Asianet Suvarna News Asianet Suvarna News

ಒತ್ತುವರಿದಾರರಿಗೆ ಸಹಕರಿಸಿದ್ದ ತಹಶೀಲ್ದಾರ್ ಅಜಿತ್‌ ರೈ ಅಮಾನತು

ರಾಜಧಾನಿಯಲ್ಲಿ ಪ್ರತಿವರ್ಷ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿ ಜನರು ಸಂಕಷ್ಟ ಅನುಭವಿಸಲು ಕಾರಣವಾದ ರಾಜಕಾಲುವೆ ಒತ್ತುವರಿದಾರರಿಗೆ ಸಹಕಾರ ನೀಡಿ, ಬಿಬಿಎಂಪಿ ವತಿಯಿಂದ ಕೈಗೊಳ್ಳಲಾದ ಒತ್ತುವರಿ ತೆರವು ಕಾರ್ಯಾಚರಣೆಗೆ ಸಹಕರಿಸಿ ಬೆಂಗಳೂರು ಪೂರ್ವ ತಾಲೂಕಿನ (ಕೆ.ಆರ್.ಪುರ) ತಹಶೀಲ್ದಾರ್ ಅಜಿತ್‌ ಕುಮಾರ್‍‌ ರೈ ಅವರನ್ನು ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ.

 

Cooperated with the squatters Tehsildar Ajit Rai was suspended
Author
First Published Nov 24, 2022, 4:36 PM IST

ಬೆಂಗಳೂರು (ನ.24): ರಾಜಧಾನಿಯಲ್ಲಿ ಪ್ರತಿವರ್ಷ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿ ಜನರು ಸಂಕಷ್ಟ ಅನುಭವಿಸಲು ಕಾರಣವಾದ ರಾಜಕಾಲುವೆ ಒತ್ತುವರಿದಾರರಿಗೆ ಸಹಕಾರ ನೀಡಿ, ಬಿಬಿಎಂಪಿ ವತಿಯಿಂದ ಕೈಗೊಳ್ಳಲಾದ ಒತ್ತುವರಿ ತೆರವು ಕಾರ್ಯಾಚರಣೆಗೆ ಸಹಕರಿಸಿ ಬೆಂಗಳೂರು ಪೂರ್ವ ತಾಲೂಕಿನ (ಕೆ.ಆರ್.ಪುರ) ತಹಶೀಲ್ದಾರ್ ಅಜಿತ್‌ ಕುಮಾರ್ ರೈ ಅವರನ್ನು ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ.

ಕಳೆದ ಮೂರು ತಿಂಗಳಲ್ಲಿ ಮಹದೇವಪುರರಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ಜಾಗತಿಕ ಮಟ್ಟದಲ್ಲಿ ನಗರದ ಮಾನವನ್ನು ಹರಾಜು ಹಾಕಿತ್ತು. ಇದರಿಂದ ಜಾಗತಿಕವಾಗಿ ಪ್ರಸಿದ್ಧಿಯಾಗಿರುವ ವಿಪ್ರೋ (Vipro) ಸಂಸ್ಥೆ ಸೇರಿದಂತೆ ಅನೇಕ ಐಟಿ-ಬಿಟಿ (IT-BT) ಸಂಸ್ಥೆಗಳುಯ ಕೂಡ ಜಲಾವೃತ ಆಗಿದ್ದವು. ಈ ಘಟನೆಯಿಂದ ಸರ್ಕಾರಕ್ಕೆ ಭಾರಿ ಮುಖಭಂಗ (abashment) ಉಂಟಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಸಚಿವ ಆರ್. ಅಶೋಕ್‌ (R.Ashok) ಹಾದಿಯಾಗಿ ರಾಜಧಾನಿಯ ಎಲ್ಲ ಸಚಿವರು ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಬಿಬಿಎಂಪಿಗೆ (BBMP) ಸೂಚನೆ ನೀಡಲಾಗಿತ್ತು. 

ಬಲಿ ತೆಗೆದುಕೊಂಡ ರಕ್ಕಸ ರಾಜಕಾಲುವೆ: ಬಿಬಿಎಂಪಿಗೆ ಇನ್ನೆಷ್ಟು ಜನರ ಪ್ರಾಣ ಬೇಕು?

ಬಿಬಿಎಂಪಿ ವತಿಯಿಂದ ಮಹದೇವಪುರ(Maadevapura)ದಲ್ಲಿ ಕಳೆದ ಮೂರು ತಿಂಗಳಿಂದ ಒತ್ತವರಿ ತೆರವು ಕಾರ್ಯಾಚರಣೆ ಮಾಡುತ್ತಿದ್ದರೂ, ಇದಕ್ಕೆ ಕಾನೂನಾತ್ಮಕವಾಗಿ ಒಂದಲ್ಲಾ ಒಂದು ತೊಡಕು ಉಂಟಾಗುತ್ತಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪಾಲಿಕೆ ಅಧಿಕಾರಿಗಳು ಬೇಧಿಸಿದಾಗ ಸ್ಥಳೀಯ ತಹಶೀಲ್ದಾರ್‍‌ ಎಸ್. ಅಜಿತ್‌ ಕುಮಾರ್‍‌ ರೈ (Ajith kumar rai) ಒತ್ತುವರಿದಾರರಿಗೆ ಸಹಕಾರ ನೀಡುವ ಮೂಲಕ ಕಾನೂನಾತ್ಮಕವಾಗಿ ತೆರವು ಮಾಡದಂತೆ ನೋಡಿಕೊಂಡಿದ್ದಾರೆ. ಒತ್ತುವರಿ ತೆರವು ಕಾರ್ಯಕ್ಕೆ ತಹಶೀಲ್ದಾರ್‍‌ ವತಿಯಿಂದ ನಿರಂತರ ತಕರಾರು ಉಂಟಾಗುವಂತೆ ಮಾಡಿದ್ದಾರೆ. ಜತೆಗೆ, ಒತ್ತುವರಿದಾರರು ನ್ಯಾಯಾಲಯಗಳಿಂದ ಸ್ಟೇ ಆದೇಶ (Stay order)ತರಲು ಕೂಡ ನೆರವಾಗಿದ್ದಾರೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ಮುಖ್ಯ ಆಯುಕ್ತರಿಂದ ವರ್ಗಕ್ಕೆ ಮನವಿ: ಮಹದೇವಪುರದಲ್ಲಿನ ರಾಜಕಾಲುವೆ ಅಕ್ರಮ ಒತ್ತುವರಿ ಕಟ್ಟಡ ಅಥವಾ ಇತರೆ ನಿರ್ಮಾಣಗಳನ್ನು ತೆಗೆಯಲು ಕಂದಾಯ ಇಲಾಖೆ (Revenue Department)ಯಿಂದ ನೋಟೀಸ್ (Notice) ನೀಡಿ, ತುರ್ತಾಗಿ ಆದೇಶ ಒತ್ತುವರಿ ನೀಡಿದ್ದಲ್ಲಿ ಪಾಲಿಕೆಯಿಂದ ತೆರವುಗೊಳಿಸಲು ಸಾಧ್ಯವಾಗುತ್ತದೆ. ಆದರೆ, ಬೆಂಗಳೂರು ಪೂರ್ವ ತಾಲ್ಲೂಕು (ಕೆ.ಆರ್.ಪುರ) ತಹಶೀಲ್ದಾರ್ ಎಸ್. ಅಜಿತ್ ಕುಮಾರ್  ಸರಿಯಾದ ರೀತಿಯಲ್ಲಿ ವಿಚಾರಣೆ ಮಾಡದೆ, ಆದೇಶ ನೀಡಿದ್ದರೂ ಸಹ ತಡವಾಗಿ ಬಿಬಿಎಂಪಿಗೆ ಕಳುಹಿಸಿರುವುದು ಕಂಡುಬಂದಿರುತ್ತದೆ. ಈ ಎಲ್ಲಾ ನ್ಯೂನ್ಯತೆ (Defect)ಗಳಿಂದ ನ್ಯಾಯಾಲಯವು ಒತ್ತುವರಿ ತೆರವು ಕಾರ್ಯಾಚರಣೆಗೆ ತಡೆಯಾಜ್ಞೆ (Injunction) ನೀಡಿರುವುದು ಗಮನಕ್ಕೆ ಬಂದಿದೆ. ಸದರಿ ಅಧಿಕಾರಿಯವರನ್ನು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಜಾಗದಲ್ಲಿ ಮುಂದುವರೆಸಬಾರದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‍‌ ಗಿರಿನಾಥ್‌ ಸರ್ಕಾರಕ್ಕೆ ಪತ್ರ ಬರೆದದ್ದರು.

Rajakaluve Encroachment: ಒತ್ತುವರಿ ತೆರವು ವಿರೋಧಿಸಿ ದಂಪತಿ ಆತ್ಮಹತ್ಯೆಗೆ ಪ್ರಯತ್ನ

ದುರ್ನಡತೆ ಹಿನ್ನೆಲೆಯಲ್ಲಿ ಅಮಾನತು: ಬಿಬಿಎಂಪಿ ಮುಖ್ಯ ಆಯುಕ್ತರು ಸಲ್ಲಿಸದ ಪ್ರಸ್ತಾವನೆ ಪರಿಗಣಿಸಿ ತಹಶೀಲ್ದಾರ್ ಎಸ್. ಅಜಿತ್ ಕುಮಾ‌ ರೈ ವಿರುದ್ಧದ ದುರ್ನಡತೆ (Misbehavior) ಹಾಗೂ ಕರ್ತವ್ಯ ಲೋಪಗಳಿಗಾಗಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು ಅನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ (suspension) ಆದೇಶಿಸಲಾಗಿದೆ. ಸದರಿ ಅಧಿಕಾರಿಯವರ ಹುದ್ದೆಯ ಮೇಲಿನ ಲೀನ್ ಅನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ಸಹಾಯಕ ನಿರ್ದೇಶಕರು (ತಹಶೀಲ್ದಾರ್ ಗ್ರೇಡ್-2) ಹುದ್ದೆಗೆ ವರ್ಗಾಯಿಸಲಾಗಿದೆ.

Follow Us:
Download App:
  • android
  • ios