ಬೆಂಗಳೂರು(ಜೂ. 10)  ಕಂಡ ಕಂಡಲ್ಲಿ ಕಸ ಬಿಸಾಕಿದ್ರೇ ಬೀಳುತ್ತೆ ಬಾರಿ ದಂಡ ತೆರಬೇಕಾಗುತ್ತದೆ.  ಇನ್ಮುಂದೆ ಎಲ್ಲೆಂದರಲ್ಲಿ ಕಸ ಬಿಸಾಕುವ ಹಾಗಿಲ್ಲ. 

ಎಲ್ಲೆದರಲ್ಲಿ ಕಸ ಹಾಕೋರಿಗೆ ಪಾಲಿಕೆಗೆ ಹೊಸ ಅಸ್ತ್ರ ಪ್ರಯೋಗ ಮಾಡಿದೆ.  ಕಸ ನಿರ್ವಹಣೆ ಜತೆಗೆ ಇನ್ಮುಂದೆ ಬಳಕೆದಾರರ ಶುಲ್ಕವನ್ನು ಕಟ್ಟಬೇಕಾಗುತ್ತದೆ.

2019  ರ ಆಗಸ್ಟ್ ನಲ್ಲಿ ಅನುಮೋದಿಸಿದ್ದ ನಿರ್ಣಯವನ್ನು ರಾಜ್ಯ ಸರ್ಕಾರ ಒಪ್ಪಿದೆ. ಕಸ ನಿರ್ವಹಣೆ ಉಪನಿಯಮ 2020 ರಾಜ್ಯಪತ್ರಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.  ಅಧಿಸೂಚನೆಯಿಂದ ಕಸ ನಿರ್ವಹಣೆಗೆ ಶುಲ್ಕ ವಿಧಿಸಲು ಬಿಬಿಎಂಪಿಗೆ ನಿಯಮ ರೂಪಿಸಲು ತಿಳಿಸಲಾಗಿದೆ.

ಇಲ್ಲಿ ತನಕ ಕಸದ ನಿರ್ವಹಣೆಗೆ ಶೇಕಡಾ 5 ರಷ್ಟು ಮಾತ್ರ ಉಪಕರವನ್ನು ಬಿಬಿಎಂಪಿ  ಸಂಗ್ರಹ ಮಾಡುತ್ತಿತ್ತು.  ಇನ್ಮುಂದೆ ಉತ್ಪಾದಿಸುವ ಕಸಕ್ಕೆ ತಕ್ಕಂತೆ ಶುಲ್ಕ ವಿಧಿಸಲಾಗುತ್ತದ.

ಪ್ರತಿ ವರ್ಷ ಕಸ ನಿರ್ವಹಣೆಗೆ  ಬಿಬಿಎಂಪಿ ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ.   ಆದರೆ ಕರದ ರೂಪದಲ್ಲಿ ವಸೂಲಿ ಮಡುತ್ತಿದ್ದಿದ್ದು ಕೇವಲ 40 ಕೋಟಿ ಮಾತ್ರ.  ಹೈ ಕೋರ್ಟ್ ನಲ್ಲೂ ಪಾಲಿಕೆ ಕ್ರಮಕ್ಕೆ ಅಸಮಾಧಾನ ವ್ಯಕ್ತವಾಗಿತ್ತು.  ಹೊಸ ನಿಯಮದ ಪ್ರಕಾರ ಕಸ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಕಸ ಎಸೆಯಬೇಡಿ ಎಂದು ತಂದು  ಹಾಕ್ತಿದ್ದವರಿಗೆ ತಕ್ಕ ಪಾಠ, ಹೀಗೆ ಮಾಡ್ಬೇಕು

ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರಿಗೆ ಸ್ಥಳದಲ್ಲೇ ದಂಡ ವಿಧಿಸಲಾಗುತ್ತದೆ.  ಹಸಿ ಕಸ ಒಣ ಕಸ ಬೇರ್ಪಡಿಸದೆ ಕೊಟ್ಟರೂ ದಂಡ ಕಟ್ಟಬೇಕಾಗುತ್ತದೆ.  ಪ್ಲಾಸ್ಟಿಕ್ ಬಳಕೆ ಮಾಡಿದರೆ 500  ರೂ. ವರೆಗೂ ದಂಡ ಕಟ್ಟಬೇಕು.

ಪ್ರತಿ ಮನೆಗಳಿಗೆ 200 ರೂ ಕರ ವಸೂಲಿಗೆ ಅನುಮತಿ ಸಿಕ್ಕಿದೆ.  ಒಂದು ಸಾವಿರ ಅಡಿ ಮನೆ ಇದ್ದರೆ 30 ರೂ.  1 ರಿಂದ 3 ಸಾವಿರದ ವರೆಗಿನ ಮನೆ ಇದ್ದರೆ 40 ರೂ., 3  ಸಾವಿರ ಮೇಲ್ಪಟ್ಟ ಮನೆಗಳಿದ್ದರೆ 50 ರೂ.  ಕಟ್ಟಬೇಕಾಗುತ್ತದೆ.

ವಾಣಿಜ್ಯ ಕಟ್ಟಡಕ್ಕೆ  ಬೇರೆ ಶುಲ್ಕ ನಿಗದಿ ಮಾಡಲಾಗಿದೆ. 

1 ಸಾವಿರದ ಅಡಿ ವರೆಗೆ 50 ರೂ. 
1-5 ಸಾವಿರ ಅಡಿ 100 ರೂ.
5 ಸಾವಿರ ಮೇಲ್ಪಟ್ಟು 300 ರೂ.

ಕೈಗಾರಿಕಾ ಕಟ್ಟಡ
1 ಸಾವಿರದ ವರೆಗೆ   100 ರೂ.
1-5 ಸಾವಿರ  200 ರೂ
5 ಸಾವಿರ ಮೇಲ್ಪಟ್ಟು  300

ಹೊಟೇಲ್, ಛತ್ರ, ಆಸ್ಪತ್ರೆ

10 ಸಾವಿರ ಚದರಡಿ  300 ರೂ.
10-50 ಸಾವಿರ  500ರೂ.
50 ಸಾವಿರ ಮೇಲ್ಪಟ್ಟು 600 ರೂ.

ಬಳಕೆದಾರರ ಕರ ಹೇಗೆ ವಿಧಿಸಬೇಕೆಂದು ಇನ್ನೂ ಪಾಲಿಕೆ ನಿರ್ಧರಿಸಿಲ್ಲ. ಆಸ್ತಿ ತೆರಿಗೆ ಪಾವತಿಸುವಾಗ ಸಂಗ್ರಹಿಸಬೇಕೇ ಎಂಬ ಚಿಂತನೆಯಲ್ಲಿ ಇದೆ.  ಬಳಕೆದಾರರ ಶುಲ್ಕ ವಿಧಿಸುವುದರಿಂದ ಸ್ವಚ್ಛ ಭಾರತ್ ಗೆ ಸಹಾಯವಾಗಲಿದೆ.  ಪ್ರತಿ ವರ್ಷ ಬಳಕೆದಾರರ ಶುಲ್ಕ ಶೇ. 5 ರಷ್ಟು ಹೆಚ್ಚಳವಾಗುತ್ತಾ ಹೋಗುತ್ತದೆ.  ತಾವು ಉತ್ಪಾದಿಸುವ ತ್ಯಾಜ್ಯದಿಂದ ಗೊಬ್ಬರ ತಯಾರಿಸಿದರೆ ಶೇಕಡಾ 50 ರಷ್ಟು ರಿಯಾಯಿತಿ  ಸಹ ಸಿಗಲಿದೆ.