Asianet Suvarna News Asianet Suvarna News

ಪಟಾಕಿ ಸಿಡಿಸಲು ಆತುರ ಬೇಡ : ಎಚ್ಚರ ತಪ್ಪಿದರೆ ‘ಅಂಧಕಾರ’

ಪ್ರತಿ ವರ್ಷ ಪಟಾಕಿ ಸಿಡಿತದಿಂದ ಪರಿಸರದ ಮೇಲಿನ ದೀರ್ಘಕಾಲಿಕ ದುಷ್ಪರಿಣಾಮಗಳ ಜತೆಗೆ ಕಣ್ಣು ಕಳೆದುಕೊಳ್ಳುವ, ಅಂಗ ಊನ ಹಾಗೂ ಸುಟ್ಟಗಾಯ ಮಾಡಿಕೊಳ್ಳುವ ಪ್ರಕರಣಗಳೂ ಹೆಚ್ಚಾಗುತ್ತಿವೆ. ಪಟಾಕಿ ಸಿಡುವ ಮುನ್ನ ಎಚ್ಚರ ವಹಿಸಿ

Be Aware Of Crackers in Deepavali
Author
Bengaluru, First Published Oct 27, 2019, 8:21 AM IST

ಬೆಂಗಳೂರು [ಅ.27]:  ‘ಬೆಳಕಿನ ಹಬ್ಬ’ ದೀಪಾವಳಿಯ ಸಂಭ್ರಮ ಹೆಚ್ಚಿಸುವುದು ಪಟಾಕಿ. ಆದರೆ, ತುಸು ಎಚ್ಚರ ತಪ್ಪಿದರೆ ಅದೇ ಪಟಾಕಿ ಬೆಳಕಿನ ಹಬ್ಬದ ದಿನ ಬದುಕನ್ನೇ ಅಂಧಕಾರದ ಕೂಪಕ್ಕೆ ತಳ್ಳಬಹುದು. ಪ್ರತಿ ವರ್ಷ ಪಟಾಕಿ ಸಿಡಿತದಿಂದ ಪರಿಸರದ ಮೇಲಿನ ದೀರ್ಘಕಾಲಿಕ ದುಷ್ಪರಿಣಾಮಗಳ ಜತೆಗೆ ಕಣ್ಣು ಕಳೆದುಕೊಳ್ಳುವ, ಅಂಗ ಊನ ಹಾಗೂ ಸುಟ್ಟಗಾಯ ಮಾಡಿಕೊಳ್ಳುವ ಪ್ರಕರಣಗಳೂ ಹೆಚ್ಚಾಗುತ್ತಿವೆ. ಜತೆಗೆ ಪ್ರಾಣಿಗಳ ನೆಮ್ಮದಿ, ಪಕ್ಷಿಗಳ ಆವಾಸತಾಣಗಳಿಗೂ ಧಕ್ಕೆ ಉಂಟಾಗುತ್ತಿದೆ.

ಹೀಗಾಗಿಯೇ ಕಳೆದ ಮೂರು ದಿನಗಳಿಂದ ಹಸಿರು ಪಟಾಕಿ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಇದರ ಹೊರತಾಗಿಯೂ ಪಟಾಕಿ ಸಿಡಿಸಲು ಆಸಕ್ತಿ ಹೊಂದಿರುವವರಿಗಾಗಿ ‘ಎಲ್ಲಿ ಪಟಾಕಿ ಖರೀದಿಸಬೇಕು, ಯಾವ ಪಟಾಕಿ ಸಿಡಿಸಬೇಕು, ಅವುಗಳ ದರ, ಪಟಾಕಿಯನ್ನು ಎಲ್ಲಿ ಮತ್ತು ಹೇಗೆ ಸಿಡಿಸಬೇಕು, ಅನಾಹುತ ಆದಾಗ ಏನು ಮಾಡಬೇಕು, ಪರಿಸರ ಸ್ನೇಹಿಯಾಗಿ ಪಟಾಕಿ ಹೇಗೆ ಹಚ್ಚಬೇಕು’ ಎಂಬಿತ್ಯಾದಿ ಕುರಿತ ಪೂರಕ ಮಾಹಿತಿ ಇಲ್ಲಿದೆ.

ಪಟಾಕಿ ಎಲ್ಲಿ ಲಭ್ಯ?

ದೀಪಾವಳಿಯಲ್ಲಿ ಪಟಾಕಿ ಪ್ರಿಯರು ಪಟಾಕಿ ಖರೀದಿಸಲು ಅನುವಾಗುವಂತೆ ಬಿಬಿಎಂಪಿ ವ್ಯಾಪ್ತಿಯ ಮೈದಾನಗಳಲ್ಲಿ ತಾತ್ಕಾಲಿಕ ಪಟಾಕಿ ಮಾರಾಟ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ.

ಮಲ್ಲೇಶ್ವರಂ ಮೈದಾನ, ಜಯನಗರದ ಮಾಧವ್‌ ಪಾರ್ಕ್ ಬಳಿಯ ಮೈದಾನ, ಸಾಯಿರಂಗ ಕಲ್ಯಾಣ ಮಂಟಪದ ಹತ್ತಿರದ ಮೈದಾನ ಸೇರಿದಂತೆ ನಗರದ ಪ್ರಮುಖ ಮೈದಾನಗಳಲ್ಲಿ ತೆರೆದಿರುವ ಪಟಾಕಿ ಮಾರಾಟ ಮಳಿಗೆಗಳಲ್ಲಿ ಪಟಾಕಿಗಳನ್ನು ಖರೀದಿಸಬಹುದು.

ಈ ಡೇಂಜರ್‌ ಪಟಾಕಿ ಬೇಡ:

ಕಿಂಗ್‌ ರೈಡರ್‌ ಬಾಂಬ್‌, ತಂಡರ್‌ ಬಾಂಬ್‌, ಆಟಂ ಬಾಂಬ್‌, ಕ್ಲಾಸಿಕ್‌ ಬಾಂಬ್‌, ಪೇಪರ್‌ ಬಾಂಬ್‌, ಶಾನ್‌ ಗನ್‌ ಸೇರಿದಂತೆ 115ಕ್ಕಿಂತ ಹೆಚ್ಚಿನ ಡೆಸಿಬಲ್‌ ಶಬ್ದ ಹೊಂದಿರುವ ಪಟಾಕಿಗಳು ಅಪಾಯಕಾರಿಯಾಗಿದ್ದು, ಇವುಗಳನ್ನು ಬಳಸದಂತೆ ಎಚ್ಚರಿಕೆ ವಹಿಸಲು ವೈದ್ಯರು ಸಲಹೆ ನೀಡಿದ್ದಾರೆ.

ಅವಘಡ ಎದುರಿಸಲು ಸಮನ್ವಯ ಸಮಿತಿ

ಪಟಾಕಿಗಳಿಂದ ಆಗಬಹುದಾದ ಅಗ್ನಿ ಅವಘಡ ತಪ್ಪಿಸಲು ಮತ್ತು ರಕ್ಷಣಾ ಕ್ರಮಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುವ ಉದ್ದೇಶದಿಂದ ‘ಸಮನ್ವಯ ಸಮಿತಿ’ಯನ್ನು ಬಿಬಿಎಂಪಿಯಿಂದ ರಚನೆ ಮಾಡಲಾಗಿದೆ. ಪಾಲಿಕೆಯ ಎಂಟು ವಲಯಗಳಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲಿದ್ದು, ಇಬ್ಬರು ಪೊಲೀಸ್‌ ಸಿಬ್ಬಂದಿ, ಸಾರ್ವಜನಿಕ ಆರೋಗ್ಯ ಇಲಾಖೆ, ಬಿಬಿಎಂಪಿ ಆರೋಗ್ಯ ವಿಭಾಗ, ಅಗ್ನಿಶಾಮಕ ಸಿಬ್ಬಂದಿ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಆಯಾ ವಲಯ ಬಿಬಿಎಂಪಿಯ ಸಹಾಯಕ ಎಂಜಿನಿಯರ್‌ಗಳು ಈ ಸಮಿತಿಯಲ್ಲಿರುತ್ತಾರೆ.

ಔಷಧ, ವೈದ್ಯರು ಕಡ್ಡಾಯ

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಸಾರ್ವಜನಿಕ ಆರೋಗ್ಯ ಕೇಂದ್ರ, ಬಿಬಿಎಂಪಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಸುಟ್ಟಗಾಯ, ಕಣ್ಣಿಗೆ ಸಂಬಂಧಿಸಿದ, ಅಸ್ತಮಾ, ಕೆಮ್ಮು ಸೇರಿ ಪಟಾಕಿ ಸಿಡಿದಾಗ ಉಂಟಾಗುವ ರೋಗಗಳಿಗೆ ಕಡ್ಡಾಯವಾಗಿ ಔಷಧಗಳನ್ನು ಮೊದಲೇ ಶೇಖರಣೆ ಮಾಡಿಕೊಳ್ಳಬೇಕು. ಪಾಳಿ ಮಾದರಿಯಲ್ಲಿ ದಿನದ 24 ಗಂಟೆ ವೈದ್ಯರು ಕರ್ತವ್ಯ ನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

ಎಲ್ಲೆಲ್ಲಿ ಪಟಾಕಿ ದೊರೆಯಲಿದೆ 

ಮಹದೇವಪುರ ವಲಯ:

ಇನ್ನರ್‌ ಸರ್ಕಲ್‌ ವೈಟ್‌ಫೀಲ್ಡ್‌, ಕಾಡುಗೋಡಿ ಸಂತೆ ಮೈದಾನ, ಕೆ.ಆರ್‌.ಪುರಂನ ವೆಂಗಯ್ಯನ ಕೆರೆ ಮೈದಾನ, ವಿಜಿನಾಪುರ ಕಾವೇರಿ ಆಟದ ಮೈದಾನ, ದೂರವಾಣಿನಗರ ಐಟಿಐ ಮೈದಾನ, ಕೈಕೊಂಡ್ರಹಳ್ಳಿ ಮೈದಾನ, ದೊಡ್ಡಕನಹಳ್ಳಿ ಮೈದಾನ, ಹೂಡಿ ಮೈದಾನ, ಕುಂದಲಹಳ್ಳಿ ಬಡಾವಣೆಯ ಮೈದಾನ ಹಾಗೂ ವರ್ತೂರಿನ ಹೊಸ ಸಂತೆಗಾಗಿ ಮೀಸಲಿಟ್ಟಿರುವ ಸ್ಥಳದಲ್ಲಿ ಮಳಿಗೆ ತೆರೆಯಲಾಗಿದೆ.

ದಕ್ಷಿಣ ವಲಯ:

ವಿಲ್ಸನ್‌ ಗಾರ್ಡನ್‌ ಆಟದ ಮೈದಾನ, ಶಂಕರ್‌ನಾಗ್‌ ಆಟದ ಮೈದಾನ (ವಿದ್ಯಾಪೀಠ), ಕನಕಪುರ ರಸ್ತೆಯ ದೀಪಕ್‌ ನರ್ಸಿಂಗ್‌ ಹೋಮ್‌ ಎದುರಿನ ಮೈದಾನ, ಪದ್ಮನಾಭನಗರ ಕಾರ್ಮೆಲ್‌ ಸ್ಕೂಲ್‌ ಹತ್ತಿರವಿರುವ ಮೈದಾನ, ಬಸವನಗುಡಿಯ ಉದಯಭಾನು ಮೈದಾನ ಹಾಗೂ ಆರ್‌ಪಿಸಿ ಲೇಔಟ್‌ನಲ್ಲಿರುವ ಹಂಪಿನಗರ ಮೈದಾನಗಳಲ್ಲಿ ಪಟಾಕಿ ಖರೀದಿಗೆ ಲಭ್ಯವಿದೆ.

ಪಶ್ಚಿಮ ವಲಯ:

ಶ್ರೀರಾಮಮಂದಿರ ಆಟದ ಮೈದಾನ, ಕಮಲಮ್ಮನಗುಡಿ ಆಟದ ಮೈದಾನ, ಎಂಇಎಸ್‌ ಆಟದ ಮೈದಾನ, ವೈಯಾಲಿಕಾವಲ್‌ ಆಟದ ಮೈದಾನ, ಚಂದ್ರಶೇಖರ ಆಜಾದ್‌ ಮೈದಾನದಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲಾಗಿದೆ.

ಪೂರ್ವ ವಲಯ:

ಲೊಟ್ಟಗೊಲ್ಲಹಳ್ಳಿ ಎಂಎಲ್‌ಎ ಲೇಔಟ್‌ನ ಗಾಂಧಿ ಶಾಲೆ ಸಮೀಪ, ದೇವಸಂದ್ರ-ನ್ಯೂ ಬಿಇಎಲ್‌ ರಸ್ತೆ, ಸಂಜಯನಗರ ಮುಖ್ಯರಸ್ತೆಯ ಮುನೇಶ್ವರ ಸ್ವಾಮಿ ದೇವಾಲಯ ಹತ್ತಿರ, ಎಚ್‌ಎಂಟಿ ಆಟದ ಮೈದಾನ, ಪ್ರೆಸಿಡೆನ್ಸಿ ಶಾಲಾ ಮೈದಾನ, ಆನಂದನಗರ 6ನೇ ಅಡ್ಡರಸ್ತೆ ಹತ್ತಿರ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಕಾಲೇಜು ಆಟದ ಮೈದಾನ, ಮಲ್ಲೇಶಪಾಳ್ಯ ಡಾ.ರಾಜ್‌ಕುಮಾರ್‌ ರಂಗಮಂದಿರ, ಎಚ್‌ಬಿಆರ್‌ ಲೇಔಟ್‌ನ ಡಾ.ಬಿ.ಆರ್‌.ಅಂಬೇಡ್ಕರ್‌ ಆಟದ ಮೈದಾನ, ಹೆಣ್ಣೂರು ಮುಖ್ಯರಸ್ತೆಯ ಹೆಣ್ಣೂರು ಬಂಡೆ ಆಟದ ಮೈದಾನಗಳಲ್ಲಿ ಪಟಾಕಿ ಮಳಿಗೆಗೆ ಅವಕಾಶ ನೀಡಲಾಗಿದೆ.

ಯಲಹಂಕ ವಿಭಾಗ:

ಯಲಹಂಕ ಬಸ್‌ ಸ್ಟಾಪ್‌ ಹತ್ತಿರವಿರುವ ಬಿಬಿಎಂಪಿ ಖಾಲಿ ಮೈದಾನ, ಯಲಹಂಕ ಉಪನಗರದ ಕರ್ನಾಟಕ ಗೃಹ ಮಂಡಳಿ ವಾಣಿಜ್ಯ ಸಂಕೀರ್ಣದ ಮುಂಭಾಗ, ನಿಸರ್ಗ ಪಾರ್ಕ್ ಪಕ್ಕದ ಮೈದಾನ, ಜಕ್ಕೂರು ಡಬಲ್‌ ರಸ್ತೆ ಸಹಕಾರನಗರ ಪಾರ್ಕ್ ಮೈದಾನ.

ಬ್ಯಾಟರಾಯನಪುರ ವಿಭಾಗ:

ಬ್ಯಾಟರಾಯನಪುರದ ಸಿಲ್ವರ್‌ ಜುಬಿಲಿ ಪಾರ್ಕ್ ಮೈದಾನ, ಬಿಬಿಎಂಪಿ ವಾರ್ಡ್‌ ಕಚೇರಿ ಮುಂಭಾಗದ ಖಾಲಿ ಜಾಗ, ದೊಡ್ಡಮೊಮ್ಮನಸಂದ್ರದ ನಂಜಪ್ಪ ಸರ್ಕಲ್‌.

ಎಚ್‌ಎಸ್‌ಆರ್‌ ಉಪವಿಭಾಗ:

ಎಸ್‌ಎಸ್‌ಆರ್‌ ಬಡಾವಣೆ ಪಾಲಿಕೆ ಆಟದ ಮೈದಾನ, ಬೊಮ್ಮನಹಳ್ಳಿ ಉಪವಿಭಾಗದ ಬಿಳೇಕಳ್ಳಿ ವಿಜಯ ಬ್ಯಾಂಕ್‌ ಬಡಾವಣೆ, ವೇಗಾ ಸಿಟಿ, ರಂಕಾ ಬಡಾವಣೆ, ಹೊಂಗಸಂದ್ರ, ಜರಗನಹಳ್ಳಿ ಆಟದ ಮೈದಾನ, ಪುಟ್ಟೇನಳ್ಳಿ, ಅರಕೆರೆ ಮೈಕೋ ಬಡಾವಣೆ ಆಟದ ಮೈದಾನ, ಹುಳಿಮಾವು ಗೇಟ್‌, ವಿಶ್ವೇಶ್ವರಯ್ಯ ರಸ್ತೆ ಕೃಷ್ಣ ಕುಟೀರ ಸಮೀಪ ಪಟಾಕಿ ಮಳಿಗೆಗೆ ಅವಕಾಶ ಕಲ್ಪಿಸಲಾಗಿದೆ.

Follow Us:
Download App:
  • android
  • ios