ಬೆಂಗಳೂರು, [ನ.12]: ಇಂಟರ್ ನ್ಯಾಷನಲ್ ಇನ್ಸಿಟ್ಯೂಟ್ ಅಫ್ ಸೆಕ್ಯುರಿಟಿ ಆ್ಯಂಡ್ ಸೇಫ್ಟಿ ಮ್ಯಾನೇಜ್ಮೆಂಟ್ (ಐಐಎಸ್ಎಸ್ಎಂ) ನ 29ನೇ ಅಂತಾರಾಷ್ಟ್ರೀಯ ಸಮ್ಮೇಳನ ಇದೇ ನವೆಂಬರ್ 14 ಮತ್ತು 15 ರಂದು ಎರಡು ದಿನಗಳ ಕಾಲ ನಡೆಯಲಿದೆ.

ರಾಷ್ಟ್ರಪತಿ ಕೈಗೆ ಮಹಾ ರೂಲ್, ಮತ್ತೆ ಬರ್ತಾರ ಸ್ಯಾಂಡಲ್ವುಡ್ ಕ್ಲೀನ್; ನ.12ರ ಟಾಪ್ 10 ಸುದ್ದಿ!

ಬೆಂಗಳೂರು ನಗರದಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಎಂದು ಐಐಎಸ್‌ಎಸ್‌ಎಂನ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ರವೀಂದ್ರ ಕಿಶೋರ್ ಸಿನ್ಹಾ ಈ ಕುರಿತ ಮಾಹಿತಿ ನೀಡಿದರು.

ಇಂದು [ಮಂಗಳವಾರ] ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿನ್ಹಾ, ಭಾರತದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಈ ಭಾರಿಯ ವಾರ್ಷಿಕ ಜಾಗತಿಕ ಸಮಾವೇಶ ನವೆಂಬರ್ 14 ಮತ್ತು 15 ರಂದು ನಡೆಯಲಿದೆ. 

ಸಮಾವೇಶವನ್ನು ನಗರದ ಕಾರ್ನಾಡ್  ಹೋಟೆಲ್ ನಲ್ಲಿ ನಡೆಯಲಿದೆ. 'ಡಿಜಿಟಲ್ ಯುಗದಲ್ಲಿ ನಷ್ಟಗಳ ತಡೆಗಟ್ಟುವ ಹೊಸ ಆದರ್ಶಗಳು' ಎಂಬ ವಿಷಯದಡಿ ಈ ಸಮಾವೇಶ ನಡೆಯಲಿದೆ ಎಂದು ಹೇಳಿದರು.

ಸಮ್ಮೇಳನದಲ್ಲಿ ಕೇಂದ್ರ ಸಚಿವರಾದ ಸದಾನಂದ ಗೌಡ, ಸುರೇಶ್ ಅಂಗಡಿ ಮತ್ತು ರಾಜ್ಯ ಸರ್ಕಾರದ ಅನೇಕ ಸಚಿವರುಗಳು ಭಾಗವಹಿಸಲಿದ್ದು, ವ್ಯಾಪಾರ ವಲಯದಲ್ಲಿ ಭದ್ರತೆ, ಪಾರುಗಾಣಿಕಾ ಮತ್ತು ನಷ್ಟ ತಡೆಗಟ್ಟುವಿಕೆಗೆ ಸಂಬಂಧಿಸಿದ ಕ್ಲಿಷ್ಟಕರ ವಿಷಯಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದರು.

ಪ್ರಪಂಚದಾದ್ಯಂತದ 400-500 ವೃತ್ತಿಪರರು ಈ ವಿಷಯಗಳ ಕುರಿತಂತೆ ಚರ್ಚಿಸಲಿದ್ದಾರೆ. ಕೈಗಾರಿಕಾ ತಜ್ಞರು, ವಿಜ್ಞಾನಿಗಳು ಮತ್ತು ಪ್ರಮುಖ ಸಂಸ್ಥೆಗಳ ಪ್ರಾಧ್ಯಾಪಕರು ಅಂತಹ ಮತ್ತು ಇತರೆ ವಿಷಯಗಳ ಬಗ್ಗೆ ವಿಸ್ತಾರವಾಗಿ ವಿವರಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ರವೀಂದ್ರ ಕಿಶೋರ್ ಸಿನ್ಹಾ ಜತೆ ಕರ್ನಾಟಕ ಭದ್ರತಾ ಸೇವೆಗಳ ಸಂಘದ (ಕೆಎಸ್‌ಎಸ್‌ಎ) ಅಧ್ಯಕ್ಷ ಎಂ.ಸಿ.ಪ್ರಕಾಶ್ ಮತ್ತು ಬೆಂಗಳೂರು ಅಧ್ಯಾಯದ ಅಧ್ಯಕ್ಷ ಬಿ.ಎಂ.ಶಶಿಧರ್ ಉಪಸ್ಥಿತರಿದ್ದರು.