ಬಿಸಿಲು ಮಳೆ ಕಣ್ಣಮುಚ್ಚಾಲೆ ಮಧ್ಯೆ ವಿದ್ಯುತ್ ಕಡಿತ ಮಾಡೋ ಮೂಲಕ ಬೆಸ್ಕಾಂ ಸಿಲಿಕಾನ್ ಸಿಟಿ ಮಂದಿಗೆ ಶಾಕ್ ನೀಡ್ತಿದೆ. ನಾಳೆ ಇಡೀ ದಿನ ನಗರದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ ಆಗಲಿದೆ. ತುರ್ತು ನಿರ್ವಹಣಾ ಕಾಮಗಾರಿ ಹಾಗೂ ಕರೆಂಟ್ ಕಂಬಗಳಿಗೆ ಸಮಸ್ಯೆಯುಂಟಾದ ಹಿನ್ನೆಲೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. 

ವರದಿ: ಮಮತಾ ಮರ್ಧಾಳ ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು : ಬಿಸಿಲು ಮಳೆ ಕಣ್ಣಮುಚ್ಚಾಲೆ ಮಧ್ಯೆ ವಿದ್ಯುತ್ ಕಡಿತ ಮಾಡೋ ಮೂಲಕ ಬೆಸ್ಕಾಂ ಸಿಲಿಕಾನ್ ಸಿಟಿ ಮಂದಿಗೆ ಶಾಕ್ ನೀಡ್ತಿದೆ. ಈಗಾಗಲೇ ಒಮ್ಮೆ ಬಿಸಿಲು ಮತ್ತೊಮ್ಮೆ ಮೋಡ ಕವಿದ ವಾತಾವರಣ. ಇದರ ಮಧ್ಯೆ ಸಿಲುಕಿ ರೋಸಿ ಹೋಗಿರುವ ಜನರು ಎಚ್ಚೆತ್ತುಕೊಳ್ಳುವಷ್ಟರಲ್ಲಿ ಮತ್ತೆ ಕರೆಂಟ್ ಶಾಕ್ ನೀಡಿದೆ. ನಾಳೆ ಇಡೀ ದಿನ ನಗರದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ ಆಗಲಿದೆ. ತುರ್ತು ನಿರ್ವಹಣಾ ಕಾಮಗಾರಿ ಹಾಗೂ ಕರೆಂಟ್ ಕಂಬಗಳಿಗೆ ಸಮಸ್ಯೆಯುಂಟಾದ ಹಿನ್ನೆಲೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. 

ಅಲ್ಲದೆ ಕೆಲವೆಡೆ ವಿದ್ಯುತ್ ಟ್ರಾನ್ಸ್ ಫಾರ್ಮರ್ (Power transformer)ಗಳಿಗೂ ಹಾನಿಯಾಗಿದೆ. ಇವೆಲ್ಲವುಗಳ ದುರಸ್ಥಿ ಕಾರ್ಯವನ್ನು (Repair work) ಬೆಸ್ಕಾಂ (Bescom) ಕೈಗೆತ್ತಿಕೊಂಡಿದೆ. ಹೀಗಾಗಿ ಬೆಸ್ಕಾಂ ನಗರದ ನೂರಾರು ಕಡೆಗಳಲ್ಲಿ ಒಂದು ದಿನ ವಿದ್ಯುತ್ ಕಡಿತಗೊಳಿಸಿ ದುರಸ್ಥಿ ಕಾರ್ಯ ಶುರು ಮಾಡಲಿದೆ. ಹೀಗಾಗಿ ನಾಳೆ ಒಂದು ದಿನ ಬೆಂಗಳೂರಿಗರು ಕರೆಂಟ್ ಶಾಕ್ ಗೊಳಗಾಗೋದು ಖಂಡಿತ. 66/11 ಕೆ.ವಿ ಹೆಚ್.ಬಿ.ಆರ್ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕೆಲಸದ ಹಿನ್ನೆಲೆ ಬೆಳಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆಯವರೆಗೆ ಬಹುತೇಕ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ?

ಹೆಚ್.ಬಿ.ಆರ್. 1ನೇ ಬ್ಲಾಕ್, 2ನೇ ಬ್ಲಾಕ್, ಯಾಸಿನ್‌ ನಗರ, ಸುಭಾಶ್ ಲೇಔಟ್, ರಾಮ ದೇವಸ್ಥಾನದ ರಸ್ತೆ, ರಾಮದೇವ್ ಗಾರ್ಡನ್, ಕೃಷ್ಣ ರೆಡ್ಡಿ ಲೇಔಟ್, ಟೀಚರ್ಸ್‌ ಕಾಲೋನಿ, ಹೆಚ್.ಬಿ.ಆರ್. 3ನೇ ಬ್ಲಾಕ್, ಶಿವರಾಮಯ್ಯ ಲೇಔಟ್, ರಿಂಗ್ ರಸ್ತೆ, ಸರ್ವೀಸ್ ರಸ್ತೆ, ಕೆ.ಕೆ. ಹಳ್ಳಿ ಗ್ರಾಮ, ಸಿ.ಎಂ.ಆರ್.ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ(Kammanahalli Main Road), ರಾಮಯ್ಯ ಲೇಔಟ್, ಲಿಂಗರಾಜಪುರ, ಜಾನಕೀರಾಮ್ ಲೇಔಟ್, ಕನಕದಾಸ ಲೇಔಟ್, ಗೋವಿಂದಪುರ, ಇರ್ಷಾದ್‌ ನಗರ, ಫರೀದಾ ಶೂ ಫ್ಯಾಕ್ಟರಿ, ಅರೇಬಿಕ್ ಕಾಲೇಜ್, ಕೆ.ಜಿ.ಹಳ್ಳಿ, ಗೋವಿಂದಪುರ ಗ್ರಾಮ, ಕೆ.ಜಿ.ಹಳ್ಳಿ, ವಿನೋಬನಗರ, ಬಿ.ಎಂ.ಲೇಔಟ್, ಆರೋಗ್ಯಮ್ಮ ಲೇಔಟ್, ಕಾವೇರಿ ಗಾರ್ಡನ್ ಮತ್ತು ಸುತ್ತಲಿನ ಪ್ರದೇಶ. ಹೆಚ್.ಬಿ.ಆರ್. ಲೇಔಟ್ ೪ನೇ ಬ್ಲಾಕ್, ಯಾಸಿನ್‌ನಗರ, ೫ನೇ ಬ್ಲಾಕ್, ಹೆಚ್.ಬಿ.ಆರ್. ನಾಗವಾರ ಮುಖ್ಯರಸ್ತೆ, ನಾಗವಾರ, ಎನ್.ಜೆ.ಕೆ. ಗಾರ್ಮೆಂಟ್ಸ್,

ಬೆಂಗಳೂರು ವಿವಿ ವಿದ್ಯಾರ್ಥಿನಿ ಮೇಲೆ ಹರಿದ ಬಿಎಂಟಿಸಿ ಬಸ್‌: ಸ್ಥಿತಿ ಗಂಭೀರ, ಮುಂದುವರಿದ ಪ್ರತಿಭಟನೆ

ಬೈರನಕುಂಟೆ, ಕುಪ್ಪುಸ್ವಾಮಿ ಲೇಔಟ್, ಹೆಚ್.ಕೆ.ಬಿ.ಕೆ ಕಾಲೇಜ್, ೪ನೇ ಮತ್ತು ೫ನೇ ಹೆಚ್.ಬಿ.ಆರ್. ಲೇಔಟ್, ವಿದ್ಯಾ ಸಾಗರ, ಥಣಿಸಂದ್ರ, ಆರ್.ಕೆ. ಹೆಗಡೆನಗರ, ಕೆ.ನಾರಾಯಣಪುರ, ಎನ್.ಎನ್.ಹಳ್ಳಿ, ಬಾಲಾಜಿ ಲೇಔಟ್, ಫೇಸ್ 1 ರಿಂದ 3, ರೈಲ್ವೆ ಮೆನ್ಸ್ ಲೇಔಟ್, ಬಿ.ಡಿ.ಎಸ್. ಲೇಔಟ್, ಸೆಂಟ್ರಲ್ ಎಕ್‌ ಸೈಸ್, ಕೆ.ಕೆ. ಹಳ್ಳಿ, ಹೆಣ್ಣೂರು ಮುಖ್ಯರಸ್ತೆ, ಹೆಚ್.ಆರ್.ಬಿ.ಆರ್. ೩ನೇ ಬ್ಲಾಕ್,ಆಯಿಲ್ ಮಿಲ್ ರಸ್ತೆ, ಅರವಿಂದನಗರ, ನೆಹರು ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ಬೆಥೆಲ್‌ಸ್ಟ್ರಿಟ್, ಎ.ಕೆ.ಕಾಲೋನಿ, ಹೆಚ್.ಆರ್.ಬಿ.ಆರ್. 1ನೇ ಬ್ಲಾಕ್,80 ಅಡಿರಸ್ತೆ, ಸಿ.ಎಂ.ಆರ್. ರಸ್ತೆ, ಕಾರ್ಲೆ, ಹೆಗಡೆನಗರ, ನಾಗೇನಹಳ್ಳಿ, ಪೊಲೀಸ್ ಕ್ವಾಟ್ರ್ ಸ್, ಕೆಂಪೇಗೌಡ ಲೇಔಟ್, ಶಬರೀನಗರ, ಕೆ.ಎಂ.ಟಿ. ಲೇಔಟ್, ಭಾರತೀಯ ನಗರ, ನೂರ್ ನಗರ ಭಾರತ ಮಾತ ಲೇಔಟ್, ಭಾರತ ಮಾತ ಲೇಔಟ್, ಹಿದಾಯತ್ ನಗರ, ಲಿಡ್ಕರ್ ಕಾಲೋನಿ ಮತ್ತು ಸುತ್ತಲಿನ 300ಕ್ಕೂ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಬೆಂಗಳೂರು: ಕೇಸ್‌ ಸೋತ ವಕೀಲನ ವಿರುದ್ಧ ವಂಚನೆ ಕೇಸ್‌ ಹೂಡಿದ ಆರೋಗ್ಯ ವಿವಿ..!