ಬೆಂಗಳೂರು(ನ.11): ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಭಾನುವಾರ ರಾಜಧಾನಿಯಲ್ಲಿ ನಡೆದ ಸಹೋದರ ಸತ್ಯನಾರಾಯಣ ಅವರ ಮಗಳ ಪುತ್ರನ ವಿವಾಹದಲ್ಲಿ ಭಾಗವಹಿಸಿದ್ದರು.

ನಗರದ ಶಂಕರನಗರದ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆದ ಪ್ರಶಾಂತ್ ಚವ್ಹಾಣ್ ಹಾಗೂ ವೈಷ್ಣವಿ ಕೇಸರ್‌ಕರ್ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿ ತೆರಳಿದ್ದಾರೆ.

ಬಿಜೆಪಿಯಿಂದ ನನಗೆ ಕೇಸರಿ ಬಣ್ಣ ಬಳಿಯುವ ಹುನ್ನಾರ: ತಲೈವಾ ಆರೋಪಕ್ಕೆ ಕಮಲ ತತ್ತರ!

ನೆಚ್ಚಿನ ನಟನನ್ನು ನೋಡಲು ಕಲ್ಯಾಣ ಮಂಟಪದ ಬಳಿ ಭಾರೀ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ರಜನಿಕಾಂತ್ ಆಗಮನವಾಗುತ್ತಿದ್ದಂತೆ ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ರಜನಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಅಭಿಷೇಕ್ ಚಿತ್ರದಲ್ಲಿ ಭಿಕ್ಷುಕನ ಪಾತ್ರ ಮಾಡಲು ರಜನಿಕಾಂತ್ ಸೈ!