ಮಣ್ಣಿನ ಉಳಿವಿಗಾಗಿ ಉದ್ಯಾನನಗರಿಯಲ್ಲಿ ಸದ್ಗುರು ಬೃಹತ್ ಬೈಕ್ ಜಾಥಾ
ಇಂದು ವಿಶ್ವ ಮಣ್ಣಿನ ದಿನಾಚರಣೆ ಹಿನ್ನೆಲೆ, ಕಳೆದ ಹಲವಾರು ತಿಂಗಳುಗಳಿಂದ ದೇಶವಿದೇಶಗಳಲ್ಲಿ ಮಣ್ಣಿನ ಕುರಿತು ಅಭಿಯಾನ ನಡೆಸಿದ್ದ ಸದ್ಗುರು ಜಗ್ಗಿ ವಾಸುದೇವ್ ಈಗ ಉದ್ಯಾನನಗರಿ ಬೆಂಗಳೂರಿಗೆ ಆಗಮಿಸಿದ್ದು, ಇಂದು ಇಲ್ಲೂ ಬೈಕ್ ಜಾಥಾ ನಡೆಸುತ್ತಿದ್ದಾರೆ.
ಬೆಂಗಳೂರು: ಇಂದು ವಿಶ್ವ ಮಣ್ಣಿನ ದಿನಾಚರಣೆ ಹಿನ್ನೆಲೆ, ಕಳೆದ ಹಲವಾರು ತಿಂಗಳುಗಳಿಂದ ದೇಶವಿದೇಶಗಳಲ್ಲಿ ಮಣ್ಣಿನ ಕುರಿತು ಅಭಿಯಾನ ನಡೆಸಿದ್ದ ಸದ್ಗುರು ಜಗ್ಗಿ ವಾಸುದೇವ್ ಈಗ ಉದ್ಯಾನನಗರಿ ಬೆಂಗಳೂರಿಗೆ ಆಗಮಿಸಿದ್ದು, ಇಂದು ಇಲ್ಲೂ ಬೈಕ್ ಜಾಥಾ ನಡೆಸುತ್ತಿದ್ದಾರೆ. ಹೆಬ್ಬಾಳದಿಂದ ಆರಂಭಿಸಿ ವಿಠಲ್ ಮಲ್ಯ ರಸ್ತೆಯಲ್ಲಿನ ಖಾಸಗಿ ಹೊಟೇಲ್‌ವರೆಗೂ ಈ ಬೈಕ್ ಜಾಥಾ ಸಾಗಿ ಬಂದಿದೆ.
ಹೆಬ್ಬಾಳ ಪೊಲೀಸ್ ಠಾಣೆ (Hebbala Police Station) ಸಮೀಪದಿಂದ ಆರಂಭವಾದ ಬೈಕ್ ಜಾಥಾ ಪ್ಯಾಲೇಸ್ ಗ್ರೌಂಡ್ ದಾರಿಯಲ್ಲಿ ಬಂದು ವಿಂಡ್ಸರ್ ಮ್ಯಾನರ್ ಬ್ರಿಡ್ಜ್ (Windsor Manor Bridge), ಕುಮಾರಕೃಪಾ ರಸ್ತೆ (Kumarakrupa Road), ಬೆಂಗಳೂರು ಗಾಲ್ಫ್ ಕೋರ್ಸ್ ರಸ್ತೆ , ರೇಸ್ ಕೋರ್ಸ್ ರಸ್ತೆ, ಶೇಷಾದ್ರಿ ರಸ್ತೆ, ಫ್ರೀಡಂ ಪಾರ್ಕ್ , ಮಹಾರಾಣಿ ಕಾಲೇಜು (Maharani College), ಕೆ ಆರ್ ವೃತ್ತ , ವಿಧಾನಸೌಧ , ಹೈಕೋರ್ಟ್ ಮುಂಭಾಗ ಯೂ ಟರ್ನ್ , ನೃಪತುಂಗ ರಸ್ತೆ (Nripatunga Road) , ಕಾರ್ಪೋರೇಷನ್ ವೃತ್ತ, ಕಬ್ಬನ್ ಪಾರ್ಕ್ ಮೂಲಕ ವಿಠ್ಠಲ್ ಮಲ್ಯ (Vitthal Mallya Road) ರಸ್ತೆಗೆ ಬಂದು ತಲುಪಲಿದೆ.
ಮಹಿಳೆ ಉಡುಗೆ ನಿರ್ಧರಿಸುವುದು ಧರ್ಮ, ಲಂಪಟರಲ್ಲ, ಇರಾನ್ ಹಿಜಾಬ್ ಪ್ರತಿಭಟನೆಗೆ ಸದ್ಗುರು ಸಂದೇಶ!
ಕಳೆದ ಹಲವಾರು ತಿಂಗಳುಗಳಿಂದ ದೇಶವಿದೇಶಗಳಲ್ಲಿ ಮಣ್ಣಿನ ಕುರಿತು ಸದ್ಗುರು ಜಗ್ಗಿ ವಾಸುದೇವ್ ಅಭಿಯಾನ ನಡೆಸಿದ್ದಾರೆ. 20 ಕ್ಕೂ ಹೆಚ್ಚು ದೇಶಗಳಲ್ಲಿ ಅರಿವು ಮೂಡಿಸುವ ಯತ್ನ ಮಾಡಿದ್ದಾರೆ. ಸದ್ಗುರು ಸಾಗುವ ಮಾರ್ಗದುದ್ದಕ್ಕೂ ಸಾವಿರಾರು ಜನ ರಸ್ತೆ ಬದಿಗಳಲ್ಲಿ ಮಣ್ಣು ಉಳಿಸಿ (save Soil) ಭಿತ್ತಿಪತ್ರ ಹಿಡಿದು ನಿಂತು ಸದ್ಗುರು ಅವರನ್ನು ಸ್ವಾಗತಿಸಿದರು. ವಿಧಾನಸೌಧದ ಮುಂಭಾಗದಲ್ಲೂ ಮಣ್ಣು ಉಳಿಸಿ ಎಂದು ಫ್ಲೆಕ್ಸ್ ಬೆಲೂನುಗಳನ್ನು ಹಿಡಿದು ನೂರಾರು ಜನ ಸಾಗಿದ್ದಾರೆ.
ಬದುಕಲ್ಲಿ ನನಗ್ಯಾಕೆ ಇಷ್ಟು ಅನ್ಯಾಯ ಆಗ್ತಿದೆ?: ಸದ್ಗುರು ಜೊತೆ ಸಮಂತಾ ಬಿಚ್ಚುಮಾತು!
ಸದ್ಗುರು ಸುದ್ದಿಗೋಷ್ಠಿ
ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಸದ್ಗುರು ಜಗ್ಗಿ ವಾಸುದೇವ್, ಮಾರ್ಚ್ 21 ರಿಂದ 8 ತಿಂಗಳ ಕಾಲ ಈ ಅಭಿಯಾನ ನಡೆದಿದೆ. 81 ದೇಶಗಳಲ್ಲಿ ಮಣ್ಣಿನ ವಿಚಾರವಾಗಿ ಪಾಲಿಸಿ ಬದಲಾವಣೆಗೆ ಸರ್ಕಾರಗಳು ಮುಂದಾಗಿವೆ. ಜನವರಿಯಲ್ಲಿ ಆದ ಜಾಗತಿಕ ಮಟ್ಟದ ಸಭೆಯಲ್ಲಿ ಹವಾಮಾನ ವಿಚಾರವಾಗಿ ಮಾತನಾಡಲಾಯಿತು. ಆದ್ರೆ ಮಣ್ಣಿನ ಬಗ್ಗೆ ಮಾತನಾಡಿರಲಿಲ್ಲ. ಈಗ ಪ್ರಪಂಚದೆಲ್ಲೆಡೆ ಮಣ್ಣಿನ ಮಹತ್ವದ ಕುರಿತು ಮಾತನಾಡಲಾಗ್ತಿದೆ. ಮಣ್ಣಿನ ವಿಚಾರವಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿದೆ. ಈಗಿನ ಬಹುತೇಕ ಆರೋಗ್ಯ ಸಮಸ್ಯೆಗಳು ಹಾಗೂ ಮಾನಸಿಕ ಸಮಸ್ಯೆಗಳಿಗೆ ಮಣ್ಣೇ ಪ್ರಮುಖ ಕಾರಣವಾಗಿದೆ. ಕ್ವಾಲಿಟಿ ಆಹಾರ ಸೇವಿಸೋದು ಬಹಳ ಮುಖ್ಯ. ಭಾರತದ ಮಣ್ಣು ಕೇವಲ ಶೇ 0.68 ಫಲವತ್ತವಾಗಿದೆ. ಪ್ರಪಂಚದಲ್ಲಿ ಅತಿ ಹೆಚ್ಚು ಮಣ್ಣಿನ ಫಲವತ್ತತೆಯನ್ನು ಯುಕೆಯಲ್ಲಿ ಕಾಣಬಹುದು ಎಂದರು.
ಸದ್ಗುರು ಜೊತೆ ಸುದ್ದಿಗೋಷ್ಠಿಯಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಹಾಗೂ ಪರಿಸರವಾದಿ ರೇವತಿ ಕಾಮತ್ ಇದ್ದರು.