ಆಕಾಶದಿಂದ ಕಂಡ ನಮ್ಮ ಬೆಂಗಳೂರು... ಪಿಂಕ್ ಸಿಟಿಯಾಯ್ತು ಗಾರ್ಡನ್ ಸಿಟಿ!
ವಸಂತಕಾಲದಲ್ಲಿ (Spring time) ಅರಳಿ ನಿಂತ ಹೂಗಳು ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಬೆಂಗಳೂರಿನ ಅಲ್ಲಲ್ಲಿ ದೊಡ್ಡ ದೊಡ್ಡ ಮರಗಳಲ್ಲಿ ಗುಲಾಬಿ ಬಣ್ಣದ ಹೂಗಳು ಅರಳಿ ನಿಂತಿದ್ದು, ಇದು ಸಿಲಿಕಾನ್ ವ್ಯಾಲಿಯ ಸೌಂದರ್ಯವನ್ನು ಹೆಚ್ಚಿಸಿದೆ.
ಬೆಂಗಳೂರು: ಉದ್ಯಾನ ನಗರಿ ಗಾರ್ಡನ್ ಸಿಟಿ ಸಿಲಿಕಾನ್ ಸಿಟಿ, ಐಟಿ ಬಿಟಿ ಹಬ್, ಬೆಂದಕಾಳೂರು ಮುಂತಾದ ಹಲವು ಹೆಸರು ಹಾಗೂ ಹಿರಿಮೆಯಿಂದ ಗುರುತಿಸಿಕೊಂಡಿರುವ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು ವಸಂತಕಾಲದಲ್ಲಿ ಆಕಾಶದಿಂದ ನೋಡುವಾಗ ಹೇಗೆ ಕಾಣಿಸುತ್ತೆ ಎಂಬ ಕುತೂಹಲ ಎಲ್ಲರಿಗೂ ಇದೆ. ಇದಕ್ಕೆ ಉತ್ತರವಾಗಿ ಡ್ರೋನ್ ಮೂಲಕ ಸೆರೆ ಹಿಡಿದ ವಿಡಿಯೋವೊಂದು ವೈರಲ್ ಆಗಿದೆ. ಬೆಂಗಳೂರಿನ ಸೌಂದರ್ಯಕ್ಕೆ ಕಳಶವಿಟ್ಟಂತಿದ್ದು, ನೋಡಲು ಎರಡು ಕಣ್ಣು ಸಾಲದೆಂಬಂತಿದೆ ಈ ಮನಮೋಹಕ ದೃಶ್ಯಾವಳಿ.
ವಸಂತಕಾಲದಲ್ಲಿ (Spring time) ಅರಳಿ ನಿಂತ ಹೂಗಳು ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಬೆಂಗಳೂರಿನ ಅಲ್ಲಲ್ಲಿ ದೊಡ್ಡ ದೊಡ್ಡ ಮರಗಳಲ್ಲಿ ಗುಲಾಬಿ ಬಣ್ಣದ ಹೂಗಳು ಅರಳಿ ನಿಂತಿದ್ದು, ಇದು ಸಿಲಿಕಾನ್ ವ್ಯಾಲಿಯ ಸೌಂದರ್ಯವನ್ನು ಹೆಚ್ಚಿಸಿದೆ. ಡ್ರೋಣ್ ಮೂಲಕ ವಿವಿಧ ಆಯಾಮದಿಂದ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ವೈಮಾನಿಕ ದೃಶ್ಯಗಳನ್ನು (Aerial view) ಸೆರೆ ಹಿಡಿಯುವ ಫೋಟೋಗ್ರಾಫರ್ ರಾಜ್ ಮೋಹನ್ ಎಂಬುವವರು ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಇವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬೆಂಗಳೂರಿನ ಸೌಂದರ್ಯ (Bangalore Beauty) ಜಗತ್ತಿಗೆ ಸಾರುವ ಎರಡು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದು, ಕಣ್ಮನ ಸೆಳೆಯುತ್ತಿದೆ.
ಮಣ್ಣಿನ ಉಳಿವಿಗಾಗಿ ಉದ್ಯಾನನಗರಿಯಲ್ಲಿ ಸದ್ಗುರು ಬೃಹತ್ ಬೈಕ್ ಜಾಥಾ
ಒಂದು 17 ನಿಮಿಷದ ವಿಡಿಯೋ ಪೋಸ್ಟ್ ಮಾಡಿದ ಅವರು, ಇದು ವರ್ಷದಲ್ಲಿ ಬೆಂಗಳೂರು ಗುಲಾಬಿ ಬಣ್ಣಕ್ಕೆ ತಿರುಗುವ ಸಮಯ ಎಂದು ಅವರು ಬರೆದುಕೊಂಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಬೆನ್ನಿಗನಹಳ್ಳಿ ಕೆರೆ ಪ್ರದೇಶದ 9 ಸೆಕೆಂಡ್‌ಗಳ ವಿಡಿಯೋ ಪೋಸ್ಟ್ ಮಾಡಿರುವ ಅವರು, ಇಂತಹ ಪ್ರದೇಶದಲ್ಲಿ ಮುಂಜಾನೆ ವಾಯುವಿಹಾರ ಮಾಡುವುದನ್ನು ಯಾರೂ ತಾನೇ ಇಷ್ಟಪಡುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಅತ್ತಿತ್ತ ದೊಡ್ಡ ದೊಡ್ಡ ಮರಗಳು ಹೂ ಬಿಟ್ಟು, ಗುಲಾಬಿ ಹಸಿರು ಬಣ್ಣದ ಸಂಯೋಜನೆಯಿಂದ ಕಂಗೊಳಿಸುತ್ತಿದ್ದರೆ, ಕೆಳಗೆ ರೈಲು ಓಡಾಡುತ್ತಿದ್ದು, ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ರೈಲ್ವೆ ಅಧಿಕಾರಿ ಅನಂತ್ ರುಪನಗುಡಿ (Ananth Rupanagudi) ಅವರು ಕೂಡ ಈ ವಿಡಿಯೋವನ್ನು ರಿಟ್ವಿಟ್ ಮಾಡಿಕೊಂಡಿದ್ದು, ಬೆಂಗಳೂರಿನ ಸುಂದರವಾದ ಚೆರ್ರಿ ಹೂವುಗಳ (Cherry flowers) ನಡುವೆ ರೈಲ್ವೆಯ ಸುಂದರ ವೈಮಾನಿಕ ದೃಶ್ಯ ಎಂದು ಅವರು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನವರಿಯಿಂದಲೇ ಗಾರ್ಡನ್ ಸಿಟಿ (Gurden city) ಬೆಂಗಳೂರಿನಲ್ಲಿ ಹೂ ಬಿಡಲು ಶುರುವಾಗಿ ನಗರಕ್ಕೆ ರಂಗು ನೀಡುತ್ತವೆ. ತಬೆಬುಯಾ ಹೆಸರಿನ ಈ ಹೂಗಳು, ಪ್ರತಿ ವರ್ಷ ವಸಂತಕಾಲದಲ್ಲಿ ಅರಳುತ್ತದೆ.
ಈ ಜಾಗದಲ್ಲಿ ನೀವು ಸೆಕೆಂಡ್‌ಗಳ ಕಾಲವೂ ವಾಹನ ಪಾರ್ಕಿಂಗ್ ಮಾಡುವಂತಿಲ್ಲ..!
ಬೆಂಗಳೂರು ತನ್ನ ಪ್ರಕೃತಿ ಸೌಂದರ್ಯದ ಹಾಗೂ ಸೊಗಸಾದ ವಾತಾವರಣಕ್ಕೆ ವಿಶ್ವ ಪ್ರಸಿದ್ಧವಾಗಿದೆ. ಇತ್ತೀಚೆಗೆ ಐಟಿ ಬಿಟಿ, ತಂತ್ರಜ್ಞಾನ, ಮೆಟ್ರೋ ಕಾರಣಕ್ಕೆ ಖ್ಯಾತಿ ಗಳಿಸಿರುವ ಬೆಂಗಳೂರು, ಹಲವು ದಶಕಗಳ ಹಿಂದೆಯಿಂದಲೂ ಇಲ್ಲಿನ ಹವಾನಿಯಂತ್ರಣದಂತಿರುವ ಸೆಕೆಯೂ ಅಲ್ಲದ ಚಳಿಯೂ ಅಲ್ಲದ ಸಮಭಾವದ ವಾತಾವರಣಕ್ಕೆ ವಿಶ್ವಪ್ರಸಿದ್ಧಿ ಪಡೆದಿದೆ. ಒಮ್ಮೆ ಬೆಂಗಳೂರಿನಲ್ಲಿ ಬಂದು ನೆಲೆಸಿ ಹಲವು ವರ್ಷಗಳ ಕಾಲ ಇರುವ ಪರವೂರಿನ ಪರರಾಜ್ಯದ ಪರದೇಶದ ಜನ ಇದೇ ಕಾರಣಕ್ಕೆ ಇಲ್ಲಿಂದ ಹೋಗುವುದಕ್ಕೆ ಮನಸ್ಸು ಮಾಡುವುದಿಲ್ಲ.