Asianet Suvarna News Asianet Suvarna News

Bengaluru: ಟ್ಯಾಕ್ಸಿ ಸೇವೆಗಳಿಗೆ ಒಂದು ನಗರ ಒಂದು ದರ ಜಾರಿಗೆ ಸಾರಿಗೆ ಇಲಾಖೆ ಆದೇಶ

government announces uniform fare structure for cabs in Bengaluru ಬೆಂಗಳೂರಿನಲ್ಲಿ ಟ್ಯಾಕ್ಸಿ ಸೇವೆಗಳಿಗೆ ಒಂದು ನಗರ ಒಂದು ದರ ನೀತಿ ಜಾರಿಗೆ ಬಂದಿದ್ದು, ವಾಹನಗಳ ಮೌಲ್ಯವನ್ನು ಆಧರಿಸಿ ಕನಿಷ್ಠ ಮತ್ತು ಕಿಲೋಮೀಟರ್‌ಗೆ ದರ ನಿಗದಿಪಡಿಸಲಾಗಿದೆ. ರಾತ್ರಿ ಪ್ರಯಾಣ, ಲಗೇಜ್ ಮತ್ತು ಕಾಯುವಿಕೆಗೆ ಹೆಚ್ಚುವರಿ ಶುಲ್ಕಗಳು ಅನ್ವಯವಾಗುತ್ತವೆ.

Transport department orders to implement one city one rate for taxi services in Bengaluru san
Author
First Published Sep 3, 2024, 9:28 AM IST | Last Updated Sep 3, 2024, 9:28 AM IST

ಬೆಂಗಳೂರು (ಸೆ.3): ರಾಜಧಾನಿ ಬೆಂಗಳೂರಲ್ಲಿ ಟ್ಯಾಕ್ಸಿ ಸೇವೆಗಳಿಗೆ ಒಂದು ನಗರ ಒಂದು ದರ ಜಾರಿಗೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯದಾದ್ಯಂತ ನಿಗದಿಯಾಗಿದ್ದ ದರವನ್ನೇ ಬೆಂಗಳೂರಿಗೂ ಅನ್ವಯಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಖಾಸಗಿ ವಾಹನಗಳ ಮಾಲಿಕರ ಒಕ್ಕೂಟ ಕೂಡ  ಒಂದು ನಗರ ಒಂದು ದರ ನೀತಿಗಾಗಿ ಮನವಿ ಸಲ್ಲಿಕೆ ಮಾಡಿದ್ದವು. ಕಳೆದ ಫೆಬ್ರವರಿಯಲ್ಲಿ ರಾಜ್ಯದ ಟ್ಯಾಕ್ಸಿಗಳಿಗೆ ಹೊರಡಿಸಿದ್ದ ಆದೇಶವನ್ನೇ ಬೆಂಗಳೂರಿಗೂ ಜಾರಿ ಮಾಡಲು ಸಾರಿಗೆ ಇಲಾಖೆ ಈ ಮೂಲಕ ಸೂಚನೆ ನೀಡಿದೆ.

ಒಂದು ನಗರ ಒಂದು ದರ ಹೇಗಿದೆ ಅನ್ನೋದನ್ನ ನೋಡೋದಾದರೆ..

* 10 ಲಕ್ಷ ರೂ ಒಳಗಿನ ವಾಹನಗಳಿಗೆ 4 ಕಿಮೀವರೆಗಿನ ಕನಿಷ್ಠ ದರ 100 ರೂ ಹಾಗೂ ನಂತರದ ಪ್ರತಿ ಕಿಮೀ ಗೆ 24 ರೂಪಾಯಿ ಫಿಕ್ಸ್

* 10 ರಿಂದ 15 ಲಕ್ಷ ಮೌಲ್ಯದ ವಾಹನಗಳಿಗೆ 4 ಕಿಮೀವರೆಗಿನ ಕನಿಷ್ಠ ದರ 115 ರೂ ಹಾಗೂ ನಂತರದ ಪ್ರತಿ ಕಿಮೀ ಗೆ 28 ರೂಪಾಯಿ ಫಿಕ್ಸ್

* 15 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ವಾಹನಗಳಿಗೆ 4 ಕಿಮೀವರೆಗಿನ ಕನಿಷ್ಠ ದರ 130 ರೂ ಹಾಗೂ ನಂತರದ ಪ್ರತಿ ಕಿಮೀಗೆ 32 ರೂಪಾಯಿ ನಿಗದಿ

* ಪ್ರಯಾಣಿಕರ ಜೊತೆಗಿರುವ 120 ಕೆಜಿವರೆಗಿನ ಲಗೇಜಿಗೆ ಉಚಿತ‌ ಸೇವೆ ನಂತರದ‌ ಪ್ರತಿ 30 ಕೆಜಿಗೂ 7 ರೂ. ಹೆಚ್ಚುವರಿ ಶುಲ್ಕ

* ಕಾಯುವಿಕೆಯ ದರ ಮೊದ‌ಲ ಐದು ನಿಮಿಷ ಉಚಿತ, ನಂತರದ ಪ್ರತಿ 1 ನಿಮಿಷಕ್ಕೆ‌ 1 ರೂ. ಫಿಕ್ಸ್

* ರಾತ್ರಿ 12 ರಿಂದ ಬೆಳಗ್ಗೆ 6 ರವರೆಗೆ ಸಂಚರಿಸುವ ಪ್ರಯಾಣಿಕರಿಗೆ ಶೇ. 10ರಷ್ಟು ಹೆಚ್ಚುವರಿ ಪ್ರಯಾಣ ದರ

ಏಪ್ರಿಲ್‌ ಅಂತ್ಯದ ವೇಳೆಗೆ ಈ ಪ್ರದೇಶಗಳಲ್ಲಿ ಒಲಾ ಸೇವೆ ಅಂತ್ಯ, ಕಂಪನಿಯ ಬಿಗ್‌ ನಿರ್ಧಾರಕ್ಕೆ ಕಾರಣವೇನು?

ಇನ್ನು  ಟೋಲ್ ಶುಲ್ಕಗಳಿದ್ದಲ್ಲಿ ಪ್ರಯಾಣಿಕರೇ ಭರಿಸಬೇಕು. ಸಮಯದ ಆಧಾರದಲ್ಲಿ ದರ ಪಡೆಯುವಂತಿಲ್ಲ, ಕಿಲೋಮೀಟರ್‌ ಆಧಾರದಲ್ಲಿಯೇ ಶುಲ್ಕ ಪಡೆಯಬೇಕು. ಸರ್ಕಾರ ನಿಗದಿಪಡಿಸಿರುವ ಈ ದರ, ಶುಲ್ಕಗಳ ಹೊರತಾಗಿ ಬೇರೆ ಯಾವುದೇ ದರ ಪಡೆಯದಿರಲು ಸಾರಿಗೆ ಇಲಾಖೆ ಆದೇಶ ನೀಡಿದೆ.

ಓಲಾ, ಊಬರ್ ಸೇರಿ ಎಲ್ಲ ಟ್ಯಾಕ್ಸಿಗಳಿಗೆ ಏಕರೂಪ ದರ ನಿಗದಿಗೊಳಿಸಿದ ಸರ್ಕಾರ; 4 ಕಿ.ಮೀ.ಗೆ 100 ರೂ. ಚಾರ್ಜ್‌

Transport department orders to implement one city one rate for taxi services in Bengaluru san

Latest Videos
Follow Us:
Download App:
  • android
  • ios