ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಆಯೋಜಿಸಿರುವ ಪ್ರತಿಭಟನಾ ಹೋರಾಟಕ್ಕೆ ತಮಿಳಿಗರಿಗೆ ಆಹ್ವಾನ ನೀಡಿರುವ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ವಾರ್ನಿಂಗ್ ನೀಡಿದೆ, ಸಿಜೆಪಿಗೆ ಎಚ್ಚರಿಕೆ ನೀಡಿದ್ದೇಕೆ?
ಬೆಂಗಳೂರು (ಜೂ.13) ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಲು ಕಾಕ್ರೋಚ್ ಜನತಾ ಪಾರ್ಟಿ ಮುಂದಾಗಿದೆ. ದೆಹಲಿ, ಪುಣೆಯಲ್ಲಿ ಪ್ರತಿಭಟನೆ ಬಳಿಕ ಇದೀಗ ಕಾಕ್ರೋಚ್ ಜನತಾ ಪಾರ್ಟಿ ಬೆಂಗಳೂರಿನಲ್ಲಿ ಪ್ರತಿಭಟನಾ ಹೋರಾಟ ನಡೆಸುತ್ತಿದೆ. ನಾಳೆ (ಜೂ.14) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಿದೆ. ಆದರೆ ಈ ಪ್ರತಿಭಟನೆಗೆ ತಮಿಳುನಾಡಿನಿಂದ ಜನರನ್ನು ಕರೆಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಕರ್ನಾಟಕ ರಕ್ಷಣಾ ವೇದಿಕೆ ಖಡಕ್ ಎಚ್ಚರಿಕೆ ನೀಡಿದೆ. ಪ್ರತಿಭಟನೆಯಲ್ಲಿ ತಮಿಳು ಬಿತ್ತಿಪತ್ರ, ತಮಿಳು ಹೋರಾಟಗಳಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ಕರವೇ ಮುಖಂಡ ಧರ್ಮರಾಜು ಎಚ್ಚರಿಕೆ
ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಧರ್ಮರಾಜು ಎಚ್ಚರಿಕೆ ನೀಡಿದ್ದಾರೆ. ನಾಳೆ ನಡೆಯುವ ಕಾಕ್ರೋಚ್ ಜನತಾ ಪಾರ್ಟಿ ಹೋರಾಟಕ್ಕೆ ತಮಿಳು ನಾಡಿನಿಂದ ಅಲ್ಲಿನ ನಾಯಕರನ್ನು ಕರೆಸಲಾಗುತ್ತಿದೆ. ಆದ್ರೇ ಸೋಷಿಯಲ್ ಮೀಡಿಯಗಳಲ್ಲಿ ತಮಿಳು ಬಿತ್ತಿ ಪತ್ರಗಳನ್ನು ಹಾಕಲಾಗಿದೆ. ಪ್ರೀಡಂ ಪಾರ್ಕ್ ನಲ್ಲಿ ತಮಿಳು ಬಿತ್ತಿಪತ್ರ ಪದರ್ಶನ ಅಥ್ವಾ ತಮಿಳಿನ ಹೋರಾಟಗಳನ್ನು ಮಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಧರ್ಮರಾಜು ವಾರ್ನಿಂಗ್ ನೀಡಿದ್ದಾರೆ.
ಕನ್ನಡ ಸಾರ್ವಭೌಮತ್ವಕ್ಕೆ ಧಕ್ಕೆ ಆದ್ರೆ ಸಹಿಸಲ್ಲ
ಕನ್ನಡ ನೆಲದಲ್ಲಿ ಕನ್ನಡ ಸಾರ್ವಭೌಮತ್ವಕ್ಕೆ ಧಕ್ಕೆಯಾದರೆ ಕರ್ನಾಟಕ ರಕ್ಷಣಾ ವೇದಿಕೆ ಸಹಿಸುವುದಿಲ್ಲ. ನಾಳೆ ನಡೆಯುವ ಫ್ರೀಡಂ ಪಾರ್ಕ್‌ನಲ್ಲಿ ಕನ್ನಡದ ಅಸ್ಮಿತೆ, ಸಾರ್ವಭೌಮತ್ವಕ್ಕೆ ಧಕ್ಕೆಯಾದರೆ ರಕ್ಷಣಾ ವೇದಿಕೆ ಸ್ಥಳಕ್ಕೆ ಧಾವಿಸಲಿದೆ ಎಂದು ಎಚ್ಚರಿಸಿದೆ. ತಮಿಳುನಾಡಿನಲ್ಲಿ ಕನ್ನಡಿಗರು ಹೋರಾಟ ಮಾಡಲು ಒಪ್ಪುತ್ತಾರಾ? ಇಲ್ಲಿ ನಾವು ಒಪ್ಪುದಿಲ್ಲ. ಕಾಕ್ರೋಚ್ ಜನತಾ ಪಾರ್ಟಿಗೆ ನೇರವಾಗಿ ಎಚ್ಚರಿಕೆ ನೀಡುತ್ತಿದ್ದೇವೆ. ನಾಳಿನಾ ಹೋರಾಟದಲ್ಲಿ ತಮಿಳು ಬಿತ್ತಿ ಪತ್ರ, ಕರ ಪತ್ರ ಬಳಕೆ ನಮ್ಮ ಕಣ್ಣಿಗೆ ಬಿದ್ರೆ ಕರವೇ ಕ್ರಾಂತಿಯನ್ನು ನೀವು ಎದುರಿಸ ಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದೆ.
ಕಾಕ್ರೋಚ್ ಹೋರಾಟದೊಳಗೆ ತಳಮಳ
ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ತಮಿಳುನಾಡಿನಿಂದ ಹೋರಾಟಗಾರರು, ನಾಯಕರನ್ನು ಕರೆತರುವ ಕುರಿತು ಮಾತುಗಳಿಗೆ ಈಗಾಗಲೇ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕಾಕ್ರೋಚ್ ಜನತಾ ಪಾರ್ಟಿ ಕನ್ನಡ ಸಾರ್ವಭೌಮತ್ವಕ್ಕೆ ಧಕ್ಕೆ ತಂದರೆ ರಕ್ಷಣಾ ವೇದಿಕೆ ಉಗ್ರ ಹೋರಾಟ ಮಾಡಲಿದೆ ಅನ್ನೋ ಎಚ್ಚರಿಕೆ ಸಂದೇಶಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.


