ಆರ್ಎಸ್ಎಸ್ ಪಥಸಂಚಲನಕ್ಕೆ ಬಾಯಿ ಮಾತಿನಲ್ಲಿ ಹೇಳಿದರೆ ಅಗಲ್ಲ, ಪೊಲೀಸ್ ಇಲಾಖೆ ಆರ್ಎಸ್ಎಸ್ ಆಳು ಮಕ್ಕಳಲ್ಲ. ಅನುಮತಿ ಕೇಳಿ, ಸೂಕ್ತ ಅನಿಸಿದರೆ ಕೊಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಪುನರುಚ್ಚರಿಸಿದ್ದಾರೆ.
ಬೆಂಗಳೂರು (ಅ.21) ಆರ್ಎಸ್ಎಸ್ ಪಥಸಂಚಲನ ವಿಚಾರದಲ್ಲಿ ಗೃಹ ಸಚಿವ ಪ್ರಿಯಾಂಕ ಖರ್ಗೆ ತಮ್ಮ ನಿಲುವ ಸಮರ್ಥಿಸಿದ್ದಾರೆ. ಆರ್ಎಸ್ಎಸ್ ಪಥಸಂಚಲನಕ್ಕೆ ಸೂಕ್ತವಾಗಿ ಅನುಮತಿ ಕೇಳಬೇಕು. ಬಾಯಿಮಾತಿನಲ್ಲಿ ಹೇಳಿದರೆ ಆಗುವುದಿಲ್ಲ. ನಾನು ಕೇಳಿದ್ರಲ್ಲಿ ತಪ್ಪಿದ್ದರೆ, ಲೋಪ ಇದ್ದರೆ ತಿದ್ದಿಕೊಳ್ಳೋಕೆ ತಯಾರಿದ್ದೀನಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆರ್ಎಸ್ಎಸ್ ಪಥಸಂಚಲನ ಮಾಡುವಾಗ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು. ಮಾಹಿತಿ ಬೇಡ, ಅನುಮತಿ ಕೇಳಿ ಪಡೆದುಕೊಳ್ಳಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಪೊಲೀಸ್ ಇಲಾಖೆ RSSನ ಆಳು ಮಕ್ಕಳಲ್ಲ. ಮಾಹಿತಿ ಕೊಟ್ಟಿದ್ದೇವೆ, ವ್ಯವಸ್ಥೆ ಮಾಡಿ ಎಂದು ಹೇಳಿದರೆ ಪೊಲೀಸ್ ಇಲಾಖೆ ಮಾಡಲ್ಲ. ಬಹಳಷ್ಟು ಜನ ಹಬ್ಬ ಆಚರಿಸುತ್ತಾರೆ. ಆರ್ಎಸ್ಎಸ್ ಕಾನೂನು, ಸಂವಿಧಾನಕ್ಕಿಂತ ಮೇಲಲ್ಲ. ಮೊದಲು ಅನುಮತಿ ಕೇಳಿ, ಸೂಕ್ತ ಅನಿಸಿದರೆ ಕೊಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಗಣೇಶ ಮೆರವಣಿಗೆ ಮಾಡುವಾಗ ಮಾಹಿತಿ ಕೇಳ್ತೀರಾ? ಅನುಮತಿ ಕೇಳ್ತೀರಾ..? ಮನೆ ಕಾರ್ಯಕ್ರಮ ಮಾಡಬೇಕಾದರೆ ರೋಡ್ ಮೇಲೆ ಪೆಂಡಾಲ್ ಹಾಕಿದಾಗ ಏನ್ ಮಾಡ್ತೀರಾ? ಎಲ್ಲರಿಗೂ ಒಂದೇ ನಿಯಮ, ಅದು ಆರ್ಎಸ್ಎಸ್ಗೂ ಅನ್ವಯಿಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಪೊಲೀಸ್ ಇಲಾಖೆಯವರು ಮನೆ ಕೆಲಸ ಮಾಡೋರಾ?
ರೂಟ್ ಮಾರ್ಚಸ್ ಮೇಲೆ ಏನಾದ್ರು ತೊಂದ್ರೆ ಇದ್ರೆ ಲೋಕಲ್ ಅಲ್ಲಿ ಸರಿ ಮಾಡ್ಕೊಳಿ. ದಯವಿಟ್ಟು ಪೊಲೀಸ್ ಇಲಾಖೆಗೆ ಸರ್ಕಾರಗಳಿಗೆ ಗೌರವ ಕೊಡೋದು ಕಲಿಯಲಿ. ಮಾಡ್ತಾ ಇದೀವಿ ಸೂಕ್ತ ಕ್ರಮ ವಹಿಸಿ ಅಂದ್ರೆ ಇಲಾಖೆಯವರು ಅವರ ಮನೇಲಿ ಕೆಲಸ ಮಾಡೋರ? ಅನುಮತಿ ಪಡೆಯದೇ ಮಾಡೋದಕ್ಕೆ ಆಗೋದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಆರ್ಎಸ್ಎಸ್ ನೂರು ವರ್ಷದ ಇತಿಹಾಸದಲ್ಲಿ ಯಾವ ಪ್ರತಿಭಟನೆ ಮಾಡಿದ್ದಾರೆ. ಬ್ರಿಟಿಷರ ಗುಲಾಮರು ಇವರು ಪೆನ್ಷನ್ ತಗೊಳೋವರ ಹತ್ರ ನಾವು ಕಲಿಬೇಕಾ. ಯಾರಾದ್ರು ಏನಾದ್ರು RSS ನಿಂದ ಕಲಿಯೋದು ಇದ್ಯಾ . ಅವರ ಇತಿಹಾಸ ತೆಗೆದು ನೋಡಿ. ಯಾರು ಬ್ರಿಟಿಷರ ಹತ್ರ 60 ರೂ ಪೆನ್ಷನ್ ತಗೋತಾ ಇದ್ರು ಸಾವರ್ಕರ್ ಅಂತವರು ಇವರ ಲೀಡರ್. ಇವರಿಂದ ನಾವು ಏನು ಕಲಿಯೋಕೆ ಇದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ರಿಜಿಮ್ ಚೇಂಜ್ ಹೇಗೆ ಮಾಡೋದಕ್ಕೆ ಆಗುತ್ತೆ
ಮೋಹನ್ ಭಾಗವತ್ ರೆಜಿಮ್ ಚೇಂಜ್ ಉಲ್ಲೇಖ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ರೆಜಿಮ್ ಹೇಗೆ ಚೇಂಜ್ ಮಾಡೋದಕ್ಕೆ ಆಗುತ್ತೆ. ಚೀಫ್ ಎಲೆಕ್ಷನ್ ಕಮಿಷನ್ ಅವರದು,ಇವಿಎಂ ಅವರದು ವೋಟರ್ ಲಿಸ್ಟ್ ಅವರದು. ಫಾರ್ಮ್ 6 ಅವರದು ಫಾರ್ಮ್ 7 ಅವರದು ಹೇಗೆ ಚೇಂಜ್ ಮಾಡೋದು. ಇದು ಪರ್ಮನೆಂಟ್ ಪವರ್ ನಲ್ಲಿ ಇರೋದಕ್ಕೆ ಮಾಡ್ತಾ ಇರೋ ಸಂಚು. ಈಗ ಜನರು ಬೀದಿಗೆ ಇಳಿತಾ ಇದಾರೆ ಅದು ಅದಕ್ಕೆ ಸಾಕ್ಷಿ ಅಲ್ವಾ. ಫ್ ಎಲೆಕ್ಷನ್ ಕಮೀಷನ್ ಗೆ ಜುಡಿಷಿಯಲ್ ಇಮ್ಯುನಿಟಿ ಯಾಕೆ ಬೇಕು ಅಂದ್ರೆ ಉತ್ತರ ಇಲ್ಲ. ಚುನಾವಣಾ ಆಯೋಗವನ್ನೇ ಕ್ಯಾಪ್ಚರ್ ಮಾಡಿದೀವಿ ನಾವು ಅಂತಾರೆ. ಇವರೇ ಪಾಕಿಸ್ತಾನದ ಜೊತೆಗೆ ನಂಟು ಬೆಳೆಸಬೇಕು ಅಂತ ಇದಾರಲ್ಲ. ಯಾರು ಇವರಿಗೆಲ್ಲಾ ಮಾತನಾಡೋದಕ್ಕೆ ಅವಕಾಶ ಕೊಟ್ಟವರು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.


