Asianet Suvarna News Asianet Suvarna News

ಬೆಂಗಳೂರು: ರಸ್ತೆ ಬದಿಯ ಬಿಗಿಕಂಬಗಳನ್ನೇ ಕದ್ದೊಯ್ದರು..!

ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿನ ಎಂಟು ಬೊಲ್ಲಾರ್ಡ್ (ಬಿಗಿ ಕಂಬ)ಗಳು ಕಾಣೆ ಯಾಗಿರುವ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಬಿಬಿಎಂಪಿಯು ಟೆಂಡರ್ ಶ್ಯೂರ್ ಕಾಮಗಾರಿ ಅಡಿ ಸೇಂಟ್ ಮಾರ್ಕ್ಸ್ ರಸ್ತೆ ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಮುಂಭಾಗದ ರಸ್ತೆಯನ್ನು ಅಭಿವೃದ್ಧಿಪಡಿಸಿತ್ತು.

fifteen bollards stolen from St Marks Road bangalore
Author
Bangalore, First Published Nov 7, 2019, 7:44 AM IST

ಬೆಂಗಳೂರು(ನ.07): ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿನ ಎಂಟು ಬೊಲ್ಲಾರ್ಡ್ (ಬಿಗಿ ಕಂಬ)ಗಳು ಕಾಣೆ ಯಾಗಿರುವ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.

ಬಿಬಿಎಂಪಿಯು ಟೆಂಡರ್ ಶ್ಯೂರ್ ಕಾಮಗಾರಿ ಅಡಿ ಸೇಂಟ್ ಮಾರ್ಕ್ಸ್ ರಸ್ತೆ ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಮುಂಭಾಗದ ರಸ್ತೆಯನ್ನು ಅಭಿವೃದ್ಧಿಪಡಿಸಿತ್ತು. ಈ ಮಾರ್ಗದಲ್ಲಿ ಮಾರ್ಚ್‌ನಲ್ಲೂ ಮೂರು ಬೊಲ್ಲಾರ್ಡ್ಗಳು ಕಾಣೆಯಾಗಿದ್ದವು. ಇತ್ತೀಚೆಗೆ 8 ಬೊಲ್ಲಾರ್ಡ್‌ಗಳು ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಬುಧವಾರ ಬಿಬಿಎಂಪಿಯ ಅಧಿಕಾರಿಗಳು ದೂರು ದಾಖಲಿಸಿದ್ದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಮುಂಭಾಗದ ರಸ್ತೆಯಲ್ಲಿ ಅ.28ಕ್ಕೆ ಟಾಟಾಎಸ್ ಮತ್ತು ಬುಲೆರೋ ವಾಹನಗಳ ನಡುವೆ ಅಪಘಾತ ಸಂಭವಿ ಸಿತ್ತು. ಈ ಅಪಘಾತದಲ್ಲಿ ೮ ಬೊಲ್ಲಾಡ್ ಗರ್ಳಿಗೆ ಹಾನಿಯಾಗಿತ್ತು ಹಾಗೂ ಬೊ ಲ್ಲಾರ್ಡ್‌ಗಳಿಂದ ವಾಹನ ಸಂಚಾರಕ್ಕೂ ತೊಂದರೆ ಆಗುತ್ತಿತ್ತು. ಹೀಗಾಗಿ, ಬೊಲ್ಲಾ ರ್ಡ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಬಾರ್ ಗಳಿಗೆ ದೇವರ ಹೆಸರು ನಿಷಿದ್ಧ

ಬಿಬಿಎಂಪಿಯ ಅಧಿಕಾರಿಗಳು ದೂರು ನೀಡಿದ ಮೇಲೆ 8 ಬೊಲ್ಲಾರ್ಡ್ಗಳನ್ನು ಈ ರಸ್ತೆಯ ನಿರ್ವಹಣೆ ಜವಾಬ್ದಾರಿ ಹೊಂದಿರುವ ಪ್ರೆಸ್ಟೀಜ್ ಸಂಸ್ಥೆಗೆ ಹಸ್ತಾಂತರಿಸಲಾಗಿದ್ದು, ಸಂಸ್ಥೆ ಎಲ್ಲ ಬೊಲ್ಲಾರ್ಡ್‌ಗಳನ್ನು ಮರಳಿ ಅಳವಡಿಸಿದೆ ಎಂದು ಪಾಲಿಕೆ ಅಧಿಕಾರಿಗಳು ಮಾ ಹಿತಿ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ರುವ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ಇಂತಹ ಕೃತ್ಯ ನಡೆದರೆ ಗಮನಕ್ಕೆ ತನ್ನಿ ಎಂದು ಕೋರಿದ್ದಾರೆ.

ಟಿಪ್ಪು ಜಯಂತಿ: 'ನಿಮಗೆ ಬಿಟ್ಟಿದ್ದು' ಎಂದ ಹೈಕೋರ್ಟ್

Follow Us:
Download App:
  • android
  • ios