Asianet Suvarna News Asianet Suvarna News

ಬೆಂಗಳೂರು ಮನೆ ಬಾಡಿಗೆಗೆ ಸಂದರ್ಶನ: ಪಾಸ್ ಅದವಳಿಗೆ ಆಫರ್ ಲೆಟರ್!

ಬೆಂಗಳೂರಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಕಷ್ಟದ ವಿಚಾರವಲ್ಲ. ಆದರೆ ಮನೆ ಬಾಡಿಗೆ ಪಡೆಯುವುದು ಮಾತ್ರ ಸುಲಭದ ಮಾತಲ್ಲ. ಕೆಲಸ, ಸ್ಯಾಲರಿ, ಸೋಶಿಯಲ್ ಮೀಡಿಯಾ ಪ್ರೊಫೈಲ್ ಸೇರಿದಂತೆ ಹಲವು ಬೇಡಿಕೆಗಳು ಸಾಮಾನ್ಯವಾಗಿದೆ. ಇದೀಗ ಮಾಲೀಕ ಸಂದರ್ಶನ ನಡೆಸಿ ಆಫರ್ ಲೆಟರ್ ನೀಡಿದ ಘಟನೆ ವೈರಲ್ ಆಗಿದೆ.

Bengaluru Landlord issues offer letter to tenant after interview goes viral ckm
Author
First Published Nov 5, 2023, 7:09 PM IST

ಬೆಂಗಳೂರು(ನ.05) ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಅನ್ನೋ ಗಾದೆ ಮಾತಿದೆ. ಈ ಮಾತು ಬೆಂಗಳೂರಿಗೆ ಕೊಂಚ ಭಿನ್ನ, ಮನೆ ಹುಡುಕಿ ನೋಡು, ಬಾಡಿಗೆ ಪಡೆದು ನೋಡು ಅನ್ನೋದೇ ಸೂಕ್ತ. ಬೆಂಗಳೂರಿನಲ್ಲಿ ಯಾವುದೇ ಕ್ಷೇತ್ರದಲ್ಲಿ ಸುಲಭವಾಗಿ ಕೆಲಸ ಗಿಟ್ಟಿಸಿಕೊಳ್ಳಬಹುದು. ಆದರೆ ಮನೆ ಬಾಡಿಗೆ ಪಡೆಯುವುದು ಅಂದುಕೊಂಡಷ್ಟು ಸುಲಭವಲ್ಲ. ಬೆಂಗಳೂರಿನಲ್ಲಿ ಮನೆ ಬಾಡಿಗೆ ಪಡೆಯಲು ಬಾಡಿಗೆದಾರರು ತಮ್ಮ ಕೆಲಸ, ಸ್ಯಾಲರಿ, ಬ್ಯಾಂಕ್ ಬ್ಯಾಲೆನ್ಸ್, ಸೋಶಿಯ್ ಮೀಡಿಯಾ ಪ್ರೊಫೈಲ್ ಸೇರಿದಂತೆ ಒಂದಷ್ಟು ಮಾಹಿತಿ, ದಾಖಲೆಗಳನ್ನು ನೀಡಬೇಕು. ಇದೀಗ ಇಲ್ಲೊಬ್ಬ ಮಾಲೀಕ, ಬಾಡಿಗೆದಾರರ ಸಂದರ್ಶನ ನಡೆಸಿದ್ದಾನೆ. ಬಳಿಕ ಆಯ್ಕೆಯಾದ ಬಾಡಿಗೆದಾರರಿಗೆ ಉದ್ಯೋಗದ ವೇಳೆ ನೀಡುವ ಆಫರ್ ಲೆಟರ್ ರೀತಿ ನೀಡಿದ್ದಾನೆ. ಈ ಆಫರ್ ಲೆಟರ್ ಭಾರಿ ವೈರಲ್ ಆಗಿದೆ.

ಇಶು ಅನ್ನೋ ಟ್ವಿಟರ್ ಖಾತೆಯಲ್ಲಿ ಬೆಂಗಳೂರಿನ ಬಾಡಿಗೆ ಮನೆ ಪಡೆದ ರೋಚಕ ಕತೆಯನ್ನು ಹೇಳಲಾಗಿದೆ. ಬಾಡಿಗೆ ಮನೆಗಾಗಿ ಹುಡುಕಾಟ ನಡೆಸಿದ ಇಶು ಹಲವು ಮನೆ ನೋಡಿದ್ದಾರೆ. ಕೊನೆಗೆ ಒಂದು ಫ್ಲ್ಯಾಟ್ ಒಕೆ ಎಂದು ಮಾತುಕತೆಗೆ ಮುಂದಾಗಿದ್ದಾರೆ. ಆದರೆ  ಇದು ಕೇವಲ ಮಾತುಕತೆ ನಡೆಸಿ ಅಡ್ವಾನ್ಸ್,ಬಾಡಿಗೆ ವಿಚಾರ ಮಾತನಾಡಿ ಫೈನಲ್ ಮಾಡುವ ಪ್ರಕ್ರಿಯೆ ಆಗಿರಲಿಲ್ಲ. 

ಬೆಂಗಳೂರಲ್ಲಿ ಬಾಡಿಗೆಗೆ ಮನೆ ಕೊಡೋಕೆ ಲಿಂಕ್ಡ್​ಇನ್ ಪ್ರೊಫೈಲ್ ಕೇಳಿದ ಓನರ್, ಪೋಸ್ಟ್ ವೈರಲ್

ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೀರಿ, ಸಂಬಳ ಎಷ್ಟಿದೆ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ಇತರ ಹಲವು ದಾಖಲೆಗಳನ್ನು ನೀಡಿದ ಮೇಲೂ ಮಾಲೀಕ ಒಕೆ ಅಂದಿಲ್ಲ. ಕಾರಣ ಇದೇ ರೀತಿ ಹಲವರು ಮಾಲೀಕನಿಗೆ ದಾಖಲೆ ನೀಡಿದ್ದರು. ಮನೆ ಬಾಡಿಗೆ ಪಡೆಯಲು ಮುಂದಾಗಿದ್ದರು. ಇತ್ತ ಮಾಲೀಕ ಬಾಡಿಗೆಗಾಗಿ ಮನವಿ ಮಾಡಿದ ಬಾಡಿಗೆದಾರರ ಸಂದರ್ಶನ ನಡೆಸಿದ್ದಾರೆ. ಬಳಿಕ ಆಯ್ಕೆ ಪ್ರಕ್ರಿಯೆ ನಡೆದಿದೆ. ಈ ಕುರಿತು ಮಾಲೀಕ ಹಂಚಿಕೊಂಡ ಆಫರ್ ಲೆಟರ್ ಮತ್ತಷ್ಟು ಕುತೂಹಲವಾಗಿದೆ.

 

 

ನಿಮ್ಮಿಬ್ಬರ ಭೇಟಿ ಸಂತೋಷ ತಂದಿದೆ. ನಮ್ಮ ಮೀಟಿಂಗ್‌ನಲ್ಲಿ ನಾನು ಹೇಳಿದಂತೆ, ಬಾಡಿಗೆ ಪಡೆಯಲು ಬಂದ ಕೆಲವರನ್ನು ನಾನು ವೈಯುಕ್ತಿಕವಾಗಿ ಭೇಟಿಯಾಗಿ ಮಾತನಾಡಿದ್ದೇನೆ. ಈ ಪೈಕಿ ಹಲವರನ್ನು ಇನ್ನೂ ಭೇಟಿಯಾಗಲು ಸಾಧ್ಯವಾಗಿಲ್ಲ. ನಾನು ಭೇಟಿಯಾದ, ನನಗೆ ಬಂದ ಮನವಿಗಳಲ್ಲಿ ಯಾರು ಮನೆ ಹಾಗೂ ಆವರಣವನ್ನು ಸ್ವಚ್ಚವಾಗಿಟ್ಟು, ಉತ್ತಮವಾಗಿ ನಿರ್ವಹಿಸುತ್ತಾರೆ ಅನ್ನೋ ಕಲ್ಪನೆ ಅಡಿಯಲ್ಲಿ ಒಂದಿಷ್ಟು ಮಂದಿಯನ್ನು ಶಾರ್ಟ್‌ಲಿಸ್ಟ್ ಮಾಡಿದ್ದೇನೆ. ನನ್ನ  ಈ ಪಟ್ಟಿಯಲ್ಲಿ ನಿಮ್ಮಿಬ್ಬರಿಗೆ ಮೊದಲ ಸ್ಥಾನ ನೀಡಿ ಮನೆ ಬಾಡಿಗೆಗೆ ನೀಡಲು ಒಪ್ಪಿದ್ದೇನೆ ಎಂದು ಮಾಲೀಕ ಆಫರ್ ಲೆಟರ್ ನೀಡಿದ್ದಾನೆ.  

ರಾತ್ರಿ 10 ಗಂಟೆ ನಂತ್ರ ಬಾಲ್ಕನಿ ಬಳಸಂಗಿಲ್ಲ, ಗೆಸ್ಟ್‌ಗೆ ನೋ ಎಂಟ್ರಿ; ಬೆಂಗಳೂರು ಬ್ಯಾಚುಲರ್ಸ್‌ಗೆ ಹೊಸ ರೂಲ್ಸ್!

ಈ ಬಾಡಿಗೆ ಮನೆ ಆಫರ್ ಲೆಟರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಬೆನ್ನಲ್ಲೇ ಹಲವು ಬೆಂಗಳೂರಿಗರು ಯಶಸ್ವಿಯಾಗಿ ಮನೆ ಪಡೆದ ನಿಮಗೆ ಅಭಿನಂದನೆಗಳು ಎಂದು ಕಮೆಂಟ್ ಮಾಡಿದ್ದಾರೆ. ನಿಮ್ಮ ಕಂಪನಿ ಆಧಾರದಲ್ಲೂ ಬೆಂಗಳೂರಿನಲ್ಲಿ ಮನೆ ಬಾಡಿಗೆ ನೀಡಲಾಗುತ್ತದೆ. ಕೆಲವು ಕಂಪನಿಗಳ ಉದ್ಯೋಗಿಗಳಿಗೆ ಬಾಡಿಗೆ ಸಿಗುವುದೇ ಕಷ್ಟ. ಬ್ಯಾಂಕ್‌ಗಳು ಸಾಲ ನೀಡುವಾಗ ಕಂಪನಿ ಅವರ ಲಿಸ್ಟ್‌ನಲ್ಲಿದೆಯಾ ಅನ್ನೋದನ್ನು ಪರಿಶೀಲನೆ ಮಾಡುತ್ತಾರೆ. ಅದರ ಆಧಾರದ ಮೇಲೆ ಬಡ್ಡಿದರ ನಿಗದಿಯಾಗುತ್ತದೆ. ಇದೇ ರೀತಿ ಬೆಂಗಳೂರಿನಲ್ಲೂ ಕಂಪನಿ ಆಧಾರದಲ್ಲಿ ಬಾಡಿಗೆ ಇದೆಯೋ ಇಲ್ಲವೋ ಅನ್ನೋದು ನಿರ್ಧಾರವಾಗಲಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

Follow Us:
Download App:
  • android
  • ios