Asianet Suvarna News Asianet Suvarna News

ದೈಹಿಕ ಸಂಪರ್ಕ ಪತಿಯಿಂದ ಅಸಾಧ್ಯ..ಬೆಂಗಳೂರ ಮಹಿಳೆಗೆ ಇದ್ದಿದ್ದು ಇದೊಂದೇ ದಾರಿ

ಮದುವೆಯಾಗೋದ್ಯಾಕೆ? ಸಾಂಗತ್ಯ, ಸಂಸಾರ ದೂಗಿಸಲು ಹಾಗೂ ವಂಶ ಮುಂದುವರಿಯಲು...ಹೀಗೆ ನಾನಾ ಕಾರಣಗಳಿರಬಹುದು. ಆದರೆ, ಮನುಷ್ಯನಿಗೆ ಅಗತ್ಯವಾಗಿ ಬೇಕಾಗಿರುವ ಲೈಂಗಿಕ ತೃಷೆ ತೀರಿಸಿಕೊಳ್ಳುವುದೂ ಮುಖ್ಯ. ಆದರೆ, ಕಟ್ಟಿ ಕೊಂಡ ಪತಿ ಸೆಕ್ಸ್‌ಗೆ ನಿರಾಕರಿಸಿದರೆ ಪಾಪ ಪತ್ನಿ ಏನು ಮಾಡಬೇಕು? ಏನು ಮಾಡಿದ್ಲು, ನೀವೇ ಓದಿ...

Bengaluru woman files complaint against hubby for not having physical relationship in Banaswadi police station
Author
Bengaluru, First Published Jul 5, 2019, 6:27 PM IST
  • Facebook
  • Twitter
  • Whatsapp

ಮದುವೆಯಾದಾಗಿನಿಂದ ನನ್ನ ಪತಿ ನನ್ನೊಂದಿಗೆ ದೈಹಿಕ ಸಂಪರ್ಕ ನಡೆಸಿಲ್ಲ.ಈ ಕಾರಣಕ್ಕೆ ಅತ್ತೆ,ಮಾವ ಮತ್ತು ಪತಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮಹಿಳೆಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ವಾಸವಿರುವ 37 ವರ್ಷದ ಮಹಿಳೆ ದೂರು ಆಧರಿಸಿ ತನಿಖೆ ನಡೆಸಲು ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿದೆ.

2012ರಲ್ಲಿ ನನ್ನ ಮದುವೆಯಾಯಿತು. ಅಂದಿನಿಂದಲೂ ಪತಿ ದೈಹಿಕ ಸಂಪರ್ಕ ಮಾಡಲೇ ಇಲ್ಲ.. ಆ ಬಗ್ಗೆ ಏನೂ ಹೇಳಲೂ ಇಲ್ಲ. ಒಂದು ದಿನ ಟೇಬಲ್ ಡ್ರಾಯರ್‌ನಲ್ಲಿ ಮೆಡಿಕಲ್ ವರದಿಯೊಂದು ಸಿಕ್ಕಿತು. ಪತಿಗೆ ವಿಪರೀತ ಅಲರ್ಜಿ ಕಾಡುವ ಎಚ್‌ಬಿಆರ್ ಕಾಯಿಲೆ ಇದ್ದು ಲೈಂಗಿಕ ಸಂಪರ್ಕ ಸಾಧಿಸಲು ಅಸಾಧ್ಯ ಎಂಬುವುದು ಅರಿವಾಯಿತು. 

ಪೀರಿಯಡ್ಸ್‌‌ ನೋವಿದ್ಯಾ? ಡಯಟ್ ಹೀಗಿರಲಿ...

ಪತಿ ಮತ್ತು ಪತಿ ಮನೆಯವರು ಈ ವಿಚಾರವನ್ನು ಮುಚ್ಚಿಟ್ಟು ನನ್ನನ್ನು ಮನೆ ತುಂಬಿಸಿಕೊಂಡಿದ್ದಾರೆ. ವಂಚನೆಯಾಗಿದ್ದು ಕಾನೂನು ರೀತಿ ನ್ಯಾಯ ದೊರಕಿಸಿ ಕೊಡಬೇಕು ಎಂದು ಮಹಿಳೆ ದೂರಿನಲ್ಲಿ ಆಗ್ರಹಿಸಿದ್ದಾರೆ.

Follow Us:
Download App:
  • android
  • ios