ಬೆಂಗಳೂರಿನಲ್ಲಿ ಪಾರ್ಕಿಂಗ್ ಇಲ್ಲದ ಜಾಗದಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನು ಟೋಯಿಂಗ್ ಮಾಡಲಾಯ್ತು ಈ ವೇಳೆ ಟೋಯಿಂಗ್ ವಾಹನದ ಮೇಲೆ ಸ್ಕೂಟಿ ನೋಡಿದ ಯುವತಿಯರು ಪೊಲೀಸರ ಮುಂದೆ ಅಳಲು ಗೋಳಾಡಿದ್ದು, ಅವರ ಮನವಿಗೆ ಪೊಲೀಸಪ್ಪ ಕರಗಿ ಹೋಗಿದ್ದಾನೆ.

ಬೆಂಗಳೂರಿನಲ್ಲಿ ಅರ್ಧ ಟ್ರಾಫಿಕ್ ಜಾಮ್ ಆಗುವುದಕ್ಕೆ ಮುಖ್ಯ ಕಾರಣ ರಸ್ತೆ ಪಕ್ಕ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವುದು. ಆದರೆ ಹೀಗೆ ವಾಹನಗಳನ್ನು ನಿಲ್ಲಿಸುವ ಚಾಲಕರಿಗೆ ಬುದ್ಧಿ ಕಲಿಸುವುದಕ್ಕೆ ಟ್ರಾಫಿಕ್ ಪೊಲೀಸರು ವಾಹನಗಳನ್ನು ಟೋಯಿಂಗ್ ಮಾಡಿ ತಮ್ಮ ಟೆಂಪೋಗಳಲ್ಲಿ ಹಾಕಿ ಪೊಲೀಸ್ ಸ್ಟೇಷನ್‌ಗೆ ತೆಗೆದುಕೊಂಡು ಹೋಗುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಪಾರ್ಕಿಂಗ್ ಇಲ್ಲದ ಜಾಗದಲ್ಲಿ ಯುವತಿಯರಿಬ್ಬರು ಸ್ಕೂಟಿ ನಿಲ್ಲಿಸಿ ಎಲ್ಲೋ ಹೋಗಿದ್ದು, ವಾಪಸ್ ಬರುವ ವೇಳೆ ಸ್ಕೂಟಿ ಈ ಟೋಯಿಂಗ್ ವಾಹನದ ಮೇಲೇರಿದೆ. ಇದರಿಂದ ಯುವತಿಯರಿಬ್ಬರು ಅದರಲ್ಲು ಒಬ್ಬಳು ಜೋರಾಗಿ ಅಳುವುದಕ್ಕೆ ಶುರು ಮಾಡಿದ್ದು, ಇದನ್ನು ನೋಡಿದ ಪೊಲೀಸರ ಮನಸ್ಸು ಕರಗಿ ಆ ಯುವತಿಯರಿಬ್ಬರ ಸ್ಕೂಟಿಯನ್ನು ಕೆಳಗಿಳಿಸಿ ಹೋಗಿದ್ದಾರೆ. ಯುವತಿಯರ ಈ ನಾಟಕ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್ ಆಗ್ತಿದೆ. ವೀಡಿಯೋ ನೋಡಿದ ಗಂಡೈಕ್ಳು ಪೊಲೀಸರ ವರ್ತನೆಗೆ ಹಾಗೂ ಯುವತಿಯರ ಮೆಲೋ ಡ್ರಾಮಾದ ವಿರುದ್ಧ ಭಾರಿ ಅಸಮಾಧಾನ ಹೊರಹಾಕಿದ್ದಾರೆ.

ಟ್ರಾಫಿಕ್ ಪೊಲೀಸ್ ಮುಂದೆ ಹೆಂಗೆಳೆಯರ ಅಳು:

ಅಂದಹಾಗೆ ಈ ವೀಡಿಯೋವನ್ನು chitradurga_memes_adda(ಚಿತ್ರದುರ್ಗ ಮೀಮ್ಸ್ ಅಡ್ಡ⚡)ಎಂಬ ಇನ್ಸ್ಟಾ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ವೀಡಿಯೋ ನೋಡಿದ ಅನೇಕರು ಅದರಲ್ಲೂ ಯುವಕರು ಭಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಹೆಣ್ಣು ಮಕ್ಕಳಿಂದ ಮಾತ್ರ ಸಾಧ್ಯವಾಗುವುದು, ಹೆಣ್ಣು ಮಕ್ಕಳ ಕಣ್ಣೀರಿಗೆ ಕರಗದವರೇ ಇಲ್ಲ ಎಂದು ಬರೆದುಕೊಂಡು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ.

ಡವ್ ರಾಣಿಯರ ನಾಟಕಕ್ಕೆ ಕರಗಿ ಹೋದ ಪೊಲೀಸ್

ವೀಡಿಯೋದಲ್ಲಿ ಹೆಣ್ಣು ಮಕ್ಕಳಿಬ್ಬರು ತಮ್ಮ ಸ್ಕೂಟಿ ಟೋಯಿಂಗ್ ವಾಹನದ ಮೇಲಿರುವುದನ್ನು ನೋಡಿ, ಆ ವಾಹನದ ಚಾಲಕನ ಸೀಟಿನಲ್ಲಿದ್ದ ಪೋಲಿಸಪ್ಪನ ಬಳಿ ಬಂದು ಅಳುವುದಕ್ಕೆ ಶುರು ಮಾಡ್ತಾರೆ. ಮೊದಲಿಗೆ ಸುಮ್ಮನಿದ್ದ ಆ ಪೊಲೀಸ್ ನಗುತ್ತಾ ಆ ಟೋಯಿಂಗ್ ವಾಹನವನ್ನು ಚಲಾಯಿಸಲು ಶುರು ಮಾಡಿದಾಗ ಆ ಹುಡುಗಿಯರಿಬ್ಬರು ಟೋಯಿಂಗ್ ವಾಹನದ ಪಕ್ಕದಲ್ಲಿದ್ದ ರಾಡ್‌ನ್ನು ಹಿಡಿದು ವಾಹನ ಮುಂದೆ ಹೋಗುವುದಕ್ಕೆ ಬಿಡದೇ ಗೋಳಾಡುತ್ತಾರೆ. ಈ ಹೆಣ್ಣು ಮಕ್ಕಳ ಗೋಳು ನೋಡಿದ ಪೊಲೀಸ್ ಬಳಿಕ ತನ್ನ ಸಿಬ್ಬಂದಿಗೆ ಹೇಳಿ ಅದೆರಡು ಸ್ಕೂಟಿಗಳನ್ನು ಟೋಯಿಂಗ್ ವಾಹನದಿಂದ ಕೆಳಗಿಳಿಸಿ ನಗುತ್ತಾ ಟೋಯಿಂಗ್ ವಾಹನ ಚಲಾಯಿಸಿಕೊಂಡು ಮುಂದೆ ಹೋಗುತ್ತಾರೆ.

ಗಂಡೈಕ್ಳಿಂದ ತೀವ್ರ ಅಸಮಾಧಾನ:

ಆದರೆ ಈ ವೀಡಿಯೋ ನೋಡಿದ ಯುವಕರು ಮಾತ್ರ ಭಾರಿ ಆಕ್ರೋಶ ಹೊರಹಾಕಿದ್ದಾರೆ. ಹುಡುಗರಾಗಿದ್ರೆ ಕತೆ ಬೇರೆ ಇರುತ್ತಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ, ನಾವಾಗಿದ್ರೆ ಪೊಲೀಸ್ ನಡಿಯೋ ಡ್ಯಾಶ್ ಮಗನೇ ನಾಟಕ ಮಾಡ್ಬೇಡ ಅಂತಿದ್ರು ಎಂದು ಒಬ್ಬರು ಹೇಳಿದ್ರೆ ಅವರ ಕಾಮೆಂಟ್‌ಗೆ ಅನೇಕರು ಹೌದೌದು ಎಂದಿದ್ದಾರೆ. ಈ ವೀಡಿಯೋ ನೋಡಿದ ಯುವತಿಯೊಬ್ಬಳು ಸೇಮ್ ಸೇಮ್ ನಾನು ಹಿಂದೊಮ್ಮೆ ಹೀಗೆ ಮಾಡಿದ್ದೆ ಎಂದು ಹೇಳಿಕೊಂಡಿದ್ದಾರೆ. ಅಲ್ರೋ ಪೊಲೀಸ್ ಹುಡ್ಗರು ಕೇಳಿದ್ರೆ ಬಿಡ್ತೀರಾ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ಹುಡುಗುರ್ ಆಗಿದ್ದಿದ್ದರೆ ___ ಮುಚ್ಕೊಂಡು ಟೇಶನ್‌ಗೆ ಅತ್ರ ಬರೋ ಅಂತಿದ್ರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಒಟ್ಟಿನಲ್ಲಿ ಈ ವೀಡಿಯೋ ಭಾರಿ ವೈರಲ್ ಆಗಿದೆ. ಅಂದಹಾಗೆ ಈ ವಿಷ್ಯ ನಿಮಗೆ ಗೊತ್ತಾ ಯಾವುದೇ ವಾಹನಗಳನ್ನು ಟೋಯಿಂಗ್ ಮಾಡುವ ಸಮಯದಲ್ಲಿ ಟ್ರಾಫಿಕ್ ಪೊಲೀಸರು ವಾಹನ ಮಾಲೀಕರ ಗಮನ ಸೆಳೆಯುವುದಕ್ಕಾಗಿ ಸೈರನ್ ಮಾಡಬೇಕು. ಇದಾದ ನಂತರವೂ ವಾಹನ ಸವಾರರು ಬರದೇ ಹೋದರೆ ವಾಹನ ಟೋಯಿಂಗ್ ಮಾಡ್ಬೇಕು. ಅದಿರಲ್ಲಿ ಈ ಟ್ರಾಫಿಕ್ ಪೊಲೀಸರ ಮುಂದೆ ಈ ಯುವತಿಯರ ಮೆಲೊಡ್ರಾಮಾದ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.

View post on Instagram