Bengaluru: ರಾಜಧಾನಿ ಸುತ್ತಲಿನ ಪ್ರದೇಶಗಳಲ್ಲಿ ರೈಲ್ವೆ ಹಳಿ ದ್ವಿಗುಣಗೊಳಿಸಲು ಸರ್ವೇ ಆರಂಭ

ರಾಜಧಾನಿ ಬೆಂಗಳೂರಿನ ಸುತ್ತಲಿರುವ ತಾಲೂಕು ಹಾಗೂ ಪಟ್ಟಣ ಪ್ರದೇಶಗಳು ಜನರು ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಬೆಂಗಳೂರಿಗೆ ಬಂದು ಹೋಗಲು ಅನುಕೂಲ ಆಗುವಂತೆ ಮುಂಬೈ ಮಾದರಿಯಲ್ಲಿ ಸಬ್‌ ಅರ್ಬನ್‌ ರೈಲು ಯೋಜನೆ ಆರಂಭಿಸಲು ಈಗಿರುವ ರೈಲು ಮಾರ್ಗಗಳನ್ನು ದ್ವಿಗುಣಗೊಳಿಸಲು ಮುಂದಾಗಿದೆ. 

Railway track doubling survey started in the areas around Bangalore sat

ಬೆಂಗಳೂರು (ಡಿ.7) : ಪ್ರತಿನಿತ್ಯ ಕೆಲಸದ ನಿಮಿತ್ಯ ರಾಜಧಾನಿಗೆ ಬಂದು ಹೋಗುವ ಅಕ್ಕಪಕ್ಕದ ತಾಲೂಕು ಮತ್ತು ಪ್ರದೇಶಗಳಿಂದ ರಾಜಧಾನಿಗೆ ಆಗಮಿಸುವ ಪ್ರಯಾಣಿಕರನ್ನು ರೈಲುಗಳಲ್ಲಿ ಸಂಚಾರ ಮಾಡುವಂತೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಮುಂಬೈನ ಉಪನಗರ ರೈಲು ಸೇವೆಯ ಮಾದರಿಯಲ್ಲಿ ಯಲಹಂಕ-ದೇವನಹಳ್ಳಿ (23 ಕಿ.ಮೀ) ದ್ವಿಗುಣಗೊಳಿಸುವ ಮತ್ತು ಬೈಯಪ್ಪನಹಳ್ಳಿ- ಹೊಸೂರು (48.5 ಕಿಮೀ) ವಿಭಾಗಗಳನ್ನು ಚತುಷ್ಪಥ ಮಾಡಲು  ನೈರುತ್ಯ ರೈಲ್ವೆ ವಿಭಾಗವು ಪ್ರಸ್ತಾಪಿಸಿದೆ.

ನೈರುತ್ಯ ರೈಲ್ವೆ ವಿಭಾಗದ ಈ ಎರಡು ನಿರ್ಣಾಯಕ ಮಾರ್ಗಗಳಿಗಾಗಿ ಅಂತಿಮ ಸ್ಥಳ ಸಮೀಕ್ಷೆಗೆ (FLS) ಟೆಂಡರ್ ಅನ್ನು ಆಹ್ವಾನಿಸಿದೆ. ಡಿಸೆಂಬರ್ ಅಂತ್ಯದೊಳಗೆ ಟೆಂಡರ್ ಅಂತಿಮಗೊಳ್ಳುವ ಸಾಧ್ಯತೆ ಇದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕಳೆದ ತಿಂಗಳು ಎಸ್‌ಡಬ್ಲ್ಯುಆರ್‌ಗೆ ಮುಂಬೈನ ಪ್ರಸಿದ್ಧ ಉಪನಗರ ರೈಲಿನ ಮಾದರಿಯಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಹೆಚ್ಚಿನ ಸಾಂದ್ರತೆಯ ರೈಲು ಮಾರ್ಗಗಳನ್ನು ದ್ವಿಗುಣಗೊಳಿಸುವ/ಮೂರು ಪಟ್ಟು / ನಾಲ್ಕು ಪಟ್ಟು ಹೆಚ್ಚಿಸುವ ಮೂಲಕ ಸಾಮರ್ಥ್ಯವನ್ನು ಸುಧಾರಿಸಲು ಕಾರ್ಯಸಾಧ್ಯತೆಯ ಅಧ್ಯಯನವನ್ನು ಕೈಗೊಳ್ಳಲು ಸೂಚಿಸಿದ್ದರು. ಇದರ ಬೆನ್ನಲ್ಲೇ ಮಾರ್ಗಗಳನ್ನು ದ್ವಿಗುಣಗೊಳಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.

ಉಪನಗರ ರೈಲು ಶಂಕು ನೆರವೇರಿ ತಿಂಗಳಾದರೂ ಇನ್ನೂ ಇಲ್ಲ ಪ್ರಗ

ಉಪನಗರ ರೈಲು ಯೋಜನೆ ನಿಧಾನ: ಕರ್ನಾಟಕ ರೈಲ್ ಇನ್‌ಫ್ರಾಸ್ಟ್ರಿಕ್ಟರ್ ಡಿವಲಪ್‌ಮೆಂಟ್‌ ಕಂಪನ ಲಿಮಿಟೆಡ್ (ಕೆ-ರೈಡ್) ಮೂಲಕ 148 ಕಿ.ಮೀ. ಉದ್ದದ ಉಪನಗರ ರೈಲು ಯೋಜನೆಯ ನಿಧಾನಗತಿಯಲ್ಲಿ ಸಾಗುತ್ತರಿರುವ ಬಗ್ಗೆ ಕೇಂದ್ರ ರೈಲ್ವೆ ಸಚಿವಾಲಯವು ಅಸಮಾಧಾನ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಈಗಿರುವ ರೈಲುಗಳ ಸೇವೆಯನ್ನು ಹೆಚ್ಚುವರಿಯಾಗಿ ಓಡಿಸಲು ಉಪನಗರ ರೈಲುಗಳನ್ನು ಸಂಚಾರಕ್ಕೆ ತರಲು ಅನುಕೂಲ ಆಗುವಂತೆ ಅಸ್ತಿತ್ವದಲ್ಲಿರುವ ಮಾರ್ಗಗಳ ಸಾಮರ್ಥ್ಯವನ್ನು ಹೆಚ್ಚಿಸಲು ರೈಲ್ವೆ ಇಲಾಖೆಗೆ ಪ್ರೋತ್ಸಾಹ ನೀಡಲಾಗಿದೆ.

ಶೀಘ್ರ ಸಚಿವಾಲಯಕ್ಕೆ ವರದಿ ಸಲ್ಲಿಕೆ: ಈ ಯೋಜನೆ ರೂಪಿಸಲಾಗುತ್ತಿರುವ ರೈಲ್ವೆ ಮಾರ್ಗ ದ್ವಿಗುಣಗೊಳಿಸುವ ಕಾರ್ಯಕ್ಕೆ ಅಂತಿಮ ಸ್ಥಳ ಆಯ್ಕೆಯ (ಫೈನಲ್‌ ಲೊಕೇಷನ್ ಸರ್ವೇ- ಎಫ್‌ಎಲ್ಎಸ್) ಅಗತ್ಯವಿರುವ ಭೂಮಿಯನ್ನು ಗುರುತಿಸಲು ಸಹಾಯ ಮಾಡುತ್ತದೆ. ಈ ಟೆಂಡರ್ ಸಮೀಕ್ಷೆಗಾಗಿ ಮತ್ತಿ ಮುಂದಿನ ಯೋಜನೆಯ ಕಾರ್ಯ ಸಾಧ್ಯತೆಯನ್ನು ಕೈಗೊಳ್ಳಲು ನಿರ್ಣಾಯಕವಾಗಲಿದೆ. ಶೀಘ್ರ ಈ ಬಗ್ಗೆ ರೈಲ್ವೆ ಸಚಿವಾಲಯಕ್ಕೆ ವರದಿಯನ್ನು ಸಲ್ಲಿಸಲಾಗುವುದು'' ಎಂದು ಎಸ್‌ಡಬ್ಲ್ಯುಆರ್‌ನ ಅಧಿಕಾರಿ  ಹೇಳಿದರು.

ಬೆಂಗ್ಳೂರು ಸಬ್‌ಅರ್ಬನ್‌ ಕನಸಿಗೆ ಮೋದಿ ಮರುಜೀವ: 4 ದಶಕದ ಕನಸು ಆರೇ ವರ್ಷದಲ್ಲಿ ಸಾಕಾರ..!

ಉಪನಗರ ರೈಲಿಗೆ ಸಮಸ್ಯೆಯಾಗಬಾರದು: ಬೈಯಪ್ಪನಹಳ್ಳಿ- ಹೊಸೂರು ನಾಲ್ಕು ಪಟ್ಟು ಹೆಚ್ಚಾಗುವುದರಿಂದ ಉಪನಗರ ರೈಲಿನ ಹೀಲಳಿಗೆ-ರಾಜನುಕುಂಟೆ ಕಾರಿಡಾರ್‌ಗೆ ಘರ್ಷಣೆಯಾಗುವ ಭಯವಿದೆ. ರೈಲು ಹಳಿ, ಚತುಷ್ಪಥ ಕಾಮಗಾರಿಗಾಗಿ ಖಾಸಗಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಕಾಗಬಹುದು. ಯಲಹಂಕ- ದೇವನಹಳ್ಳಿ ಭಾಗದ ದ್ವಿಗುಣಗೊಳಿಸುವಿಕೆ ಸ್ವಾಗತಾರ್ಹ ಕ್ರಮವಾಗಿದೆ. ಆದರೆ, ಈ ಮಾರ್ಗವನ್ನು ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ವಿಸ್ತರಿಸಬೇಕು. ರೈಲ್ವೆ ವಿಮಾನ ನಿಲ್ದಾಣದ ಟರ್ಮಿನಲ್‌ಗೆ ಶಾಖಾ ಮಾರ್ಗವನ್ನು ಒದಗಿಸಬೇಕು. ಇದು ಪ್ರಯಾಣಿಕರಿಗೆ ಅನುಕೂಲ ಆಗಲಿದ್ದು, ಯೋಜನೆಯ ಘೋಷಣೆ ಕೇವಲ ಚುನಾವಣೆಗೆ ಸೀಮಿತವಾಗಬಾರದು ಎಂದು ರೈಲ್ವೆ ಪ್ರಯಾಣಿಕರು ತಿಳಿಸಿದರು.

Latest Videos
Follow Us:
Download App:
  • android
  • ios