60 ಕೋಟಿ ಮೌಲ್ಯದ ನಿವೇಶನವನ್ನು ಕೇವಲ 2 ಕೋಟಿಗೆ ಮಾರಿದ ಬಿಡಿಎ: ಖರೀದಿಸಿದ್ದು ಯಾರು?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 60 ಕೋಟಿ ರೂಪಾಯಿ ಮೌಲ್ಯದ ನಿವೇಶನವನ್ನು ಕೇವಲ 2 ಕೋಟಿ ರೂಪಾಯಿಗೆ ಮಾರಾಟ ಮಾಡಿದೆ. ಜಯನಗರದ 8ನೇ ಬ್ಲಾಕ್‌ನಲ್ಲಿರುವ ಈ ನಿವೇಶನವನ್ನು ಬಿಡಿಎ ನಿಯಮಗಳನ್ನು ಉಲ್ಲಂಘಿಸಿ ಮಾರಾಟ ಮಾಡಿದೆ ಎಂದು ಆರೋಪಿಸಲಾಗಿದೆ.

BDA sells Civic Amenity site in Jayanagar 8th Block valued at Rs 60 cr for just Rs 2 crore mrq

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ನಾಗರೀಕ ಸೌಕರ್ಯ ನಿವೇಶವನ್ನು (Civic Amenity- CA Site) ಕೇವಲ 2 ಕೋಟಿ ರೂಪಾಯಿಗೆ ಮಾರಾಟ ಮಾಡಿದೆ. ಈ ನಿವೇಶನದ ಮಾರುಕಟ್ಟೆ ಮೌಲ್ಯ 60 ಕೋಟಿ ರೂಪಾಯಿ ಆಗಿದೆ. ಬೆಂಗಳೂರಿನ ಜಯನಗರದ 8ನೇ ಬ್ಲಾಕ್‌ನಲ್ಲಿರುವ ನರ್ಸಿಂಗ್ ಹೋಮ್ ಇರೋ ನಿವೇಶನ ಮಾರಾಟ ಮಾಡಲಾಗಿದೆ. ಬಿಡಿಎ ಗೈಡೈನ್ಸ್ ವ್ಯಾಲ್ಯೂ ಬೆಲೆಯನ್ನು ಆಧರಿಸಿ ಮಾರಾಟ ಮಾಡಿದ್ರೆ ನಿವೇಶನ ಬೆಲೆ 23.20 ಕೋಟಿಯಷ್ಟು ಅಧಿಕವಾಗಿರುತ್ತಿತ್ತು. ಜುಲೈ 31, 2020 ರಂದು ಆದೇಶದ ಪ್ರಕಾರ, ಸಾರ್ವಜನಿಕ ಬಳಕೆಗಾಗಿ ಮೀಸಲಾದ CA ಸೈಟ್‌ಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಈ ನಿಯಮ ಒಪ್ಪಿಗೆ ನೀಡುತ್ತದೆ. ಈ ಆದೇಶದನ್ವಯ ಬಿಡಿಎ ನಿವೇಶನ ಮಾರಾಟ ಮಾಡುವ ಅಧಿಕಾರವನ್ನ ಹೊಂದಿರುತ್ತದೆ. 

1973ರಲ್ಲಿ ಜಯನಗರ 8 ನೇ ಬ್ಲಾಕ್‌ನಲ್ಲಿ 40 ನೇ ಕ್ರಾಸ್, 1 ನೇ ಎ ಮೇನ್‌ನಲ್ಲಿರುವ 8,000 ಚದರ ಅಡಿ ವಿಸ್ತೀರ್ಣದ ಆಸ್ತಿ/ನಿವೇಶನವನ್ನು ಖಾಸಗಿ ನರ್ಸಿಂಗ್ ಹೋಮ್ ಮತ್ತು ಆಸ್ಪತ್ರೆ ಆರಂಭಿಸಲು ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ (ಸಿಐಟಿಬಿ),  ಡಾ.ಎಲ್.ಎಸ್.ಬೋರೇಗೌಡ ಅವರಿಗೆ ಹಂಚಿಕೆ ಮಾಡಲಾಗಿತ್ತು. ಈ ನಿವೇಶನಕ್ಕೆ 10 ವರ್ಷಕ್ಕೆ ಆರಂಭಿಕ ಠೇವಣಿ 24,404 ರೂಪಾಯಿ ಮತ್ತು 12 ರೂಪಾಯಿ ವಾರ್ಷಿಕ ಶುಲ್ಕದಡಿಯಲ್ಲಿ ನಿವೇಶನ ನೀಡಲಾಗಿತ್ತು.

10 ವರ್ಷಗಳ ನಂತರ ಸೈಟ್ ಸಂಖ್ಯೆ 27/A ಗಾಗಿ ಸಂಪೂರ್ಣ ಮಾರಾಟ ಪತ್ರವನ್ನು ನೀಡುವಂತೆ ಬಿಡಿಎಗೆ ಮನವಿ ಮಾಡಿಕೊಂಡಿದ್ದರು. ಆದ್ರೆ ಅಂದಿನ ಬಿಡಿಎ ಆಯುಕ್ತರು, ನಿಯಮಗಳ ಪ್ರಕಾರ, ಸಿಎ ಸೈಟ್‌ಗಳನ್ನು ವ್ಯಕ್ತಿಗಳಿಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಬೋರೇಗೌಡರ ಮನವಿಯ ಅರ್ಜಿಯನ್ನು ತಿರಸ್ಕರಿಸಿದ್ದರು. ಆದ್ರೆ ಮತ್ತೆ 2008 ಮತ್ತು 2013ರಲ್ಲಿ  ಮಾರಾಟ ಪತ್ರ ನೀಡುವಂತೆ ಬಿಡಿಎಗೆ ಮನವಿ ಮಾಡಿಕೊಂಡಿದ್ದರು. ಆದ್ರೆ ಬಿಡಿಎ ನಿಯಮಗಳನ್ನು ಉಲ್ಲೇಖಿಸಿ, ಅರ್ಜಿಯನ್ನು ಮತ್ತೆ ತಿರಸ್ಕರಿಸಿತ್ತು. 

2015ರಲ್ಲಿ ಬಿಡಿಎಗೆ ಅರ್ಜಿ ಸಲ್ಲಿಸಿದ್ದ ಬೋರೇಗೌಡರು, ಸಿಎ ನಿವೇಶನದಲ್ಲಿ ಮಕ್ಕಳಿಗಾಗಿ ನಿರ್ಮಿಸಿದ ಮನೆಗಳನ್ನು ನೋಂದಾಯಿಸಲು ಸಾಧ್ಯವಾಗಲಿಲ್ಲ ಎಂದು ಪತ್ರ ಬರೆದು, ದೂರು ಸಹ ನೀಡಿದ್ದರು. ಮಕ್ಕಳ ಹೆಸರಿಗೆ ಮನೆ ನೋಂದಾಯಿಸಲು ಸಂಪೂರ್ಣ ಮಾರಾಟ ಪತ್ರ ನೀಡಬೇಕೆಂದು ಮತ್ತೆ ತಮ್ಮ ಮನವಿಯನ್ನು ಬಿಡಿಎ ಮುಂದೆ ಇರಿಸಿದ್ದರು.

ಬಿಡಿಎ ಯು ಟರ್ನ್
2018 ರಲ್ಲಿ ಬಿಡಿಎ ಮಂಡಳಿಯ ಸಭೆಯಲ್ಲಿ ಈ ಆಸ್ತಿ ಸಿಎ ಸೈಟ್ ಅಲ್ಲ ಎಂದು ಅಭಿಪ್ರಾಯಪಟ್ಟಿದೆ.  ಈ ಸಭೆಯ ಒಂದು ವರ್ಷದ ನಂತರ ಅರ್ಬನ್ ಡೆವಲಪ್‌ಮೆಂಟ್ ಡಿಡಿಪಾರ್ಟ್‌ಮೆಂಟ್‌ಗೆ (ಯುಡಿಡಿ) ಬರೆದ ಪತ್ರದಲ್ಲಿ, ನಿವೇಶನದ ಸಂಪೂರ್ಣ ಮಾರಾಟದ ಪತ್ರವನ್ನು ನೀಡುವಂತೆ ಮಾಡಿತು. ನಿವೇಶನದ ಸ್ವರೂಪದ ಬಗ್ಗೆ ಬಿಡಿಎ ವ್ಯತಿರಿಕ್ತ ನಿಲುವು ತಳೆದಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಮನವಿಯನ್ನು ತಿರಸ್ಕರಿಸಿತ್ತು. ಆದರೆ ಜುಲೈ 12, 2024 ರಂದು, ಬೋರೇಗೌಡರ ಮಕ್ಕಳಾದ ಶ್ರೀಹರಿ ಬೋರೇಗೌಡ, ಶ್ರೀನಿಧಿ ಬೋರೇಗೌಡ, ಶ್ರೀಸಾಯಿ ಬೋರೇಗೌಡ ಮತ್ತು ಶ್ರೀಮಾಯಿ ಸುನೀಲ್ ಅವರ ಹೆಸರಿನಲ್ಲಿ ಬಿಡಿಎ ಸಂಪೂರ್ಣ ಮಾರಾಟ ಪತ್ರವನ್ನು ನೀಡಿದೆ.

ಇದನ್ನೂ ಓದಿ: ಬೆಂಗಳೂರು: ಬಿಡಿಎ ಸಿಬ್ಬಂದಿಗೆ ಕಚೇರೀಲಿ ಕೂರಲೂ ಜಾಗವಿಲ್ಲ!

ಈ ಸೇಲ್ ಡೀಡ್ ವಿವಾದಾತ್ಮಕವಾಗಿದ್ದು, ಬಿಡಿಎ ಗೈಡೈನ್ಸ್ ವ್ಯಾಲ್ಯೂನ ಕೇವಲ ಶೇ.10ರಷ್ಟು ಮಾತ್ರ ಬೆಲೆ ವಿಧಿಸಿದೆ. ಈ ನಿವೇಶನ 60 ಕೋಟಿಗೂ ಹೆಚ್ಚು ಬೆಲೆ ಹೊಂದಿದೆ ಎಂದು ಆರ್‌ಟಿಐ ಕಾರ್ಯಕರ್ತರು ಅಂದಾಜಿಸಿದ್ದಾರೆ.  ಜಯನಗರ 8ನೇ ಬ್ಲಾಕ್‌ನ 40 ಅಡಿ ರಸ್ತೆಯಲ್ಲಿ ಪ್ರತಿ ಚದರ ಮೀಟರ್‌ಗೆ 2.9 ಲಕ್ಷ ರೂ.ಗಳ ಮಾರ್ಗಸೂಚಿ ಮೌಲ್ಯವನ್ನು ಸರಕಾರ ನಿಗದಿಪಡಿಸಿದೆ. ಬಿಡಿಎ 8,000 ಚದರ ಅಡಿ ನಿವೇಶನವನ್ನು ಕೇವಲ 2 ಕೋಟಿ ರೂ.ಗೆ ಮಾರಾಟ ಮಾಡಿದೆ. ಇದು ರೂ 23.20 ಕೋಟಿಯ ಮಾರ್ಗಸೂಚಿ ದರಕ್ಕಿಂತ ಕಡಿಮೆಯಾಗಿದೆ. ಬಿಡಿಎ ಎಲ್ಲ ನಿಯಮಗಳನ್ನು ಉಲ್ಲಂಘಿಸಿದೆ' ಎಂದು ಆರ್‌ಟಿಐ ಕಾರ್ಯಕರ್ತ ಕುಮಾರ್ ಹೇಳಿದ್ದಾರೆ. 

ಬಿಡಿಎ ಸಂಪೂರ್ಣ ಮಾರಾಟ ಪತ್ರವನ್ನು ನೀಡುವುದರೊಂದಿಗೆ, ಸಾರ್ವಜನಿಕರ ಅನುಕೂಲಕ್ಕಾಗಿ ಉದ್ದೇಶಿಸಲಾದ ಸಿಎ ಸೈಟ್‌ನ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಂಡಿದೆ. ಆಸ್ತಿಯನ್ನು ವಾಣಿಜ್ಯ ಬಳಕೆಗೆ ಪರಿವರ್ತಿಸುವ ಸಾಧ್ಯತೆ ಇದೆ ಎಂದು ಡೆಕ್ಕರ್ ಹೆರಾಲ್ಡ್ ವರದಿ ಮಾಡಿದೆ. 

ಇದನ್ನೂ ಓದಿ: ಕೆಂಪೇಗೌಡ ಬಡಾವಣೆ ಸೈಟ್ ಖರೀದಿದಾರರ ಬವಣೆ ತೀರಿಸದ ಬಿಡಿಎ; ಮನೆ ಕಟ್ಟೋಕೂ ಆಗ್ತಿಲ್ಲ, ಕಟ್ಟಿದರೆ ಇರೋದಕ್ಕೂ ಆಗೊಲ್ಲ!

Latest Videos
Follow Us:
Download App:
  • android
  • ios