ಬೆಂಗಳೂರು(ನ. 06) ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಹೈಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ. ಸರ್ಕಾರದ ವತಿಯಿಂದ ಜಯಂತಿ ಆಚರಣೆ ಇಲ್ಲ. ಬೇಕಾದರೆ ಖಾಸಗಿಯಾಗಿ ಆಚರಿಸಿಕೊಳ್ಳಬಹುದು ಎಂದು ಹೇಳಿ ಜನವರಿ 3ಕ್ಕೆ ವಿಚಾರಣೆ ಮುಂದಕ್ಕೆ ಹಾಕಿದೆ.

ಈ ಮೂಲಕ ಹಾವು ಸಾಯಬಾರದು ಕೋಲು ಮುರಿಯಬಾರದು ಎಂಬ ನೀತಿಯಂತೆ ತೀರ್ಪು ಬಂದಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. 

ಮೋದಿಗಿಂತ ಟಿಪ್ಪು ಒಳ್ಳೆ ಆಡಳಿತಗಾರ

ಸಿದ್ದರಾಮಯ್ಯ ಸಿಎಂ ಆಗಿದ್ದಾಗ 2015ರಲ್ಲಿ ಟಿಪ್ಪು ಜಯಂತಿ ಆಚರಣೆ ಆರಂಭವಾಗಿತ್ತು. ಸರ್ಕಾರದ ವತಿಯಿಂದ ಆಚರಣೆ ಮಾಡಿ ವಿಧಾನಸೌಧದಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಾದ ನಂತರ ದೋಸ್ತಿ ಸರ್ಕಾರದ ಸಂದರ್ಭದಲ್ಲಿಯೂ ಟಿಪ್ಪು ಜಯಂತಿಗೆ ಯಾವುದೇ ಅಡಚಣೆ ಉಂಟಾಗಿರಲಿಲ್ಲ. ಆದರೆ ಅಂದು ಸಿಎಂ ಆಗಿದ್ದ ಕುಮಾರಸ್ವಾಮಿ ಭಾಗವಹಿಸಿರಲಿಲ್ಲ. 

ನಂತರ ಬದಲಾದ ರಾಜಕೀಯ ವಾತಾವರಣದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಟಿಪ್ಪು ಜಯಂತಿಗೆ ನಿಷೇಧ ಹೇರಿತ್ತು. ಈ ಕುರಿತು ನ್ಯಾಯಾಲಯದಲ್ಲಿಯೂ ಅರ್ಜಿ ಸಲ್ಲಿಕೆಯಾಗಿದ್ದು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿಲಾಗಿದೆ.