450 ರೂಪಾಯಿಗೆ ಡ್ರಾಪ್ ಮಾಡುತ್ತೇನೆ ಎಂದು ಹೇಳಿ 3,000 ರೂಪಾಯಿ ಕಿತ್ತುಕೊಂಡು ಅರ್ಧದಾರಿಯಲ್ಲಿ ಬಿಟ್ಟು ಹೋದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು(ಜ.23) ಬೆಂಗಳೂರಲ್ಲಿ ಟ್ಯಾಕ್ಸಿ ಹರಗರಣಗಳು ಹೆಚ್ಚಾಗುತ್ತಿದೆ. ಪ್ರಮುಖವಾಗಿ ಏರ್‌ಪೋರ್ಟ್ ಟ್ಯಾಕ್ಸಿ ಸೇವೆಯಲ್ಲಿ ಹಲವರು ಮೋಸ ಹಾಗೂ ಭಯಾನಕ ಘಟನೆ ಎದುರಿಸುತ್ತಿದ್ದಾರೆ. ದುಬಾರಿ ಹಣ ಕಿತ್ತುಕೊಳ್ಳುತ್ತಿದ್ದಾರೆ. ಮಹಿಳೆಯರನ್ನು ಭಯಭೀತಗೊಳಿಸುವ ಪ್ರಕರಣಗಳು ನಡೆದಿದೆ. ಇದೀಗ ಬೆಂಗಳೂರು ಟ್ಯಾಕ್ಸಿ ಹಗರಣಕ್ಕೆ ಮತ್ತೊಂದು ಘಟನೆ ಸೇರಿಕೊಂಡಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಕೆಆರ್‌ಪುರಂ ಬಳಿಯ ಪಿಜಿಗೆ ತೆರಳಲು ಮಹಿಳೆ ಬರೋಬ್ಬರಿ 3000 ರೂಪಾಯಿ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಇಷ್ಟು ಹಣ ನೀಡಿದರೂ ಅರ್ಧ ದಾರಿಯಲ್ಲೇ ಬಿಟ್ಟುಹೋದ ಘಟನೆ ವರದಿಯಾಗಿದೆ. ಘಟನೆ ಕುರಿತು ಮಹಿಳೆ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.
ರಾತ್ರಿ 10.30ಕ್ಕೆ ಮಹಿಳೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದಿದ್ದಾರೆ. ವಿಮಾನ ನಿಲ್ದಾಣದಿಂದ ತನ್ನ ಕೆಆರ್ ಪುರಂ ಬಳಿ ಇರುವ ಪಿಜಿಗೆ ತೆರಳಲು ಬಸ್ ಅಥವಾ ಕ್ಯಾಬ್ ಆಯ್ಕೆ ಮಾಡಬೇಕೋ ಅನ್ನೋ ಗೊಂದಲ್ಲಿ ಸಿಲುಕಿದ್ದಾರೆ. ಸುರಕ್ಷಿತ ಪ್ರಯಾಣಕ್ಕೆ ಬಸ್ ಉತ್ತಮ ಎಂದು ವಿಮಾನ ನಿಲ್ದಾಣದಿಂದ ಹೊರಬಂದ ಮಹಿಳೆ, ನೇರವಾಗಿ ಬಸ್ ನಿಲ್ದಾಣದ ಬಳಿ ತೆರಳುತ್ತಿದ್ದ ವೇಳೆ ಈ ಕ್ಯಾಬ್ ಚಾಲಕ ಎದುರಾಗಿದ್ದಾನೆ.
ಬೆಂಗಳೂರು ಏರ್ಪೋರ್ಟ್ ಟ್ಯಾಕ್ಸಿ: ಊಬರ್ ಆ್ಯಪ್ ಹೆಸರಲ್ಲಿ ವಂಚನೆ
ಗೆಳಯನ ಡ್ರಾಪ್ ಮಾಡಿ ಮನೆಗೆ ತೆರಳಬೇಕು. ಹೀಗಾಗಿ ನಿಮ್ಮನ್ನು ಕೇವಲ 450 ರೂಪಾಯಿಗೆ ಪಿಜಿ ಬಳಿ ಡ್ರಾಪ್ ಮಾಡುವುದಾಗಿ ಚಾಲಕ ಹೇಳಿದ್ದಾನೆ. ಬಳಿಕ ತನ್ನ ಮೊಬೈಲ್ ಮೂಲಕ ಟ್ರಿಪ್ ಕುರಿತ ಮಾಹಿತಿ, ಮ್ಯಾಪ್ ತೋರಿಸಿದ್ದಾನೆ. ಬಸ್‌ನಲ್ಲಿ ಟಿಕೆಟ್ ದರ 350 ರೂಪಾಯಿ. ಆದರೆ ರಾತ್ರಿಯಾಗಿರುವ ಕಾರಣ ಬಸ್ ನಿಲ್ದಾಣದಲ್ಲಿ ಇಳಿದು ಮತ್ತೆ ಪಿಜಿಗೆ ಆಟೋ ಮೂಲಕ ತೆರಳಬೇಕು. ಹೀಗಾಗಿ ದರದಲ್ಲಿ ಹೆಚ್ಚಿನ ವ್ಯತ್ಯಸವಾಗಲ್ಲ. ಇಷ್ಟೇ ಅಲ್ಲ ಕೇವಲ 450 ರೂಪಾಯಿಗೆ ಪಿಜಿ ಬಳಿ ಬಿಡುವುದಾಗಿ ಚಾಲಕ ಹೇಳಿದ್ದಾನೆ. ಇದು ಸೂಕ್ತ ಆಯ್ಕೆ ಎಂದು ಮಹಿಳೆ ಚಾಲಕನಿಗೆ ಒಕೆ ಎಂದಿದ್ದಾಳೆ.
ಒಕೆ ಎಂದ ತಕ್ಷಣ ಚಾಲಕನ ಗೆಳೆಯಆಗಮಿಸಿದ್ದ. ಬಳಿಕ ಚಾಲಕನ ಜೊತೆ ಕಾರಿನ ಬಳಿ ತೆರಳಿದ ಮಹಿಳೆಗೆ ಭಯ ಶುರುವಾಗಿತ್ತು. ಚಾಲಕನ ಹಾಗೂ ಆತನ ಗೆಳೆಯ ಮುಂಭಾಗ ಸೀಟಿನಲ್ಲಿ ಕುಳಿತರೆ, ಮಹಿಳೆ ಹಿಂಭಾಗ ಸೀಟಿನಲ್ಲಿ ಕುಳಿತು ಪ್ರಯಾಣ ಆರಂಭಗೊಂಡಿತ್ತು. ವಿಮಾನ ನಿಲ್ದಾಣದಿಂದ ಹೊರಬಂದು ಟೋಲ್ ಸಿಗುತ್ತಿದ್ದಂತೆ 200 ರೂಪಾಯಿ ಪಾವತಿಸಲು ಸೂಚಿಸಿದ್ದ. ಈ ಸೂಚನೆ ಮಹಿಳೆಯನ್ನು ಮತ್ತಷ್ಟು ಭಯಪಡಿಸಿತ್ತು. ಆದರೆ ರಾತ್ರಿಯಾಗಿದ್ದ ಕಾರಣ ಮರು ಮಾತನಾಡದೆ 200 ರೂಪಾಯಿ ನೀಡಿದ್ದಾಳೆ.
ಟೋಲ್ ಬಳಿಕ ಬೇರೆ ಮಾರ್ಗದ ಮೂಲಕ ಪ್ರಯಾಣ ಆರಂಭಗೊಂಡಿತು. ಈ ದಾರಿಯೇ ಭಯಪಡಿಸುವಂತಿತ್ತು. ಆದರೆ ಏನು ಮಾತನಾಡುವಂತಿರಲಿಲ್ಲ. ಇದೇ ವೇಳೆ ಬಸ್ ಮೂಲಕ ಸುರಕ್ಷಿತವಾಗಿ ಪ್ರಯಾಣಿಸಬಹುದಿತ್ತು ಅನ್ನೋ ಆಲೋಚನೆಯೂ ಬಂದಿತ್ತು. ಕಾರಿನಲ್ಲಿ ಜೋರಾಗಿ ಮ್ಯೂಸಿಕ್ ಹಾಗಿ ಪ್ರಯಾಣ ಸಾಗಿತ್ತು. ಇದು ಕಿರಿಕಿ ಆಗುತ್ತಿದ್ದರೂ ಹೇಳುವಂತಿರಲಿಲ್ಲ ಎಂದು ಮಹಿಳೆ ರೆಡ್ಡಿಟ್‌ನಲ್ಲಿ ಹೇಳಿಕೊಂಡಿದ್ದಾಳೆ. ದಾರಿ ಮಧ್ಯೆ ನಿಲ್ಲಿಸಿ ಧೂಮಪಾನ ಮಾಡಲು ಆರಂಭಿಸಿದ್ದರು. ಬಳಿಕ ಟೀ ಹೀಗೆ ಒಂದೆರೆಡು ಸ್ಟಾಪ್ ಮಾಡಿದ್ದರು. ನೇರವಾಗಿ ಪೆಟ್ರೋಲ್ ಬಂಕ್‌ಗೆ ತೆರಳಿ 300 ರೂಪಾಯಿ ನೀಡುವಂತೆ ಸೂಚಿಸಿದ್ದಾರೆ. ಭಯದಿಂದ ಮರುಮಾತನಾಡದೆ ನೀಡಿದ್ದೆ ಎಂದು ಮಹಿಳೆ ಹೇಳಿದ್ದಾರೆ.
ಬಳಿಕ ಪ್ರಯಾಣ ಮುಂದುವರಿದಿತ್ತು. ಅಷ್ಟರಲ್ಲಿ ಮತ್ತೊಬ್ಬ ದಾರಿಯಲ್ಲಿ ನಿಂತಿದ್ದ. ಕಾರು ನಿಲ್ಲಿಸಿ ಈ ಗೆಳೆಯನ ಡ್ರಾಪ್ ಮಾಡಬೇಕಿದೆ. ನಿಮ್ಮ ಬಿಲ್ 3,000 ರೂಪಾಯಿ ಆಗಿದೆ ಎಂದು ಚಾಲಕ ಹೇಳಿದ್ದಾನೆ. ಅರೇ ಕೇವಲ 450 ರೂಪಾಯಿಗೆ ಪಿಜಿ ಬಳಿ ಬಿಡುವುದಾಗಿ ಹೇಳಿ ಇದೀಗ 3000 ರೂಪಾಯಿ ಹೇಗೆ ಸಾಧ್ಯ ಎಂದು ಮಹಿಳೆ ಪ್ರಶ್ನಿಸಿದ್ದಾಳೆ. ಅಷ್ಟರಲ್ಲೇ ಚಾಲಕ ಹಾಗೂ ಮತ್ತೊಬ್ಬ ಗೆಳೆಯ ಅವಾಚ್ಯ ಶಬ್ದಗಳಿಂದ ಕೂಗಾಗಿಡಿದ್ದಾರೆ. ಮಹಿಳೆ ಮೊಬೈಲ್ ಫೋನ್ ವಶಕ್ಕೆ ಪಡೆದು ಚಾಲಕನ ನಂಬರ್ ಡಿಲೀಟ್ ಮಾಡಿದ್ದಾರೆ. ಲೋಕೇಶನ್ ಹಂಚಿಕೊಳ್ಳಲು ಚಾಲಕನ ನಂಬರ್ ಸೇವ್ ಮಾಡಲಾಗಿತ್ತು.
Bengaluru: ಟ್ಯಾಕ್ಸಿ ಸೇವೆಗಳಿಗೆ ಒಂದು ನಗರ ಒಂದು ದರ ಜಾರಿಗೆ ಸಾರಿಗೆ ಇಲಾಖೆ ಆದೇಶ
ಭಯದಿಂದ 3,000 ರೂಪಾಯಿ ಪಾವತಿಸಿದೆ. ಈ ವೇಳೆ ಬೇರೆ ಕ್ಯಾಬ್ ಇದೇ ಮಾರ್ಗದಲ್ಲಿ ಸಾಗುತ್ತಿತ್ತು. ಚಾಲಕರು ನಿಲ್ಲಿಸಿದ ಸ್ಥಳದಿಂದ ಪಿಜೆಬಿ 15 ಕಿಲೋಮೀಟರ್ ದೂರವಿತ್ತು. ಬೇರೆ ಕ್ಯಾಬ್ ನಿಲ್ಲಿಸಿ ಪಿಜಿ ತಲುಪಿದೆ. ಇದು ಬೆಂಗಳೂರು ಟ್ಯಾಕ್ಸಿ ಮಾಫಿಯಾ ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
