ಬಿಪಿಎಲ್ ಕಾರ್ಡ್‌ದಾರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ. ರೇಷನ್ ಅಂಗಡಿಯವರ ದಾದಾಗಿರಿಗೆ ಬ್ರೇಕ್ ಬಿದ್ದಿದ್ದು, ಕಳಪೆ ಧಾನ್ಯ ಸಿಕ್ಕರೆ ತಕ್ಷಣವೇ ರೇಷನ್ ಅಂಗಡಿ ಬದಲಾಯಿಸುವ ಬಿಗ್ ಪವರ್ ಕಾರ್ಡ್‌ದಾರರಿಗೆ ಸಿಕ್ಕಿದೆ. ಸಂಪೂರ್ಣ ವಿವರ ಇಲ್ಲಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ, ಕೇಂದ್ರ ಸರ್ಕಾರ ಜಾರಿಗೆ ತಂದ 'ಒನ್ ನೇಷನ್ ಒನ್ ರೇಷನ್ ಕಾರ್ಡ್' (ONORC) ಯೋಜನೆಯು ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಸಂಪೂರ್ಣ 'ಆಯ್ಕೆಯ ಸ್ವಾತಂತ್ರ್ಯ' ಮತ್ತು ಹೊಸ ಶಕ್ತಿ ತಂದುಕೊಟ್ಟಿದೆ. ಸರಿಯಾಗಿರದ ಕಳಪೆ ಮಟ್ಟದ ಅಕ್ಕಿ ನೀಡಿದರೆ ಮುಲಾಜಿಲ್ಲದೇ ನೀವು ರೇಷನ್‌ ಅಂಗಡಿ ಬದಲಿ ಮಾಡಬಹುದಾ? ಕೇಂದ್ರ ಕೊಟ್ಟ ಪವರ್‍‌ ಆದರೂ ಏನು? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್.

ಕಳಪೆ ರೇಷನ್ ನೀಡಿದರೆ ಅಂಗಡಿ ಚೇಂಜ್!

ಹಿಂದೆ ಕಾರ್ಡ್‌ನಲ್ಲಿ ನಮೂದಿಸಿದ ಪಡಿತರ ಅಂಗಡಿಯಲ್ಲೇ ರೇಷನ್ ಪಡೆಯುವುದು ಕಡ್ಡಾಯವಾಗಿತ್ತು. ಆದರೆ ಈಗ ಕಳಪೆ ಧಾನ್ಯ, ಕಡಿಮೆ ತೂಕ ಅಥವಾ ಡೀಲರ್ ಕಿರಿಕಿರಿ ನೀಡಿದರೆ, ಯಾವುದೇ ಅರ್ಜಿ ನೀಡದೆ ತಕ್ಷಣವೇ ಪಕ್ಕದ ಬೇರೆ ಸರ್ಕಾರಿ ರೇಷನ್ ಅಂಗಡಿಗೆ ತೆರಳಿ ಪಡಿತರ ಪಡೆಯಬಹುದು.

ರೇಷನ್ ಮಾಲೀಕರ ದಾದಾಗಿರಿಗೆ ಬ್ರೇಕ್!

ರೇಷನ್ ಡೀಲರ್‌ಗಳ ಆದಾಯ ಅಥವಾ ಕಮಿಷನ್ ಅವರು ವಿತರಿಸುವ ಧಾನ್ಯದ ಪ್ರಮಾಣದ ಮೇಲೆ ಆಧಾರಿತವಾಗಿರುತ್ತದೆ. ಗ್ರಾಹಕರು ಬೇರೆ ಅಂಗಡಿಗೆ ತೆರಳಿದರೆ ಡೀಲರ್‌ಗೆ ನೇರ ಆರ್ಥಿಕ ನಷ್ಟವಾಗುತ್ತದೆ. ಹೀಗಾಗಿ ಬಿಪಿಎಲ್ ಕಾರ್ಡ್‌ದಾರರು ನಾನು ಬೇರೆ ಅಂಗಡಿಗೆ ಹೋಗುತ್ತೇನೆ ಎಂಬ ಒಂದು ಮಾತು ಡೀಲರ್‌ಗಳು ಕಡ್ಡಾಯವಾಗಿ ಉತ್ತಮ ಸೇವೆ ನೀಡುವಂತೆ ಮಾಡಿದೆ.

ದತ್ತಾಂಶ ಹೊರಹಾಕಿದ ಅಚ್ಚರಿಯ ಸತ್ಯ!

ಬಿಹಾರದ ಸುಮಾರು 89.1 ಕೋಟಿ ಪಡಿತರ ವಹಿವಾಟುಗಳ ದತ್ತಾಂಶದ ಪ್ರಕಾರ, 38% ರಷ್ಟು ನಿಗದಿತ ಅಂಗಡಿಯಿಂದ ರೇಷನ್ ಪಡೆದಿದ್ದಾರೆ. ಶೇ. 55 ರಷ್ಟು ತಮ್ಮದೇ ಬ್ಲಾಕ್‌ನ ಬೇರೆ ರೇಷನ್ ಅಂಗಡಿಗೆ ಬದಲಾಯಿಸಿ ಪಡಿತರ ಪಡೆದಿದ್ದಾರೆ. ಇದರಲ್ಲಿ ಶೇ.1 ರಷ್ಟು ಮಾತ್ರ ಬೇರೆ ರಾಜ್ಯಗಳಲ್ಲಿ ಪಡೆದಿದ್ದಾರೆ. ಅಂದರೆ ಈ ಯೋಜನೆಯಿಂದ ಅಂತರರಾಜ್ಯ ವಲಸಿಗರಿಗಿಂತ ಹೆಚ್ಚಾಗಿ ಸ್ಥಳೀಯ ಬಿಪಿಎಲ್ ಕಾರ್ಡ್‌ದಾರರೇ ರೇಷನ್ ಅಂಗಡಿಯವರ ಏಕಸ್ವಾಮ್ಯವನ್ನು ಮುರಿದು ಲಾಭ ಪಡೆದುಕೊಂಡಿದ್ದಾರೆ ಎನ್ನುವುದು ಸಾಭೀತಾಗಿದೆ.

ದೇಶದ ಎಲ್ಲೇ ಇದ್ದರೂ ಪಡಿತರ ಲಭ್ಯ!

ಉದ್ಯೋಗ ಅಥವಾ ಕೆಲಸದ ನಿಮಿತ್ತ ದೇಶದ ಯಾವುದೇ ಭಾಗಕ್ಕೆ ತೆರಳಿದರೂ, ಆಧಾರ್ ಆಧಾರಿತ ಬಯೋಮೆಟ್ರಿಕ್ ಸೌಲಭ್ಯದ ಮೂಲಕ ತಮ್ಮ ಹಕ್ಕಿನ ಪಡಿತರ ಪಡೆದುಕೊಳ್ಳಬಹುದು. ಒಂದೇ ಕುಟುಂಬದ ಪಡಿತರವನ್ನು ಎರಡು ಭಾಗಗಳಾಗಿ ವಿಂಗಡಿಸಿ, ಸ್ವಲ್ಪ ಭಾಗವನ್ನು ಸ್ವಗ್ರಾಮದಲ್ಲಿ ಕುಟುಂಬದವರು ಹಾಗೂ ಇನ್ನುಳಿದ ಭಾಗವನ್ನು ವಲಸೆ ಹೋದ ಸ್ಥಳದಲ್ಲಿ ಕಾರ್ಮಿಕರು ಪಡೆಯುವ ಅನುಕೂಲವೂ ಇದೆ.

ಹೆಚ್ಚಿನ ಬೆಲೆ ಮತ್ತು ತೂಕದ ಮೋಸಕ್ಕೆ ಶಾಶ್ವತ ಮುಕ್ತಿ!

ರೇಷನ್ ಅಂಗಡಿಯವರು ಇನ್ಮುಂದೆ ಕಳಪೆ ಮಟ್ಟದ ಅಕ್ಕಿ,ಗೋಧಿ ನೀಡುವುದು, ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವುದು ಅಥವಾ ತೂಕದಲ್ಲಿ ಮೋಸ ಮಾಡುವುದಕ್ಕೆ ತಡೆ ಬಿದ್ದಿದೆ. ರೇಷನ್ ಅಂಗಡಿಯವನು ತೂಕದಲ್ಲಿ ಮೋಸ ಮಾಡಿದರೆ ಬಿಪಿಎಲ್ ಕಾರ್ಡ್‌ದಾರರು ತಕ್ಷಣವೇ ಪಕ್ಕದ ಬೇರೆ ರೇಷನ್ ಅಂಗಡಿಗೆ ತೆರಳಿ ಸರಿಯಾದ ಪ್ರಮಾಣದ ಧಾನ್ಯ ಪಡೆಯಬಹುದು

ರೇಷನ್ ಡೀಲರ್‌ಗಳ ಆದಾಯಕ್ಕೆ ನಷ್ಟದ ಭೀತಿ!

ರೇಷನ್ ಡೀಲರ್‌ಗಳ ಸರ್ಕಾರಿ ಕಮಿಷನ್ ಅವರು ಪ್ರತಿ ತಿಂಗಳು ಎಷ್ಟು ಪ್ರಮಾಣದ ಧಾನ್ಯ ವಿತರಿಸುತ್ತಾರೆ ಎಂಬುದರ ಮೇಲೆಯೇ ಆಧಾರಿತವಾಗಿರುತ್ತದೆ ಗ್ರಾಹಕರು ಅವರ ಸೇವೆಯಿಂದ ಬೇಸತ್ತು ಪಕ್ಕದ ಅಂಗಡಿಗೆ ಹೋದರೆ ಡೀಲರ್‌ಗೆ ನೇರ ಆರ್ಥಿಕ ನಷ್ಟವಾಗುತ್ತದೆ. ಹೀಗಾಗಿ, ಕಮಿಷನ್ ಉಳಿಸಿಕೊಳ್ಳಲು ಡೀಲರ್‌ಗಳು ಕಡ್ಡಾಯವಾಗಿ ಸೇವೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಮತ್ತು ಗ್ರಾಹಕರನ್ನು ಗೌರವದಿಂದ ನಡೆಸಿಕೊಳ್ಳಲು ಬದ್ಧರಾಗಿದ್ದಾರೆ