ಬೆಂಗಳೂರು ( ಮಾ 6) : ಯಾಕೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಕಥಾನಾಯಕನ ಪತ್ನಿ ಒಂದು ದಿನ ಕಳೆದುಹೋಗುತ್ತಾಳೆ. ಅಂದರೆ ನಾಪತ್ತೆ. ಅದೊಂದು ಸನ್ನಿವೇಶ. ಆದರೆ ನಾಯಕನ ಪತ್ನಿ ಈಗ ಎಲ್ಲಿದ್ದಾಳೆ, ಅವಳೇನು ಮಾಡುತ್ತಿದ್ದಾಳೆ? ಪೊಲೀಸರೇನೋ ಅವಳಿಗಾಗಿ ಹುಡುಕಾಟ ನಡೆಸಿದ್ದಾರೆ, ಸರಿಯೇ.

13ರ ಬಾಲಕಿಯ ಆಂಗ್ಲ ಕವನ ಸಂಕಲನ ಬಿಡುಗಡೆ

ಇದು ಕತೆಯ ಒಂದು ಎಳೆ. ಹುಡುಕುತ್ತಿರುವ ಪೊಲೀಸರಿಗೆ ಅವಳು ಸಿಗುತ್ತಾಳಾ? ಅಥವಾ ಇಲ್ಲವಾ. ಸಿಕ್ಕರೆ ಎಲ್ಲಿ ಸಿಗುತ್ತಾಳೆ? ಎನ್ನುವುದು ಗುಟ್ಟು. ಅದ್ಸರಿ. ಈ ಕಾದಂಬರಿಯ ನಾಯಕ ಯಾರು? ಅವನೇಕೆ ನಾಪತ್ತೆ ಆದ? ಪತ್ತೇದಾರಿ ಕತೆ ಯಾರ ಸುತ್ತ ಗಿರಕಿ ಹೊಡೆಯುತ್ತಿದೆ?. ಮುಂದೇನಾಯಿತು? ಮುಂದೇನಾಗುತ್ತಿದೆ? 

2020ರಲ್ಲಿ ಓದುಗರು ಮೆಚ್ಚಿದ 30 ಪುಸ್ತಕಗಳು

ಎಂದು ಉಸಿರುಗಟ್ಟಿಸಿ ಓದಿಸಿಕೊಳ್ಳುವ ಈ ಕಾದಂಬರಿ ನಿಗೂಢ, ರಹಸ್ಯ ಮತ್ತು ಕೌತುಕ ತುಂಬಿದ ಓದು ಬಯಸುವವರಿಗೆ ಮಾತ್ರ.ಕಾದಂಬರಿ ಬಿಡುಗಡೆಗೆ ನೀವೂ ಬನ್ನಿ ಎಂದು ಹೇಳುತ್ತಿರುವ ಕರೆಯೋಲೆ ಇದು.  ಜೆಪಿ ನಗರ ಮೂರನೇ ಫೇಸಿನಲ್ಲಿ ದೆಜಾವೂ ಹೊಟೆಲಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇದೆ. ಭಾನುವಾರ ಸಂಜೆ ( 7, ಮಾರ್ಚ್ 2021) ಕಾರ್ಯಕ್ರಮ. 

ದೆಜಾವೂ ವಿಳಾಸ ಇದು: 
Deja Vu Buffet Bar, Eden Park, No.7/8 Doresanipalya, Near Kalyani Magnum Tech Park, 5th Phase, J. P. Nagar, Bengaluru, Karnataka 560078

ಇದು ಇಂಗ್ಲಿಷ್ ಕಾದಂಬರಿ. ಲೇಖಕಿ: ಪೂಜಿತಾ ಜಿ ಪ್ರಸಾದ್, ಕೃತಿ ಬಿಡುಗಡೆ: ಚಲನಚಿತ್ರ ನಿರ್ದೇಶಕಿ ರೂಪಾ ರಾವ್. ರೂಪಾ ರಾವ್ ಯಾರು ಗೊತ್ತಾ? ರೋಚಕ ಮತ್ತು ತುಂಟತನದಿಂದ ಎಲ್ಲರ ಮನಗೆದ್ದ ಗಂಟುಮೂಟೆ ಚಿತ್ರದ ಯಂಗ್ ಮತ್ತು ಎನರ್ಜೆಟಿಕ್ ನಿರ್ದೇಶಕಿ