ಬೆಂಗಳೂರಿನ ನಿವಾಸಿಯೊಬ್ಬರು ಆನ್‌ಲೈನ್ ಮೂಲಕ ಖರೀದಿಸಿದ್ದ ಪ್ರೋಟೀನ್ ಬಾರ್‌ನಲ್ಲಿ ಜೀವಂತ ಹುಳು ಪತ್ತೆಯಾಗಿದೆ. ಈಗಾಗಲೇ ಆರು ಬಾರ್‌ಗಳನ್ನು ಸೇವಿಸಿದ್ದ ಇವರು, ಏಳನೇ ಕವರ್ ತೆರೆದಾಗ ಈ ಆಘಾತಕಾರಿ ದೃಶ್ಯ ಕಂಡಿದ್ದಾರೆ. ಈ ಬಗ್ಗೆ ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಆರೋಗ್ಯ ಇಲಾಖೆಯ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬೆಂಗಳೂರು (ಅ.23): ನಗರದ ನಿವಾಸಿಯೊಬ್ಬರು ಇ-ಕಾಮರ್ಸ್ ವೆಬ್‌ಸೈಟ್ ಮೂಲಕ ಖರೀದಿಸಿದ್ದ ಪ್ರೋಟೀನ್ ಬಾರ್‌ನಲ್ಲಿ ಜೀವಂತ ಹುಳು ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.
ಕೊಮ್ಮಘಟ್ಟ ನಿವಾಸಿ ಶಿವನಾಗ್ ಅವರು, ಅಮೆಜಾನ್ ಮೂಲಕ ಆರ್ಡರ್ ಮಾಡಿ ಅ.7ರಂದು ತರಿಸಿಕೊಂಡಿದ್ದ ರೈಟ್ ಬೈಟ್ ಹೆಸರಿನ ಪ್ರೊಟೀನ್ ಬಾರ್‌ನಲ್ಲಿ ಬಿಳಿ ಬಣ್ಣದ ಹುಳು ಕಾಣಿಸಿಕೊಂಡಿದೆ. ಈ ಕುರಿತು ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಸಹಿತ ಪೋಸ್ಟ್ ಮಾಡಿರುವ ಶಿವನಾಗ್, ಆರೋಗ್ಯ ಇಲಾಖೆ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಈಗಾಗಲೇ 6 ಪ್ರೊಟೀನ್ ಬಾರ್ ಸೇವಿಸಿದ್ದ ವ್ಯಕ್ತಿ
ಒಟ್ಟು 12 ಪ್ರೊಟೀನ್ ಬಾರ್‌ಗಳನ್ನು ಖರೀದಿಸಿದ್ದೆ. ಅದರಲ್ಲಿ ಆರು ಸೇವಿಸಿದ್ದೇನೆ. ಗುರುವಾರ ಮತ್ತೊಂದು ಬಾರ್ ತಿನ್ನಲೆಂದು ಕವರ್ ತೆರೆದ ಕೂಡಲೇ ಬಿಳಿ ಹುಳು ಕಾಣಿಸಿಕೊಂಡಿತು. ಈ ಕುರಿತು ಪ್ರೋಟೀನ್ ಬಾರ್ ಕಂಪನಿಗೆ ದೂರು ನೀಡಿದ್ದೇನೆ. ಅಲ್ಲದೇ, ನನ್ನಂತೆಯೇ ಬೇರೆಯವರು ಕೂಡ ಹುಳು ಬಂದಿರುವ ಕುರಿತು ಪೋಸ್ಟ್ ಮಾಡಿದ್ದಾರೆ. ಹುಳು ಬಂದಿರುವ ಪ್ರೋಟೀನ್ ಬಾರ್ ಆಗಸ್ಟ್‌ನಲ್ಲಿ ಮ್ಯಾನುಫ್ಯಾಕ್ಚರಿಂಗ್ ಆಗಿದ್ದು, 2027ರ ಆಗಸ್ಟ್‌ವರೆಗೂ ಅವಧಿ ಇದೆ ಶಿವನಾಗ್ ತಿಳಿಸಿದರು.

