ಬೆಂಗಳೂರಿನಲ್ಲಿ ನಡೆಯುತ್ತಿರುವ ಟಿಸಿಎಸ್ ವರ್ಲ್ಡ್‌ 10ಕೆ ಮ್ಯಾರಥಾನ್‌ ಕಾರಣಕ್ಕೆ ಇಂದು ನಗರದ ವಿವಿಧ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. 

ಬೆಂಗಳೂರು:ಬೆಂಗಳೂರಿನಲ್ಲಿ ನಡೆಯುತ್ತಿರುವ ಟಿಸಿಎಸ್ ವರ್ಲ್ಡ್‌ 10ಕೆ ಮ್ಯಾರಥಾನ್‌ ಕಾರಣಕ್ಕೆ ಇಂದು ನಗರದ ವಿವಿಧ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಹಲವು ರಸ್ತೆಗಳಲ್ಲಿ ತೀವ್ರವಾದ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ. ಟಿಸಿಎಸ್‌ನ ವಿಶ್ವ 10 ಕಿಲೋ ಮೀಟರ್‌ ಮ್ಯಾರಾಥಾನ್‌ನಲ್ಲಿ 30 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ಹೀಗಾಗಿ ಬೆಂಗಳೂರು ಸಂಚಾರ ಪೊಲೀಸರು ಸಂಚಾರ ಮಾರ್ಗದಲ್ಲಿ ಹಲವು ಬದಲಾವಣೆ ಮಾಡಿದ್ದಾರೆ.

ಈ ಮ್ಯಾರಥಾನ್ ಕಾರಣಕ್ಕೆ ಭಾಸ್ಕರನ್ ರಸ್ತೆ - ಕಾಮಧೇನು ಜಂಕ್ಷನ್ - ಗುರುದ್ವಾರ ಜಂಕ್ಷನ್ - ಕೆನ್ಸಿಂಗ್ಟನ್ ಜಂಕ್ಷನ್ - ಹಲಸೂರು ರಸ್ತೆ ಮತ್ತು ಡಿಕೆನ್ಸನ್ ರಸ್ತೆಯಿಂದ ಬೇಗಂ ಮಹಲ್ ಜಂಕ್ಷನ್, ಗಂಗಾಧರ ಚೆಟ್ಟಿ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ಈ ಎಲ್ಲಾ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.

ಹೀಗಾಗಿ ಈ ಕೆಳಗೆ ಉಲ್ಲೇಖಿಸಿದ ರಸ್ತೆಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕಿಂಗ್ ಮಾಡುವುದಕ್ಕೆ ನಿಷೇಧ ಹೇರಲಾಗಿದೆ.
ವಾರ್ ಮೆಮೋರಿಯಲ್ ಜಂಕ್ಷನ್, ಅಣ್ಣಸ್ವಾಮಿ ಮುದಲಿಯಾರ್ ರಸ್ತೆ, ಸೇಂಟ್ ಜಾನ್ಸ್ ಚರ್ಚ್ ರಸ್ತೆ, ಅಸ್ಸಾಯೆ ರಸ್ತೆ, ವೀಲರ್ ರಸ್ತೆ, ಅಜಂತಾ ರಸ್ತೆ, ಕಾಮರಾಜ್ ರಸ್ತೆ, ಕಸ್ತೂರ್ಬಾ ರಸ್ತೆ (ಹಡ್ಸನ್ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ),
ಎಂಜಿ ರಸ್ತೆ (ಕ್ವೀನ್ಸ್ ವೃತ್ತದಿಂದ ವೆಬ್ಸ್ ಜಂಕ್ಷನ್ ವರೆಗೆ ಎರಡೂ ಬದಿಗಳಲ್ಲಿ), 
ಡಿಕೆನ್ಸನ್ ರಸ್ತೆ (ವೆಬ್ಸ್ ಜಂಕ್ಷನ್ ನಿಂದ ಹಲಸೂರು ರಸ್ತೆಗೆ), 
ಕಬ್ಬನ್ ರಸ್ತೆ (ಮಣಿಪಾಲ್ ಸೆಂಟರ್ ನಿಂದ ಸಿಟಿಒ ವೃತ್ತದವರೆಗೆ), 
ಸೆಂಟ್ರಲ್ ಸ್ಟ್ರೀಟ್, ಕ್ವೀನ್ಸ್ ರಸ್ತೆ (ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ), 
ರಾಜಭವನ ರಸ್ತೆ (ಸಿಟಿಒ ವೃತ್ತದಿಂದ ರಾಜಭವನ ಜಂಕ್ಷನ್ ವರೆಗೆ), 
ಇನ್ಫೆಂಟ್ರಿ ರಸ್ತೆ (ರಾಜಭವನ ವೃತ್ತದಿಂದ ಟ್ರಾಫಿಕ್ ಹೆಡ್ಕ್ವಾರ್ಟರ್ಸ್ ಜಂಕ್ಷನ್ ವರೆಗೆ), 
ಅಂಬೇಡ್ಕರ್ ವೀಧಿ (ಕೆ ಆರ್ ವೃತ್ತದಿಂದ ಬಾಳೇಕುಂದ್ರಿ ವೃತ್ತದವರೆಗೆ), 
ಕಬ್ಬನ್ ಪಾರ್ಕ್ ಒಳಗೆ ಮತ್ತು ಸುತ್ತಮುತ್ತಲಿನ ರಸ್ತೆಗಳು, ವೈದೇಹಿ ಆಸ್ಪತ್ರೆ ರಸ್ತೆ ಮತ್ತು ಆರ್ ಆರ್ ಎಂ ಆರ್ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಮೈಸೂರು ರಸ್ತೆಯಿಂದ ಎಂಜಿ ರಸ್ತೆ ಅಥವಾ ಹಳೆ ಮದ್ರಾಸ್ ರಸ್ತೆ ಕಡೆಗೆ ನಗರ ಪ್ರವೇಶಿಸುವ ಭಾರೀ ಸರಕು ವಾಹನಗಳು ಹಡ್ಸನ್ ವೃತ್ತದಲ್ಲಿ ಬಲ ತಿರುವು ಪಡೆದು ದೇವಾಂಗ ರಸ್ತೆ, ದೇವಾಂಗ ಜಂಕ್ಷನ್, ಮಿಷನ್ ರಸ್ತೆ, ರಿಚ್ಮಂಡ್ ಫ್ಲೈಓವರ್, ರೆಸಿಡೆನ್ಸಿ ರಸ್ತೆ, ಒಪೇರಾ ಜಂಕ್ಷನ್, ಮೇಯೊ ಹಾಲ್, ಕಮಿಷರಿಯಟ್ ರಸ್ತೆ, ಗರುಡ ಮಾಲ್ ಮತ್ತು ಹೊಸ್ಮತ್ ಆಸ್ಪತ್ರೆ ಮೂಲಕ ಸಾಗಬೇಕು.

ಬಳ್ಳಾರಿ ರಸ್ತೆ ಮತ್ತು ಮೆಕ್ರಿ ರಸ್ತೆಯಿಂದ ನಗರ ಪ್ರವೇಶಿಸುವ ವಾಹನಗಳು ಹಳೆ ಉದಯ ಟಿವಿ ಕಚೇರಿ ಜಂಕ್ಷನ್ ಮೂಲಕ ನೃಪತುಂಗ ರಸ್ತೆ-ಹಡ್ಸನ್ ರಸ್ತೆಗೆ ಹೋಗಬಹುದು. ಹಳೆ ಮದ್ರಾಸ್ ರಸ್ತೆ ಮತ್ತು ವರ್ತೂರು ರಸ್ತೆಯಿಂದ ನಗರ ಪ್ರವೇಶಿಸುವ ವಾಹನಗಳು ಸುರಂಜನ್ ದಾಸ್ ರಸ್ತೆ ಮೂಲಕ ಹಳೆ ವಿಮಾನ ನಿಲ್ದಾಣ ರಸ್ತೆಗೆ ಹೋಗಬಹುದು. 
ಅದೇ ರೀತಿ, ಹಲಸೂರು ಸರೋವರದಿಂದ ಪ್ರವೇಶಿಸುವ ವಾಹನಗಳು ಸೇಂಟ್ ಜಾನ್ಸ್ ರಸ್ತೆ ಮೂಲಕ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಮತ್ತು ಜಯಮಹಲ್ ರಸ್ತೆ ಮೂಲಕ ಮೆಕ್ರಿ ವೃತ್ತಕ್ಕೆ ಹೋಗಬಹುದು.

ಇದನ್ನೂ ಓದಿ: 

ಈ ಮ್ಯಾರಥಾನ್‌ನಲ್ಲಿ ಭಾಗವಹಿಸುವವರು ತಮ್ಮ ವಾಹನಗಳನ್ನು ಯುಬಿ ಸಿಟಿ, ಫ್ರೀಡಂ ಪಾರ್ಕ್ ಬಹುಮಹಡಿ ಕಾರ್ ಪಾರ್ಕಿಂಗ್, ಗರುಡ ಮಾಲ್, 1 ಎಂಜಿ-ಲಿಡೋ ಮಾಲ್, ಎಜಿಎಸ್ ಜಂಕ್ಷನ್ ಮತ್ತು ಎಂಎಸ್ ಬಿಲ್ಡಿಂಗ್‌ನಲ್ಲಿ ನಿಲ್ಲಿಸಬಹುದು, ಆದರೆ ಮಾಧ್ಯಮದವರು ಮಣಿಪಾಲ ಕೇಂದ್ರದಲ್ಲಿ, ಆಹ್ವಾನಿತರು ಸ್ವಾಗತ ಚಿತ್ರಮಂದಿರದಲ್ಲಿ ಮತ್ತು ಹಿರಿಯ ನಾಗರಿಕರು ಮತ್ತು ಬಸ್‌ಗಳು ಕಾಮರಾಜ್ ರಸ್ತೆಯ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ನಿಲ್ಲಿಸಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಕುರುಡರ ನಗರಿಯಲ್ಲಿ ನಾನು ಕನ್ನಡಿಗಳನ್ನು ಮಾರುತ್ತೇನೆ: ಅನಿರುದ್ಧ

Scroll to load tweet…