ಲೇಡಿ‌ ರೌಡಿ ಶ್ರೀರಾಮಸೇನೆ ಅಧ್ಯಕ್ಷ ಸ್ಥಾನದಿಂದ ವಜಾ|ರೌಡಿಶೀಟರ್ ಯಶಸ್ವಿನಿಗೌಡಳನ್ನ ಆದ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಿದ ಸಂಘಟನೆ|ಶ್ರೀರಾಮ ಸೇನೆ ಬೆಂಗಳೂರು ನಗರ ಅಧ್ಯಕ್ಷಳಾಗಿದ್ದ ಯಶಸ್ವಿನಿ ಗೌಡ

ಬೆಂಗಳೂರು, [ಅ.24]: ರೌಡಿಶೀಟರ್ ಯಶಸ್ವಿನಿ ಗೌಡಳನ್ನ ಶ್ರೀರಾಮಸೇನೆ ಸಂಘಟನೆಯಿಂದ ಹೊರಗಟ್ಟಲಾಗಿದೆ. ಭಾರೀ ಟೀಕೆಗಳು ವ್ಯಕ್ತವಾಗುತ್ತಿರು ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ಬೆಂಗಳೂರು ನಗರ ಘಟಕದ ಅಧ್ಯಕ್ಷಳಾಗಿದ್ದ ಯಶಸ್ವಿನಿ ಗೌಡಳನ್ನು ಕೊನೆಗೂ ಅಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ರಾಮ'ಸೇನೆಯಲ್ಲಿ ಲೇಡಿ ರೌಡಿಶೀಟರ್‌ಗೆ ಧರ್ಮ ರಕ್ಷಣೆಯ ಹೊಣೆ!

ಅಕ್ರಮ ಚಟುವಟಿಕೆ ಹಿನ್ನೆಲೆಯಲ್ಲಿ ಯಶಸ್ವಿನಿ ಗೌಡ ವಿರುದ್ಧ ಬೆಂಗಳೂರು ಪೊಲೀಸರು ರೌಡಿಶೀಟ್​ ತೆಗೆದಿದ್ದರು. ಇದರಿಂದ ಸಂಘಟನೆ ಭಾರೀ ಮುಜುಗರ ಅನುಭವಿಸುವಂತಾಗಿತ್ತು. 

 ಶ್ರೀರಾಮಸೇನೆ ರಾಜ್ಯ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರು ಯಶಸ್ವಿನಿ ಗೌಡಳನ್ನ ವಜಾಗೊಳಿಸಿ ಇಂದು [ಗುರುವಾರ] ಆದೇಶ ಹೊರಡಿಸಿದ್ದಾರೆ. ಶ್ರೀರಾಮ ಸೇನೆ ತಡವಾಗಿ ಕ್ರಮಕೈಗೊಂಡರು ದಿಟ್ಟ ನಿರ್ಧಾರ ಕೈಗೊಂಡಿದೆ.

ಬುಲೆಟ್ ರಾಣಿ, ಲೇಡಿ ರೌಡಿಯ ‘ರಾಮರಾಜ್ಯ’! 

ಶ್ರೀರಾಮ ಸೇನೆ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿದ್ದ ಯಶಸ್ವಿನಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದಳು. ಅಷ್ಟೇ ಅಲ್ಲದೇ ಈಕೆಯ ವಿರುದ್ಧ ಬೆದರಿಕೆ ಹಾಗೂ ಸುಲಿಗೆ ಪ್ರಕರಣಗಳು ದಾಖಲಾಗಿವೆ.