Asianet Suvarna News Asianet Suvarna News

ಬೆಂಗಳೂರು ಟ್ರಾಫಿಕ್ ಕುರಿತು ಸ್ಥಳೀಯರು ಅಭಿಪ್ರಾಯವೇನು? ಕುತೂಹಲ ಮಾಹಿತಿ ಬಿಚ್ಚಿಟ್ಟ B.PAC ಸಮೀಕ್ಷೆ!

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ಇಲ್ಲಿನ ರಸ್ತೆಗಳು, ಮೆಟ್ರೋ, ಸಾರಿಗೆ ವ್ಯವಸ್ಥೆಗಳು ಹೊರಗಿನಿಂದ ಬಂದ ಬಹುತೇಕರಿಗೆ ವಾಕರಿಗೆ ತಂದಿದೆ ನಿಜ. ಆದರೆ ಪ್ರತಿ ದಿನ ಇದೇ ಟ್ರಾಫಿಕ್ ಸಮಸ್ಯೆಯಲ್ಲಿ ಸಾಗುವ ಇಲ್ಲಿನ ಸ್ಛಳೀಯರು ಅಭಿಪ್ರಾಯವೇನು? ಬೆಂಗಳೂರಿನ ಸಮಸ್ಯೆಗಳ ಕುರಿತು ಸ್ಥಳೀಯರು ಹೇಳುವುದೇನು? ಈ ಕುರಿತ ಬಿ.ಪ್ಯಾಕ್ ಸಮೀಕ್ಷಾ ವರದಿ ಇಲ್ಲಿದೆ.

Bpac citizen perception Survey 2022 reveals 57 percent of bengaluruians not happy with Road traffic ckm
Author
First Published Sep 22, 2022, 5:59 PM IST

ಬೆಂಗಳೂರು(ಸೆ.22):  ಬೆಂಗಳೂರಿನ ಸಂಚಾರ ವ್ಯವಸ್ಥೆ ವಿಶ್ವದಲ್ಲೇ ಭಾರಿ ಸದ್ದು ಮಾಡಿದೆ. ಭಾರತ ಸೇರಿದಂತೆ ಹಲವು ಇತರ ದೇಶಗಳ ಜನರು ಬೆಂಗಳೂರನ್ನು ಇಷ್ಟಪಡುತ್ತಾರೆ. ಆದರೆ ಇಲ್ಲಿನ ಟ್ರಾಫಿಕ್ ವಿಚಾರ ಬಂದರೆ ಬೆಂಗಳೂರು ಸಹವಾಸವೇ ಬೇಡ ಎನ್ನುತ್ತಾರೆ. ಇಲ್ಲಿನ ಸಂಟಾರ ದಟ್ಟಣೆ, ಟ್ರಾಫಿಕ್ ಜಾಮ್ ಎಲ್ಲರಿಗೂ ಬೇಸರ ತರಿಸುವ ವಿಚಾರ. ಆದರೆ ಬೆಂಗಳೂರು ಟ್ರಾಫಿಕ್, ಇಲ್ಲಿನ ರಸ್ತೆ, ಮೂಲಸೌಕರ್ಯ ಕುರಿತು ಸ್ಥಳೀಯರು ಏನು ಹೇಳುತ್ತಾರೆ ಗೊತ್ತಾ? ಬೆಂಗಳೂರಿನ ಶೇಕಡಾ 57ರಷ್ಟು ಮಂದಿ ನಗರದ ಸಂಚಾರ ವ್ಯವಸ್ಥೆ ಹಾಗೂ ಆಡಳಿತ ತೃಪ್ತಿಕರವಾಗಿಲ್ಲ ಎಂದಿದ್ದಾರೆ. ಆಡಳಿತದಲ್ಲಿನ ದೂರದೃಷ್ಟಿ ಕೊರತೆ, ಸಮರ್ಪಕ ಯೋಜನೆಗಳ ಕೊರತೆಯನ್ನು ಜನ ಬೊಟ್ಟು ಮಾಡಿದ್ದಾರೆ. ಬೆಂಗಳೂರಿನ ಅವ್ಯವಸ್ಥೆ, ಇಲ್ಲಿನ ವ್ಯವಸ್ಥೆ, ಆಡಳಿತ, ಟ್ರಾಫಿಕ್ ಸೇರಿದಂತೆ ಎಲ್ಲಾ ವಿಚಾರಗಳನ್ನು ಕೈಗೆತ್ತಿಕೊಂಡು ಬಿ.ಪ್ಯಾಕ್ ಸಮೀಕ್ಷೆ ನಡೆಸಿ ಉತ್ತರ ನೀಡಿದೆ. ಈ ವರ್ಷದ ಆರಂಭದಲ್ಲಿ ಬಿ ಪ್ಯಾಕ್ ಸಂಸ್ಥೆ ಬೆಂಗಳೂರು ನಾಗರೀಕರ ಅಭಿಪ್ರಾಯವನ್ನು ಸಂಗ್ರಹಿಸಿದೆ. ಬಿಬಿಎಂಪಿಯ 198 ವಾರ್ಡ್ ಗಳ ಪೈಕಿ 186 ವಾರ್ಡ್ ಗಳನ್ನು ಒಳಗೊಂಡು, 8 ವಲಯಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. 8405 ಮಂದಿಯ ಪ್ರತಿಕ್ರಿಯೆ ಸಂಗ್ರಹಿಸಲಾಗಿದ್ದು, ಬೆಂಗಳೂರಿನ ಕುರಿತ ಕುತೂಹಲರ ಮಾಹಿತಿ ಬಹಿರಂಗವಾಗಿದೆ. 

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಇನ್ನೂ ರಸ್ತೆ ಅಗಲೀಕರಣಕ್ಕೆ ಜಾಗವೇ ಇಲ್ಲದಾಗಿದೆ. ಫ್ಲೈ ಓವರ್, ಅಂಡರ್ ಪಾಸ್ ಸೇರಿದಂತೆ ಇರುವ ಮಾರ್ಗಗಳನ್ನು ಬಳಸಿಕೊಂಡರು ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗುತ್ತಿಲ್ಲ. ಇತ್ತ ಮಳೆ ಬಂದರೆ ರಸ್ತೆಗಳು ನದಿಯಂತಾಗುತ್ತಿದೆ. ಹಲವು ಪ್ರದೇಶಗಳ ಒಳಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಅತೀ ವೇಗವಾಗಿ ಬೆಂಗಳೂರು ಬೆಳೆಯುತ್ತಿದೆ. ಆದರೆ ಮೂಲಸೌಕರ್ಯಗಳು, ನಿರ್ವಹಣೆಯಲ್ಲಿ ಬೆಂಗಳೂರು ದಶಕಗಳಿಗಿಂತಲೂ ಹಿಂದಿದೆ.  ಇದು ಬಿ ಪ್ಯಾಕ್ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. 

ಬೆಂಗಳೂರು ಟ್ರಾಫಿಕ್‌ನಲ್ಲೇ ಲವ್ವಾಯ್ತು, ಮದ್ವೆನೂ ಆಯ್ತು, ಸೋನಿ ಸಿಗ್ನಲ್‌ನಲ್ಲೊಂದು ಪ್ರೇಮ್‌ ಕಹಾನಿ

ಶೇ.57% ಜನ, ನಗರದ ಆಡಳಿತ ಮತ್ತು ಸಂಚಾರ ವ್ಯವಸ್ಥೆ ತೃಪ್ತಿಕರವಾಗಿಲ್ಲ ಎಂದು  ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ಯ ಎಲ್ಲಾ ವಾರ್ಡ್ ಗಳಲ್ಲಿ ರಸ್ತೆ ಮತ್ತು ಹೊಂಡಗಳ ನಿರ್ವಹಣೆ, ಕುಡಿಯುವ ನೀರು, ಕಸ ತೆಗೆಯುವಿಕೆ ಮತ್ತು ಸಾರ್ವಜನಿಕ ಶೌಚಾಲಯ ನಿರ್ವಹಣೆಗೆ ಮೊದಲು ಆದ್ಯತೆ ನೀಡಿ ಪರಿಹಾರಗಳನ್ನು ಹುಡುಕುವಲ್ಲಿ ಗಮನಹರಿಸಬೇಕು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ ಎಂದು ಸಮೀಕ್ಷೆ ಹೇಳುತ್ತಿದೆ.  ನಾಗರಿಕ ಸೇವೆಗಳಿಗೆ ಮೊದಲು ಆದ್ಯತೆಗಳು ನೀಡಬೇಕು ಮತ್ತು ಬೆಂಗಳೂರು ನಗರದಲ್ಲಿ ಸೇವೆಗಳ ವಿತರಣೆಯ ಗುಣಮಟ್ಟದ ಬಗ್ಗೆ ನಾಗರಿಕರ ಗ್ರಹಿಕೆಯನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಈ ಸಮೀಕ್ಷೆಯನ್ನು ಕೈಗೊಳ್ಳಲಾಗಿತ್ತು.

ಸಮೀಕ್ಷೆಯಲ್ಲಿ 3 ವಿಭಾಗಗಳ ವಿಂಗಡನೆ ಮಾಡಲಾಗಿತ್ತು:
ವಿಭಾಗ 1: ನಾಗರಿಕ ಜಾಗೃತಿ ಮತ್ತು ಭಾಗವಹಿಸುವಿಕೆ 
2015-2020ರ ಅವಧಿಯಲ್ಲಿನ ಪಾಲಿಕೆ ವಾರ್ಡ್ ಬಗ್ಗೆ ಅರಿವು ಮೂಡಿಸುವುದರ ಮೂಲಕ ನಗರದ ಶೇ.85 ಜನರಿಗೆ ಹಿಂದಿನ ಕಾರ್ಪೋರೇಟರ್ ಮಾಡಿದ ಕೆಲಸಗಳ ಮಾಹಿತಿ ಇದೇ ಎಂದು ಸಮೀಕ್ಷೆ ಹೇಳುತ್ತಿದೆ.  ಶೇ. 57 ರಷ್ಟು ಜನರ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಿದ್ದಾರೆ ಎಂದಿದೆ. ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದ ಶೇ.70 ಸಾರ್ವಜನಿಕರು ವಾರ್ಡ್ ಸಮಿತಿಗಳು ಬಹಳ ಪರಿಣಾಮಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಶೇ.47% ಸಾರ್ವಜನಿಕರು, ವಾರ್ಡ್ ಸಮಿತಿ ಸಭೆಗಳ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ನಿತಿನ್ ಗಡ್ಕರಿ-ಬೊಮ್ಮಾಯಿ ಸಭೆ: ಬೆಂಗಳೂರಿನ ರಸ್ತೆ, ಟ್ರಾಫಿಕ್ ಬಗ್ಗೆ ಮಹತ್ವದ ಚರ್ಚೆ

ವಿಭಾಗ 2: ಆಡಳಿತ ಮತ್ತು ನಾಗರಿಕ ಸೌಕರ್ಯಗಳ ತೃಪ್ತಿಯ ಮಟ್ಟ
ತಮ್ಮ ವಾರ್ಡ್‌ನಲ್ಲಿ ಗಮನಿಸಬೇಕಾದ ಪ್ರಮುಖ 5 ಸಮಸ್ಯೆಗಳೆಂದರೆ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ.  ರಸ್ತೆಗಳು ಮತ್ತು ಹೊಂಡಗಳ ನಿರ್ವಹಣೆಗೆ ಆದ್ಯತೆ ಕೊಡಬೇಕು, ಕುಡಿಯುವ ನೀರು ಶುದ್ದವಾಗಿರಬೇಕು, ಕಸ ತೆಗೆಯುವಿಕೆ ಮತ್ತು ಘನತ್ಯಾಜ್ಯ ನಿರ್ವಹಣೆ ಮಾಡಬೇಕು, ತ್ಯಾಜ್ಯ ನೀರು ನಿರ್ವಹಣೆ ಹೆಚ್ಚು ಮಹತ್ವ ನೀಡಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಮಹದೇವಪುರ ವಲಯದ ವಾರ್ಡ್ ನಲ್ಲಿ ನಾಗರಿಕ ಸೌಕರ್ಯಗಳು ಮತ್ತು ಸೇವೆಗಳ ವಿತರಣೆಗೆ ಸಂಬಂಧಿಸಿದಂತೆ ಹೆಚ್ಚಿನ ಮಟ್ಟದ ಅಸಮಾಧಾನವನ್ನು ಜನರು ವ್ಯಕ್ತಪಡಿಸಿದ್ದಾರೆ. ರಾಜರಾಜೇಶ್ವರಿ ನಗರ ವಲಯದ ವಾರ್ಡ್ ನಲ್ಲಿ ಹೆಚ್ಚು ತೃಪ್ತಿಕರವಾಗಿದೆ ಎಂದು ಸಮೀಕ್ಷೆ ಹೇಳುತ್ತಿದೆ.

ವಿಭಾಗ 3: ಪಾಲಿಕೆ ಚುನಾವಣೆ
ಬಿಬಿಎಂಪಿ ಚುನಾವಣೆ ಕುರಿತು ಸ್ಥಳೀಯ ಆಸಕ್ತಿದಾಯದ ಅಭಿಪ್ರಾಯ ಹಂಚಿಕೊಂಡಿದ್ದಾರೆ.  2010ರ ಬಿಬಿಎಂಪಿ ಚುನಾವಣೆಯಲ್ಲಿ ಶೇಕಡಾ 88 ರಷ್ಟು ಮಂದಿ ಮತ ಚಲಾಯಿಸಿದ್ದಾರೆ. ಆದರೆ ಕಳೆದೆರಡು ಬಿಬಿಎಂಪಿ ಚುನಾವಣೆಯಲ್ಲಿ ಮತದಾನದ ಸಂಖ್ಯೆ ಕಡಿಮೆಯಾಗಿದೆ. ಇದಕ್ಕೆ ಕಾರಣಗಳೇನು ಅನ್ನೋದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಬೆಂಗಳೂರಿನ ಶೇಕಡಾ 40 ರಷ್ಟು ಮಂದಿಯಲ್ಲಿ ವೋಟರ್ ಐಡಿ ಇಲ್ಲ. ಇನ್ನು ಶೇಕಡಾ 40 ರಷ್ಟು ಮಂದಿ ಚುನಾವಣೆ ಸಮಯದಲ್ಲಿ ಬೆಂಗಳೂರಿನಿಂದ ಹೊರಗಿರುತ್ತಾರೆ. ಅಥವಾ ಇದೇ ಸಮಯದಲ್ಲಿ ಪ್ರವಾಸ ಸೇರಿದಂತೆ ಪ್ರಯಾಣದಲ್ಲಿರುತ್ತಾರೆ. ಆದರೆ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಶೇಕಡಾ 93 ರಷ್ಟು ಮಂದಿ ಮತದಾನ ಮಾಡುತ್ತಾರೆ ಎಂದು ಸಮೀಕ್ಷೆ ಹೇಳುತ್ತಿದೆ. 

Follow Us:
Download App:
  • android
  • ios