Car hits scooter for honking: 23 ರ ಹರೆಯದ ಕಾರು ಚಲಾಯಿಸುತ್ತಿದ್ದ ಯುವಕನೋರ್ವ ಸ್ಕೂಟರ್‌ನಲ್ಲಿ ಹೋಗುತ್ತಿದ್ದವರು ದಾರಿ ಬಿಡುವುದಕ್ಕೆ ಹಾರ್ನ್ ಮಾಡಿದರು ಎಂದು ಸ್ಕೂಟರ್‌ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಂತಹ ಘಟನೆ ನಡೆದಿದೆ.
ಸ್ಕೂಟರ್‌ಗೆ ಡಿಕ್ಕಿ ಹೊಡೆದ ಕಾರು ಚಾಲಕ
ಬೆಂಗಳೂರು: 23 ರ ಹರೆಯದ ಕಾರು ಚಲಾಯಿಸುತ್ತಿದ್ದ ಯುವಕನೋರ್ವ ಸ್ಕೂಟರ್‌ನಲ್ಲಿ ಹೋಗುತ್ತಿದ್ದವರು ದಾರಿ ಬಿಡುವುದಕ್ಕೆ ಹಾರ್ನ್ ಮಾಡಿದರು ಎಂದು ಸ್ಕೂಟರ್‌ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಂತಹ ಘಟನೆ ನಡೆದಿದೆ. ಪರಿಣಾಮ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರಿದ್ದ ಕುಟುಂಬ ರಸ್ತೆಗೆ ಬಿದ್ದು, ಗಂಭೀರ ಗಾಯಗೊಂಡಿದ್ದಾರೆ. ಯುವಕನ ಕೃತ್ಯ ಸಿಸಿಟಿವಿಯಲ್ಲಿ ಸಂಪೂರ್ಣವಾಗಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ನೆಟ್ಟಿಗರು ಆತನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ ಆತನ ಲೈಸೆನ್ಸ್ ಕ್ಯಾನ್ಸಲ್ ಮಾಡುವಂತೆ ಆಗ್ರಹಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಂಚಾರಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ಸ್ಕೂಟಿಗೆ ಉದ್ದೇಶಪೂರ್ವಕವಾಗಿ ಕಾರಿನಿಂದ ಡಿಕ್ಕಿ ಹೊಡೆದ ಯುವಕನನ್ನು ಬಂಧಿಸಿದ್ದಾರೆ. 23ರ ಹರೆಯದ ಸುಕೃತ್ ಬಂಧಿತ ಯುವಕ.
ಹಾರ್ನ್ ಹಾಕಿದ್ದಕ್ಕೆ ದುಷ್ಕೃತ್ಯ: ಎಂಎಸ್ ರಾಮಯ್ಯ ಆಸ್ಪತ್ರೆ ಬಳಿ ಘಟನೆ
ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆ ಬಳಿ ಈ ಘಟನೆ ನಡೆದಿತ್ತು. ಮೂವರು ಸದಸ್ಯರಿದ್ದ( ಮಗು ಅಪ್ಪ ಅಮ್ಮ) ಕುಟುಂಬವೊಂದು ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಕಾರಿನ ಪಕ್ಕದಲ್ಲೇ ಸಾಗಿದೆ. ಸ್ಕೂಟಿ ಚಾಲಕ ಹಾರ್ನ್ ಬಹುಶಃ ಸೈಡ್ ಬಿಡುವುದಕ್ಕೆ ಹಾರ್ನ್ ಹಾಕಿದ್ದು, ಇದು ಕಾರಿನಲ್ಲಿದ್ದ ಯುವಕನನ್ನು ಕೆರಳಿಸಿದೆ. ಸಿಟ್ಟಿಗೆದ್ದ ಆತ ಕಾರನ್ನು ವೇಗವಾಗಿ ತೆಗೆದುಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಸ್ಕೂಟರ್‌ಗೆ ತಾಗಿಸಿ ಅಲ್ಲಿಂದ ವೇಗವಾಗಿ ಹೊರಟು ಹೋಗಿದ್ದಾನೆ. ಇತ್ತ ಕಾರು ಗುದ್ದಿದ ರಭಸಕ್ಕೆ ಸ್ಕೂಟಿಯಲ್ಲಿದ್ದವರೆಲ್ಲರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಸ್ಕೂಟಿಯಲ್ಲಿದ್ದ ಮಹಿಳೆಗೆ ಕೈ ತಲೆ ಹಾಗೂ ಹೆಗಲಿಗೆ ಗಾಯವಾಗಿದೆ. ಹಾಗೂ ಸ್ಕೂಟಿಯಲ್ಲಿದ್ದ ಗಂಡಸೊಬ್ಬರಿಗೆ ಪಕ್ಕೆಲುಬು ಮುರಿದಿದೆ ಅವರನ್ನು ಅಲ್ಲಿದ್ದ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಿಸಿಟಿವಿ ದೃಶ್ಯ ವೈರಲ್: ಕೊಲೆ ಯತ್ನ ಪ್ರಕರಣ ದಾಖಲಿಸಲು ಆಗ್ರಹ
ಕಾರು ಚಾಲಕ ಹಿಟ್ & ರನ್ ಮಾಡಿದ್ದು, ಸಿಸಿಟಿವಿ ದೃಶ್ಯಾವಳಿ ಗಮನಿಸಿ ಕೂಡಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಆತನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ. ಆತನ ವಿರುದ್ಧ ಹಲವು ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಸ್ಕೂಟರ್ ಚಾಲಕ ಹಾರ್ನ್ ಮಾಡಿದ್ದಕ್ಕೆ ತಾನು ಈ ರೀತಿ ಮಾಡಿದ್ದಾಗಿ ಆತ ಪೊಲೀಸರ ವಿಚಾರಣೆ ವೇಳೆ ಹೇಳಿಕೊಂಡಿದ್ದಾಗಿ ವರದಿಯಾಗಿದೆ. ಈ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈತನ ಲೈಸೆನ್ಸ್ ಅನ್ನು ರದ್ದು ಮಾಡುವಂತೆ ಅನೇಕರು ಆಗ್ರಹಿಸಿದ್ದಾರೆ. ಈತನ ವಿರುದ್ಧ ಕೊಲೆ ಯತ್ನ ಪ್ರಕರಣದ ದಾಖಲಿಸುವಂತೆ ಅನೇಕರು ಮನವಿ ಮಾಡಿದ್ದಾರೆ. ಆತನ ವಿರುದ್ಧ ಕೊಲೆ ಯತ್ನ ಪ್ರಕರಣದಡಿ ಕೇಸು ದಾಖಲಿಸುವಂತೆ ಅನೇಕರು ಕಾಮೆಂಟ್ ಮಾಡಿದ್ದಾರೆ.
ಹಾಗೆಯೇ ಅನೇಕರು ಯುವ ಸಮುದಾಯದ ತಾಳ್ಮೆ ಹಾಗೂ ಮಾನಸಿಕ ಸ್ಥಿಮಿತದ ಬಗ್ಗೆ ಮಾತನಾಡಿದ್ದಾರೆ. ಹಾಗೆಯೇ ಪ್ರತಿದಿನವೂ ಇಂತಹ ಸಾವಿರಾರು ಘಟನೆಗಳು ನಡೆಯುತ್ತವೆ. ಹಲವು ಪ್ರಕರಗಳು ಹೀಗೆ ರೆಕಾರ್ಡ್ ಆಗಿರುವುದೇ ಇಲ್ಲ. ವರದಿ ಕೂಡ ಆಗುವುದಿಲ್ಲ. ಇವತ್ತಿನ ಯುವಕರು ತಾಳ್ಮೆ ಕಳೆದುಕೊಂಡಿದ್ದಾರೆ. ಬಹುತೇಕರಿಗೆ ತಮ್ಮ ಕೃತ್ಯದ ನಂತರದ ಪರಿಣಾಮ ಏನು ಎಂಬುದರ ಅರಿವೇ ಇರುವುದಿಲ್ಲ. ಸಿಟ್ಟಿನ ಭರದಲ್ಲಿ ಅನೇಕರ ಜೀವ ಬಲಿ ಪಡೆಯುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ರಾಂಗ್ ಸೈಡಲ್ಲಿ ಬಂದಿದ್ದಲ್ಲದೇ, ಆಟೋ ಚಾಲಕನ ಮೇಲೆ ಮಹಿಳೆಯ ದರ್ಪ: ವೀಡಿಯೋ ವೈರಲ್
ಇದನ್ನೂ ಓದಿ: ರೈಲಿನಲ್ಲಿ ತಿನಿಸು ಮಾರುತ್ತಿದ್ದ ಯುವಕ ಪರದಾಡುವಂತೆ ಮಾಡಿದ ಪ್ರಯಾಣಿಕ: ವೀಡಿಯೋ ನೋಡಿ ನೆಟ್ಟಿಗರ ಆಕ್ರೋಶ
