ಬ್ಲಿಂಕಿಟ್, ಝೆಪ್ಟೋ ಸೇರಿ ಆನ್‌ಲೈನ್ ಡೆಲಿವರಿಗೆ ಬೆಂಗಳೂರು ಏಳನೀರು ಮಾರಾಟಗಾರನ ಚಾಲೆಂಜ್!

ಬ್ಲಿಂಕಿಟ್‌ನಲ್ಲಿ 80 ರೂಪಾಯಿ, ಬಿಗ್‌ಬಾಸ್ಕೆಟ್‌ನಲ್ಲಿ 70 ರೂಪಾಯಿ, ನಮ್ಮಲ್ಲಿ ಬರೇ 55 ರೂಪಾಯಿ. ಇದು ಆನ್‌ಲೈನ್ ಡೆಲಿವರಿ ಭರಾಟೆ ನಡುವೆ ಬೆಂಗಳೂರಿನ ಏಳನೀರು ಮಾರಾಟಗಾರನ ಚಾಲೆಂಜ್. ಇದೀಗ ಬೆಂಗಳೂರಿನ ಮಾರ್ಕೆಟಿಂಗ್ ಟೆಕ್ನಿಕ್ ದೇಶಾದ್ಯಂತ ಹೊಸ ಅಲೆ ಸೃಷ್ಟಿಸಿದೆ.
 

Bengaluru Tender coconut seller challenge Blinkit Zepto with new Marketing techniques ckm

ಬೆಂಗಳೂರು(ನ.9) ಡಿಜಿಟಲ್ ಯುಗದಲ್ಲಿ ಎಲ್ಲವೂ ಬದಲಾಗಿದೆ. ಶಾಪ್‌ಗೆ ತೆರಳಿ ವಸ್ತು ಖರೀದಿಸುವ ಕಾಲ ದೂರವಾಗಿದೆ. ಏನಿದ್ದರು ಕುಳಿತಲ್ಲಿಂದಲೆ ಆರ್ಡರ್ ಮಾಡುವುದೇ ಹೆಚ್ಚು. ದೊಡ್ಡ ದೊಡ್ಡ ಕಂಪನಿಗಳು ಭಾರಿ ಮಾರ್ಕೆಟಿಂಗ್, ಜಾಹೀರಾತು ನೀಡಿ ಇ ಕಾಮರ್ಸ್, ಡೆಲವರಿ ಸೇವೆ ನೀಡುತ್ತಿದೆ. ಇದರಿಂದ ಕಿರಾಣಿ ಅಂಗಡಿ, ಸಣ್ಣ ಸಣ್ಣ ಬೀದಿ ಬದಿ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಆದರೆ ಕಿರಾಣಿ ಅಥವಾ ಬೀದಿ ಬದಿ ವ್ಯಾಪಾರಿ ಕೂಡ ಭಿನ್ನವಾಗಿ ಯೋಚಿಸಿದರೆ, ಭಿನ್ನವಾಗಿ ಮಾರ್ಕೆಟಿಂಗ್ ಮಾಡಿದರೆ ಅದೆಂತಾ ಪ್ರತಿಸ್ಪರ್ಧಿಯನ್ನು ಮಣಿಸಬುಹುದು ಅನ್ನೋದನ್ನು ಬೆಂಗಳೂರಿನ ಎಳನೀರು ಮಾರಾಟಗಾರ ಸಾಬೀತುಪಡಿಸಿದ್ದಾನೆ. ಈತನ ಸಣ್ಣ ಹಾಗೂ ಭಿನ್ನ ಆಲೋಚನೆ ಇದೀಗ ದೇಶಾದ್ಯಂತ ಚರ್ಚೆಯಾಗಿದೆ.

ಬೆಂಗಳೂರಿನ ಏಳನೀರು ಮಾರಾಟಗಾರ ಭಿನ್ನವಾಗಿ ಬೋರ್ಡ್ ಹಾಕಿದ್ದಾನೆ. ತನ್ನಲ್ಲಿರುವ ಏಳನೀರಿನ ಬೆಲೆ ಎಷ್ಟು ಅನ್ನೋದನ್ನು ಮಾತ್ರ ಹೇಳಿಲ್ಲ. ಇದನ್ನು ಬೀದಿ ಬದಿಯ ಎಲ್ಲಾ ಏಳನೀರು ಮಾರಟಗಾರರು ಹಾಕಿರುತ್ತಾರೆ. ದೊಡ್ಡದಾಗಿ ಬೆಲೆ ಹಾಕಿ ಮಾರಾಟ ಮಾಡುತ್ತಾರೆ. ಆದರೆ ಈತ ನೇರವಾಗಿ ಬ್ಲಿಂಕಿಟ್, ಝೆಪ್ಟೋ ಸೇರಿದಂತೆ ಆನ್‌ಲೈನ್ ಡೆಲಿವರಿ ಸಂಸ್ಥೆಗಳಿಗೆ ಚಾಲೆಂಜ್ ಹಾಕಿದ್ದಾನೆ. ತನ್ನಲ್ಲಿರುವ ಏಳನೀರು ಬೆಲೆಗಿಂತ ಮೊದಲು ಇತರರ ಬೆಲೆ ಹಾಗೂ ಯಾಕೆ ಇಲ್ಲಿ ಬಂದು ಏಳನೀರು ಕುಡಿಯಬೇಕು ಅನ್ನೋದನ್ನು ಕೇವಲ ಬೆಲೆ ಮೂಲಕ ಹೇಳಿದ್ದಾನೆ.

ಇಂಟರ್ನ್‌‌ಶಿಪ್‌ಗೆ ರಾಜೀನಾಮೆ ನೀಡಿದ ಬೆಂಗಳೂರು ವಿದ್ಯಾರ್ಥಿ, ಕಾರಣ ಕೇಳಿದ ಬಾಸ್‌ಗೆ ಅಚ್ಚರಿ!

ಏಳನೀರು ಬೆಲೆ ಎಂದು ಬೋರ್ಡ್ ಹಾಕಿ, ಬ್ಲಿಂಕಿಟ್‌ನಲ್ಲಿ 80 ರೂಪಾಯಿ, ಝೆಪ್ಟೋದಲ್ಲಿ 80 ರೂಪಾಯಿ, ಬಿಗ್‌ಬಾಸ್ಕೆಟ್‌ನಲ್ಲಿ 70 ರೂಪಾಯಿ. ಆದರೆ ನಮ್ಮ ಬೆಲೆ ಕೇವಲ 55 ರೂಪಾಯಿ ಎಂದು ಬೋರ್ಡ್ ಹಾಕಿದ್ದಾನೆ. ಜನಪ್ರಿಯ ಆನ್‌ಲೈನ್ ಡೆಲಿವರಿ ಬೆಲೆ ಹಾಗೂ ತನ್ನ ಬೆಲೆಯನ್ನು ಹೋಲಿಕೆ ಮಾಡಿದ್ದಾನೆ. ಹೀಗಾಗಿ ಈತನ ಮಾರ್ಕೆಂಟಿಂಗ್ ಟೆಕ್ನಿಕ್ ಭಾರಿ ವೈರಲ್ ಆಗಿದೆ. ಪೀಕ್ ಬೆಂಗಳೂರು ಸೋಶಿಯಲ್ ಮೀಡಿಯಾ ಖಾತೆ ಏಳನೀರು ಮಾರಾಟಗಾರನ ವಿಶೇಷ ಜಾಹೀರಾತನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ.

 

 

ಇ ಕಾಮರ್ಸ್, ಡೆಲಿವರಿ ಆ್ಯಪ್‌ಗಗಳು ಹಲವು ಚಾರ್ಜಸ್ ಸೇರಿಸುತ್ತದೆ. ಕುಳಿತಲ್ಲಿಗೆ ವಸ್ತುಗಳು ಬರುತ್ತದೆ ನಿಜ. ಆರಂಭದಲ್ಲಿ ಆಫರ್, ಕ್ಯಾಶ್‌ಬ್ಯಾಕ್ ಸೇರಿದಂತೆ ಎಲ್ಲವನ್ನೂ ನೀಡಿ ಜನರನ್ನು ಈ ವಿಧಾನಕ್ಕೆ ಹೊಂದಿಕೊಳ್ಳುವಂತೆ ಹಾಗೂ ಅವಲಂಬಿತರಾಗುವಂತೆ ಮಾಡಿದೆ. ಇದೀಗ ಬೆಲೆ ಏರಿಕೆ ಮಾಡುತ್ತಿದೆ. ಹೀಗಾಗಿ ಬೀದಿ ಬದಿ ವ್ಯಾಪಾರಿಗಳ ಬಳಿ ಖರೀದಿಸಿ. ದರ ಕಡಿಮೆ ಇರುತ್ತದೆ, ಜೊತೆಗೆ ಬೀದಿ ಬದಿ ವ್ಯಾಪಾರಿಯೂ ಪ್ರಗತಿ ಸಾಧಿಸುತ್ತಾನೆ ಎಂದು ಹಲವರು ಸಲಹೆ ನೀಡಿದ್ದಾರೆ. ಮತ್ತೆ ಕೆಲವರು ಬೆಂಗಳೂರಿನಲ್ಲಿ ಏಳನೀರು ಬೆಲೆ ಇಷ್ಟೊಂದಾ? ನಮ್ಮಲ್ಲಿ 30 ರಿಂದ 35 ರೂಪಾಯಿಗೆ ಏಳನೀರು ಸಿಗುತ್ತಿದೆ ಎಂದು ಸಲಹೆ ನೀಡಿದ್ದಾರೆ. ಮತ್ತೆ ಕೆಲವರು ಏಳನೀರು 30

ಆನ್‌ಲೈನ್ ಮೂಲಕ ಎಲ್ಲವೂ ಲಭ್ಯ. ಇದರ ಜೊತೆಗೆ ಭರ್ಜರಿ ಆಫರ್ ಕೂಡ ಲಭ್ಯವಿರುತ್ತದೆ. ಆದರೆ ಕಿರಾಣಿ ಅಂಗಡಿ ಅಥವಾ ಬೀದಿ ಬದಿ ವ್ಯಾಪಾರಿಗಳ ಬಳಿಯೂ ಅದೇ ಮೊತ್ತದಲ್ಲಿ ಉತ್ಪನ್ನ ಲಭ್ಯವಿರುತ್ತದೆ. ಬೆಂಗಳೂರು ಏಳನೀರು ಮಾರಾಟಗಾರನ ಹೊಸ ಟೆಕ್ನಿಕ್, ಜಾಹೀರಾತು ಉತ್ತಮ ವ್ಯಾಪರಕ್ಕೂ ಕಾರಣವಾಗಿದೆ. ಪೀಕ್ ಬೆಂಗಳೂರು ಸೋಶಿಯಲ್ ಮೀಡಿಯಾ ಖಾತೆ ಇದೇ ರೀತಿ ಬೆಂಗಳೂರಿನ ಹಲವು ವಿಶೇಷತೆಗಳನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದೆ. ಬೆಂಗಳೂರು ಟ್ರಾಫಿಕ್ ಮದ್ಯೆ ಫುಡ್ ಆರ್ಡರ್, ಟ್ರಾಫಿಕ್ ನಡುವೆ ಕಚೇರಿಯ ಮೀಟಿಂಗ್‌ನಲ್ಲಿ ಭಾಗಿ ಸೇರಿದಂತೆ ಹಲವು ಘಟನೆಗಳು ಭಾರಿ ವೈರಲ್ ಆಗಿದೆ. 

ಸ್ಕೂಟರ್‌ನಲ್ಲಿ ತೆರಳುತ್ತಾ ಲ್ಯಾಪ್‌ಟಾಪ್ ಮೂಲಕ ವಿಡಿಯೋ ಮೀಟಿಂಗ್,ಬೆಂಗಳೂರಿನ ಬ್ಯೂಸಿ ಲೈಫ್ Video!
 

Latest Videos
Follow Us:
Download App:
  • android
  • ios