ನಾಳೆಯಿಂದ 2 ದಿನ ಬೆಂಗಳೂರು ಸೇರಿ 9 ಜಿಲ್ಲೆಗಳಲ್ಲಿ ಮತ್ತೆ ಮಳೆ ಸಾಧ್ಯತೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಸೇರಿದಂತೆ 9 ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. 

Rainfall Expected in Bengaluru and 8 Other Districts due to another cyclone

ಬೆಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮದಿಂದ ಜನ ಚೇತರಿಸಿಕೊಳ್ಳುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಸೈಕ್ಲೋನ್ ಎಫೆಕ್ಟ್ ಮಳೆ ಸುರಿಸಲಿದೆ. ಬಂಗಾಳಕೊಲ್ಲಿಯಲ್ಲಿ ಮತ್ತೊಮ್ಮೆ ವಾಯುಭಾರ ಕುಸಿತವಾಗಿದ್ದು,  ಇದರ ಪರಿಣಾಮ ರಾಜ್ಯದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಪ್ರಸ್ತುತ ರಾಜ್ಯದಲ್ಲಿ ಮಂಜಿನೊಂದಿಗೆ ಚಳಿ ಮುಂದುವರೆದಿದೆ. ಇದರ ಜೊತೆಗೆ ಈಗ ಚಂಡಮಾರುತದ ಪರಿಣಾಮವಾಗಿ  ನಾಳೆಯಿಂದ 2 ದಿನ ಬೆಂಗಳೂರು ಸೇರಿ ರಾಜ್ಯದ 9 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. 

ಇಂದು ನಗರದ ಹಲವೆಡೆ ಮೋಡ ಕವಿದ ವಾತಾವರಣವಿದ್ದು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ,  ಚಾಮರಾಜನಗರ -ತುಮಕೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಒಂದೆರಡು ಕಡೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ಜೊತೆಗೆ ಕರಾವಳಿ ಕರ್ನಾಟಕ ಮತ್ತು ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿಯಲಿದೆ.  ಹಾಗೆಯೇ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಂಜು ಇರುವ ಸಾಧ್ಯತೆ ಇದೆ.

ಕಳೆದ ವರ್ಷ ಸರಿಯಾಗಿ ಬಾರದೇ ರಾಜ್ಯದಲ್ಲಿ ಅನಾವೃಷ್ಟಿ ಸೃಷ್ಟಿಸಿದ್ದ ಮಳೆ ಈ ವರ್ಷ ಅರ್ಧ ಡಿಸೆಂಬರ್ ಕಳೆದು ಇನ್ನೇನು ಹೊಸ ವರ್ಷಾರಂಭಕ್ಕೆ ಕೆಲವೇ ದಿನಗಳಿದ್ದರೂ ಮಳೆಗಾಲ ದೂರ ಹೋಗಲು ಮನಸ್ಸು ಮಾಡದೇ ಇರುವುದು, ಕೃಷಿಯನ್ನೇ ನಂಬಿರುವ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ.

ಮಹಾರಾಷ್ಟ್ರ ಮಂತ್ರಿಮಂಡಲ ವಿಸ್ತರಣೆ : 39 ಸಚಿವರ ಪ್ರಮಾಣವಚನ

ಬಾಂಗ್ಲಾದೇಶದಲ್ಲಿ ಸಾವಿರಾರು ಜನರ ಅಪಹರಣದಲ್ಲಿ ಶೇಖ್‌ ಹಸೀನಾ ಭಾಗಿ ಆರೋಪ
 

Latest Videos
Follow Us:
Download App:
  • android
  • ios