ಕಿರಿಯ ಕವಯತ್ರಿ ಅಮನಾ ವಿರಚಿತ ‘ಎಕೋಸ್ ಆಫ್ ಸೋಲ್‌ಫುಲ್ ಪೋಯಮ್ಸ್’ ಎಂಬ ಆಂಗ್ಲ ಕವನ ಸಂಕಲನ ಹಾಗೂ ಆ ಕೃತಿಯ ಕನ್ನಡ ಅನುವಾದ ಡಾ.ಟಿ.ಎಸ್.ಲತಾ ಅವರ ‘ಅಂತರಂಗದ ತರಂಗ’ ಕೃತಿ ಲೋಕಾರ್ಪಣೆಗೊಳಿಸಲಾಯಿತು.
ಬೆಂಗಳೂರು (ಡಿ.20): ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಹದಿಮೂರು ವರ್ಷದ ಅಮನಾ ಅವರು ಆಂಗ್ಲಭಾಷೆಯಲ್ಲಿ ಕವಿತೆಗಳನ್ನು ಬರೆದು ಸಮಾಜದಲ್ಲಿ ಸಕಾರಾತ್ಮಕ ಚಿಂತನೆ ಬಿತ್ತಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಶ್ಲಾಘಿಸಿದ್ದಾರೆ.
ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಿರಿಯ ಕವಯತ್ರಿ ಅಮನಾ ವಿರಚಿತ ‘ಎಕೋಸ್ ಆಫ್ ಸೋಲ್‌ಫುಲ್ ಪೋಯಮ್ಸ್’ ಎಂಬ ಆಂಗ್ಲ ಕವನ ಸಂಕಲನ ಹಾಗೂ ಆ ಕೃತಿಯ ಕನ್ನಡ ಅನುವಾದ ಡಾ.ಟಿ.ಎಸ್.ಲತಾ ಅವರ ‘ಅಂತರಂಗದ ತರಂಗ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ವಿಶ್ವವನ್ನೇ ಕಾಡಿದ ಕೊರೋನಾ ಸೋಂಕು ಜನರಲ್ಲಿ ಭೀತಿಯನ್ನು ಉಂಟು ಮಾಡಿತ್ತು. ಈ ಸಂದರ್ಭದಲ್ಲಿ ಏಳನೇ ತರಗತಿ ವಿದ್ಯಾರ್ಥಿನಿ ಅಮನಾ ಅವರು ಕವಿತೆಗಳ ಮೂಲಕ ಸಂದರ್ಭೋಚಿತವಾಗಿ ಸಮಾಜದಲ್ಲಿ ಸಕಾರಾತ್ಮಕ ಭಾವನೆ ಬಿತ್ತುವಂತಹ ಕಾರ್ಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಮನಾ ಈ ನಾಡಿನ ದೊಡ್ಡ ಕವಯತ್ರಿಯಾಗಿ ಬೆಳೆಯಲಿ ಎಂದು ಹಾರೈಸಿದರು.
ಅಮೆರಿಕಾದ ಶಾಲೆಯಲ್ಲಿ ಕನ್ನಡದ ಕಲರವ: ವಿದೇಶಿ ಭಾಷೆಯಾಗಿ ಕನ್ನಡ ಕಲಿಕೆ! .
ಕನ್ನಡಪ್ರಭದ ಪುರವಣಿ ಸಂಪಾದಕ ಗಿರೀಶ್ ರಾವ್ ಹತ್ವಾರ್(ಜೋಗಿ) ಮಾತನಾಡಿ, ಪದ್ಯವನ್ನು ಎಂದೂ ಮನಸ್ಸಲ್ಲಿ ಓದಬಾರದು. ದೊಡ್ಡ ದನಿಯಲ್ಲಿ ಓದಿದಾಗ ಮಾತ್ರ ಅದರಲ್ಲಿನ ಪದವು ತನ್ನೆಲ್ಲ ಅರ್ಥವನ್ನು ಬಿಟ್ಟುಕೊಟ್ಟು ಕಿವಿಗೆ ಆನಂದ ನೀಡುತ್ತದೆ. ಕನ್ನಡ ಭಾಷೆ ಯಾರ ಸ್ವತ್ತೂ ಅಲ್ಲ, ಎಲ್ಲರ ಸ್ವತ್ತು. ಅದಕ್ಕೆ ಬಾಲಕತನವೂ ಇಲ್ಲ, ಬಾಲಿಶತನವೂ ಇಲ್ಲ. ಒಂದು ಮಗುವಿನ ಕಿವಿಗೆ ಕನ್ನಡತನ ಬಿದ್ದರೆ ಅದನ್ನು ಅದ್ಭುತವಾಗಿ ಬಳಸಿಕೊಳ್ಳುವುದನ್ನು ಕಲಿಯುತ್ತದೆ ಎಂದರು.
ಹಿರಿಯ ಕವಿ ಡಾ.ದೊಡ್ಡರಂಗೇಗೌಡ ಮಾತನಾಡಿದರು. ಬಿಷಪ್ ಕಾಟನ್ ಬಾಲಕಿಯರ ಶಾಲೆ ಪ್ರಾಂಶುಪಾಲರಾದ ಡಾ.ಲಾವಣ್ಯ ಮಿತ್ರನ್, ಕಿರಿಯ ಕವಯತ್ರಿ ಅಮನಾ, ಅನುವಾದಕಿ ಡಾ.ಟಿ.ಎಸ್.ಲತಾ ಮತ್ತಿತರರು ಉಪಸ್ಥಿತರಿದ್ದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 20, 2020, 10:14 AM IST