ರಾಷ್ಟ್ರಧ್ವಜ ಹಿಡಿದಿದ್ದ ಕಾರ್ಯಕರ್ತನ ಕೈಲಿ ಶೂ ಬಿಚ್ಚಿಸಿಕೊಂಡ ಸಿಎಂ ಸಿದ್ದರಾಮಯ್ಯ: ವಿಡಿಯೋ

ಗಾಂಧಿ ಜಯಂತಿಯಂದು ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಕಾರ್ಯಕರ್ತನ ಕೈಲಿ ಶೂ ಬಿಚ್ಚಿಸಿಕೊಂಡಿದ್ದು, ಈ  ವಿಡಿಯೋ ವೈರಲ್ ಆಗಿದೆ.

BJP Criticizes Congress After national flag holding Worker Removes CM Siddaramaiah's Shoes on Gandhi Jayanti

ಇಂದು ದೇಶದೆಲ್ಲೆಡೆ ಗಾಂಧಿ ಜಯಂತಿ ಹಾಗೂ ದೇಶದ ಮತ್ತೊಬ್ಬ ಧೀಮಂತ ನಾಐಕ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಅದೇ ರೀತಿ ಇಂದು ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದ ಭಾಘವಾಗಿ ಧ್ವಜಾರೋಹಣ ನಡೆಸಿದರು. ಈ ವೇಳೆ ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದಿದ್ದ ಕಾಂಗ್ರೆಸ್ ಕಾರ್ಯಕರ್ತನೋರ್ವ ಸಿಎಂ ಸಿದ್ದರಾಮಯ್ಯ ಅವರ ಶೂ ಬಿಚ್ಚಿದ್ದ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಹಾಗೂ ಬಿಜೆಪಿ, ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಹಾತ್ಮ ಗಾಂಧಿಯವರ 155ನೇ ಜನ್ಮ ದಿನಾಚರಣೆ ಭಾಗವಾಗಿ ಸಿಎಂ ಸಿದ್ಧರಾಮಯ್ಯ ಅವರು ರಾಷ್ಟ್ರಪಿತ ಗಾಂಧೀಜಿಗೆ ಗೌರವ ನಮನ ಸಲ್ಲಿಸಲು ಆಗಮಿಸಿದ ವೇಳೆ ಈ ಘಟನೆ ನಡೆದಿದೆ. ಈ ವೀಡಿಯೋವನ್ನು ರಾಜ್ಯ ಬಿಜೆಪಿ ಕೂಡ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, 'ಕಾಂಗ್ರೆಸ್‌ ಪಕ್ಷಕ್ಕೆ ದೇಶದ ಮೇಲೂ ಅಭಿಮಾನವಿಲ್ಲ, ರಾಷ್ಟ್ರ ಧ್ವಜಕ್ಕೂ ಗೌರವ ನೀಡುವುದಿಲ್ಲ.  ರಾಜಕೀಯ ಜೀವನದ ಸಂಧ್ಯಾ ಕಾಲದಲ್ಲಿರುವ @siddaramaiah ಅವರು ಕುರ್ಚಿ ಉಳಿಸಿಕೊಳ್ಳುವ ಬಗ್ಗೆಯೇ ಚಿಂತಿಸುತ್ತಿರುವ ಕಾರಣ ರಾಷ್ಟ್ರಧ್ವಜ ಹಿಡಿದಿರುವ ಸಂದರ್ಭದಲ್ಲೂ ಮೈಮರೆತಿದ್ದಾರೆ.' ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಿ ಸಿಎಂ ವಿರುದ್ಧ ಕಿಡಿಕಾರಿದೆ. 

ಸಿಎಂಗೆ ಸಿಗ್ತಾ ಇದ್ಯಾ ಅಪಶಕುನದ ಮುನ್ಸೂಚನೆ, ಕಿತ್ತೂರು ಉತ್ಸವಕ್ಕೆ ಚಾಲನೆ ನೀಡುವಾಗ ಸಿದ್ದರಾಮಯ್ಯ ಬಟ್ಟೆಗೆ ತಾಕಿದ ಬೆಂಕಿ!

ವೈರಲ್ ವೀಡಿಯೋದಲ್ಲೇನಿದೆ.

ಸಿಎಂ ಸಿದ್ದರಾಮಯ್ಯ ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರಿಗೆ ಗೌರವ ನಮನ ಸಲ್ಲಿಸಲು ಆಗಮಿಸಿದ ವೇಳೆ ಅಲ್ಲೇ ಇದ್ದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು  ತಮ್ಮ ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದುಕೊಂಡಿದ್ದು, ಧ್ವಜ ಕೈಯಲ್ಲಿರುವಾಗಲೇ ಅವರು ಕೆಳಗೆ ಬಗ್ಗಿ ಸಿಎಂ ಸಿದ್ದರಾಮಯ್ಯ ಅವರ ಶೂವನ್ನು ಬಿಚ್ಚುತ್ತಿದ್ದಾರೆ. ಗಾಂಧಿ ಜಯಂತಿಯನ್ನು ಆಚರಿಸುವುದಕ್ಕೆ ಅನೇಕ ನಾಯಕರು ಅಲ್ಲಿ ಸೇರಿದ್ದ ಸಮಯದಲ್ಲೇ ಈ ಘಟನೆ ನಡೆದಿದೆ. 

ವೀಡಿಯೋ ನೋಡಿದ ನಟ್ಟಿಗರು ಕೂಡ ಸಿಎಂ ಸಿದ್ದರಾಮಯ್ಯ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ರಾಷ್ಟ್ರದ ಗೌರವಕ್ಕೆ ಮಾಡಿದ ಅವಮಾನವಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕ್ಷಮೆ ಯಾಚಿಸಿಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. 

ಮುಡಾ ಸೈಟ್‌ ಮರಳಿಸಿದರೂ ಸಿದ್ದರಾಮಯ್ಯ ಮೇಲಿನ ತನಿಖೆ ನಿಲ್ಲಲ್ಲ: ಕಾನೂನು ತಜ್ಞರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಾದದಲ್ಲಿ ಸಿಲುಕಿರುವಾಗಲೇ ಈ ವೀಡಿಯೋ ವೈರಲ್ ಆಗಿ ಮತ್ತೊಂದು ವಿವಾದ ಸೃಷ್ಟಿಸಿದೆ. ಮೈಸೂರಿನ ವಿಜಯನಗರ ಲೇಔಟ್‌ನ 3 ಮತ್ತು 4ನೇ ಹಂತಗಳಲ್ಲಿ 14 ನಿವೇಶನಗಳನ್ನು ಸಿಎಂ ಪತ್ನಿ ಪಾರ್ವತಿ ಅವರ ಹೆಸರಿಗೆ ಸ್ವಾಧೀನಪಡಿಸಿಕೊಂಡ ವಿವಾದ  ಇದಾಗಿದ್ದು, ಈ ವಿವಾದ ತಾರಕಕ್ಕೇರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಈ ಸೈಟ್‌ಗಳನ್ನು ಮತ್ತೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಲಾಗುವುದು ಎಂದು ಬಹಿರಂಗ ಪತ್ರ ಬರೆದಿದ್ದರು. 

 

Latest Videos
Follow Us:
Download App:
  • android
  • ios