗ್ರಾಮದ ಸಾರ್ವಜನಿಕರು ಹಾಜರಿದ್ದರು. ವಿವಿಧ ಸಂಘಟನೆಗಳು, ಸಾರ್ವಜನಿಕರ ಪತ್ರಿಕೆಗಳ ನಿರಂತರ ಪ್ರಯತ್ನಕ್ಕೆ ಮನ್ನಿಸಿ ಗುರುವಾರದಿಂದ ರೈಲುಗಳು ನಿಲ್ಲಿಸಲು ತಿರ್ಮಾನ ಕೈಗೊಂಡಿದ್ದು ಪ್ರಥಮವಾಗಿ ನಾಂದೇಡ-ಬೆಂಗಳೂರು (16593-16594) ಕಮಲನಗರ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಿದ್ದು ಸಾರ್ವಜನಿಕರಲ್ಲಿ ಸಂಭ್ರಮ ಉಂಟು ಮಾಡಿದೆ.
ವಿಮಾನ ಮತ್ತೆ ಆರಂಭಕ್ಕೆ ಒತ್ತಡ
ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ನಗರ ಕಲಬುರ್ಗಿ ಜಿಲ್ಲೆಯ ಜನತೆಯ ದಶಕಗಳ ಕನಸಾಗಿದ್ದ ವಿಮಾನ ನಿಲ್ದಾಣ ಸ್ಥಾಪನೆ ₹175 ಕೋಟಿ ವೆಚ್ಚದಲ್ಲಿ 2008 ಜೂನ್ 18ರಂದು ಅಡಿಗಲ್ಲು ಹಾಕಿ 2019 ನವೆಂಬರ್ 22ರಂದು ಉದ್ಘಾಟಿಸಲಾಯಿತು. ಆರಂಭದಲ್ಲಿ ಜಿಲ್ಲೆಯ ಜನತೆಗೆ ಒಂದು ಉತ್ತಮ ವಿಮಾನ ಸೇವೆಯನ್ನು ದೊರಕಿಸಿ ಕೊಡುವುದರಲ್ಲಿ ಸಹಕಾರಿಯಾಗಿತ್ತು. ಆದರೆ ಬೆಂಗಳೂರು ಹಾಗೂ ತಿರುಪತಿಗೆ ವಿಮಾನ ಸೇವೆಯನ್ನು ನೀಡುತ್ತಿದ್ದ ಸ್ಪಾರ್ ಏರ್ ಹಾಗೂ ಏರ್ ಇಂಡಿಯಾ ವಿಮಾನ ಕಂಪನಿಗಳು ಕಾಲ ಕ್ರಮೇಣವಾಗಿ ಸೇವೆಯನ್ನು ಸ್ಥಗಿತಗೊಳಿಸಿವೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಕಲಬುರ್ಗಿ ಜನತೆಯು ವಿಮಾನಸೇವೆಯಿಂದ ವಂಚಿತರಾಗಿರುವುದು, ಮಾತ್ರವಲ್ಲದೆ 175. ಕೋಟಿ ವೆಚ್ಚ ಮಾಡಿದ ಈ ಕಾಮಗಾರಿ ಯೋಜನೆಯು ನಿಷ್ಪ್ರಯೋಜಕವಾಗಿದೆ.
2022-23ನೇ ಸಾಲಿನಲ್ಲಿ 1.994 ವಿಮಾನಗಳು ಹಾರಾಟವಾಗಿದ್ದು, ಆ ವರ್ಷ 79.143 ಜನರು ಪ್ರಯಾಣ ಮಾಡಿದ್ದರು. 2023-2400 1,641 ವಿಮಾನ ಹಾರಾಟ ನಡೆಸಿದ್ದು, ಆಗ 54,862 ಜನರು ಪ್ರಯಾಣ ಮಾಡಿದ್ದರು. ತದನಂತರ 2024-25 ರಲ್ಲಿ 855 ವಿನಾನ ಹಾರಾಟವಾಗಿ 30.924 ಪ್ರಯಾಣಿಕರು ಪ್ರಯಾಣಿಸಿದ್ದು ಪ್ರಸ್ತುತ 2025-26 ನೇ ಸಾಲಿನಲ್ಲಿ ಎಪ್ರೀಲ್ ನಿಂದ ಜೂನ್ ವರೆಗೆ ಕೇವಲ 206 ವಿಮಾನ ಹಾರಾಟವಾಗಿ 7115 ಪ್ರಯಾಣಿಕರು ಮಾತ್ರ ಪ್ರಯಾಣಿಸಿದ್ದಾರೆ.
ವೈಮಾನಿಕ ಸೇವೆ ಸ್ಥಗಿತದಿಂದ ಜಿಲ್ಲೆಯಿಂದ ಬೆಂಗಳೂರಿಗೆ ಇದ್ದ ಏಕಮಾತ್ರ ವಿಮಾನ ಸೇವೆಯು ಸಂಪೂರ್ಣವಾಗಿ ಸ್ಥಗಿತವಾಗಿದೆ. ಮಧ್ಯೆ ಉಡಾನ್ ಯೋಜನೆ ಅಡಿಯಲ್ಲಿ ಸ್ಪಾರ್ ಏರ್ ಸಂಸ್ಥೆಯು ಬೀದರ್, ಶಿವಮೊಗ್ಗ ಹಾಗೂ ನಾಂದೇಡ್ ನಗರಗಳಿಗೆ ಹೊಸ ಮಾರ್ಗ ಮಂಜೂರಾಗಿದ್ದು ಈ ಹಿಂದೆ ಕಲಬುರ್ಗಿಗೆ ಬಳಕೆಯಾಗುತ್ತಿದ್ದ ಆ ಸಂಸ್ಥೆಯ ವಿಮಾನವನ್ನು ನಾಂದೇಡ್ ಮಾರ್ಗಕ್ಕೆ ಬಳಕೆ ಮಾಡಲು ಒತ್ತಾಯ.


