Asianet Suvarna News Asianet Suvarna News

ಹಿಂದವೀ ಮೀಟ್ ಮಾರ್ಟ್ ಮಾಲೀಕರಿಗೆ ಬಿಗ್ ಶಾಕ್: ನೋಟಿಸ್‌ ನೀಡಿದ ಬಿಬಿಎಂಪಿ

  • ಹಿಂದವೀ ಮೀಟ್ ಮಾರ್ಟ್ ಮಾಲೀಕರಿಗೆ ಬಿಗ್ ಶಾಕ್..
  • ನೋಟಿಸ್ ಮೂಲಕ ಹಿಂದವೀ ಮೀಟ್ ಮಾರ್ಟ್‌ಗೆ ಶಾಕ್ ನೀಡಿದ ಬಿಬಿಎಂಪಿ
  • ಹಲಾಲ್ ಕಟ್ ವಿರುದ್ಧ ಕ್ಯಾಂಪೇನ್ ನಡೆಸಿದ್ದ ಹಿಂದವೀ ಮೀಟ್ ಮಾರ್ಟ್
     
BBMP sent notice to Hindawi meat Mart located in ullala Banglore akb
Author
Bangalore, First Published Apr 19, 2022, 8:46 PM IST

ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು: ಹಲಾಲ್ ವರ್ಸಸ್ ಜಟ್ಕಾ ಕಟ್ ನಡುವಿನ ಸಮರ ತಾರಕಕ್ಕೇರಿದ್ದು ಗೊತ್ತೇ ಇದೆ. ಹಲಾಲ್ ಬಾಯ್ಕಾಟ್ ಮಾಡುವಂತೆ ನಡೆದಿರುವ ಅಭಿಯಾನಗಳು ಇನ್ನು ನೆನಪಿದೆ. ಆದ್ರೆ ಇದೀಗ ಹಿಂದವೀ ಮೀಟ್ ಮಾರ್ಟ್ (Hindawi meet Mart) ಮೇಲೆ ಬಿಬಿಎಂಪಿ ದೂರು ದಾಖಲಿಸಿದೆ. ಟ್ರೇಡ್ ಲೈಸೆನ್ಸ್ ಪಡೆಯದೆ ಹಿಂದವಿ ಮಾರ್ಟ್ ವ್ಯಾಪಾರ ನಡೆಸುತ್ತಿರುವುದೇ ಬಿಬಿಎಂಪಿ ಕೆಂಗಣ್ಣಿಗೆ ಕಾರಣ. ಹೀಗಾಗಿ ಬಿಬಿಎಂಪಿ (BBMP)ಏಪ್ರಿಲ್ 12 ರಂದು ಹಿಂದವಿ‌ ಮೀಟ್ ಮಾರ್ಟ್ ಮಾಲಿಕರಾದ ಮುನೇಗೌಡ್ರಿಗೆ ನೋಟಿಸ್  ಜಾರಿ ಮಾಡಿದೆ. ಹೀಗಾಗಿ ಹೊಸತೊಡಕು ಸಂದರ್ಭದಲ್ಲಿ ಭಾರೀ ಸುದ್ದಿ ಮಾಡಿದ್ದ ಉಲ್ಲಾಳ (Ullala) ಬಳಿಯ ಹಿಂದವೀ ಮೀಟ್ ಮಾರ್ಟ್ ಈಗ ಸಮಸ್ಯೆಗೆ‌ ಸಿಲುಕಿದೆ. 

ಹಲಾಲ್ ಬಾಯ್ಕಾಟ್ ಮಾಡಿ ಜಟ್ಕಾ ಕಟ್‌ಗೆ ಬೆಂಬಲಿಸುವಂತೆ ಅಭಿಯಾನ ಶುರುವಾಗಿತ್ತು. ಇದರಲ್ಲಿ ಮುಂಚೂಣಿಯಲ್ಲಿದ್ದದ್ದೆ ಉಲ್ಲಾಳ ಹಿಂದವೀ ಮಾರ್ಕೆಟ್. ಆದ್ರೆ ಪಾಲಿಕೆಯಿಂದ ಹಿಂದವೀ ಮೀಟ್ ಮಾರ್ಟ್ ಲೈಸೆನ್ಸ್ ಪಡೆಯದೆ ಅಂಗಡಿ ತೆರೆದಿತ್ತು. ಹೀಗಾಗಿ ಆರ್.ಆರ್ ನಗರ ವಲಯ ಬಿಬಿಎಂಪಿ ಪಶುಪಾಲನೆ ವಿಭಾಗದಿಂದ ನೋಟಿಸ್ ನೀಡಲಾಗಿದೆ. ಪರವಾನಗಿ ಪಡೆಯದೆಯೇ ಅಂಗಡಿಗಳನ್ನ ಓಪನ್ ಮಾಡಿದ ಬೆನ್ನಲ್ಲೆ  ಬಿಬಿಎಂಪಿ ಪಶುಪಾಲನೆ ಸಹಾಯಕ ನಿರ್ದೇಶಕರಿಂದ  ಪರವಾನಗಿ ಇಲ್ಲದಿರುವುದು ಸೇರಿದಂತೆ ಹಲವು ಅಂಶಗಳನ್ನು ಉಲ್ಲೇಖ ಮಾಡಿ ನೋಟಿಸ್ ಜಾರಿ ಮಾಡಲಾಗಿದೆ. 

ಹಲಾಲ್‌ ಎಂಬ ಬಿಜೆಪಿಗರು ಈಗ ಚುನಾವಣೆಗೆ ಬರಲಿ, ಡಿಕೆಶಿ ಸವಾಲ್!

ನೋಟಿಸ್ ನೀಡಿದ ಒಂದು ವಾರದೊಳಗೆ ಪರವಾನಗಿ ಪಡೆಯಬೇಕು ಇಲ್ಲದಿದ್ದಲ್ಲಿ, ಮಳಿಗೆಗೆ ಬೀಗ ಜಡಿಯುವುದಾಗಿ ಮೌಖಿಕ ಎಚ್ಚರಿಕೆ ಕೂಡ ನೀಡಲಾಗಿದೆ. ಕೋಳಿ ಅಂಗಡಿಯಾದ್ರೆ 2,500 ರೂ ಹಾಗೂ ಕೋಳಿ ಅಂಗಡಿ ಜೊತೆಗೆ ಮಟನ್ (Mutton) ಮತ್ತು ಫಿಶ್ (Fish)ಮಳಿಗೆ ಲೈಸೆನ್ಸ್ ಗೆ 10,500 ರೂ. ಶುಲ್ಕ ಫಿಕ್ಸ್ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಹಿಂದವೀ ಮೀಟ್ ಮಾರ್ಕೆಟ್ ಮಾಲಿಕ ಮುನೇಗೌಡ (Munnegowda) ಹಿಂದವಿ ಮಾರ್ಟ್ ಆರಂಭಗೊಂಡಿದ್ದು ಮಾರ್ಚ್ (March) ತಿಂಗಳಲ್ಲಿ, ಆದ್ರೆ ಟ್ರೇಡ್ ಲೈಸೆನ್ಸ್ ಏಪ್ರಿಲ್‌ನಲ್ಲಿ ನವೀಕರಣ ಮಾಡ್ಬೇಕಿತ್ತು. ಹೀಗಾಗಿ ಟ್ರೇಡ್ ಲೈಸೆನ್ಸ್ ತಗೊಂಡಿರಲಿಲ್ಲ. ಇಂದು ಟ್ರೇಡ್ ಲೈಸೆನ್ಸ್ ಗೆ 10500 ಕಟ್ಟಿ ಅಪ್ಲೈ ಮಾಡಲಾಗಿದೆ ಇನ್ನೆರಡು ದಿನದಲ್ಲಿ ಲೈಸೆನ್ಸ್ ಸಿಗಲಿದೆ ಅಂತ ಹೇಳಿದ್ರು. 

ಅಲ್ಲದೆ ಹಲಾಲ್ ಕಟ್‌ಗಾಗಿ ಎರಡು ಕಸಾಯಿಖಾನೆಗಳಿವೆ (slaughterhouses), ಆದ್ರೆ ಜಟ್ಕಾ ಕಟ್‌ಗೆ ನಾವು  ಎಲ್ಲೋಗ್ಬೇಕು? ಸರ್ಕಾರ ಹಾಗೂ ಬಿಬಿಎಂಪಿ ರೂಲ್ಸ್ ನಾವು ಅನುಸರಿಸ್ತೀವಿ ಆದ್ರೆ ಜಟ್ಕಾ ಕಟ್‌ಗೆ ಸುಸಜ್ಜಿತ ಹಾಗೂ ಆಧುನಿಕ ಕಸಾಯಿಖಾನೆ ಕೊಡುವ ಮೂಲಕ ನಮ್ಮ ಜೊತೆ ಬಿಬಿಎಂಪಿ ಹಾಗೂ ಸರ್ಕಾರ ಕೈ ಜೋಡಿಸ್ಬೇಕಿದೆ. ಇಲ್ಲದಿದ್ದಲ್ಲಿ ಕಾನೂನು ಹೋರಾಟ (legal battle)ಮಾಡ್ತಿವಿ ಅಂತ ಎಚ್ವರಿಕೆ ನೀಡಿದ್ದಾರೆ.

News Hour: ಹಿಜಾಬ್, ಹಲಾಲ್, ಧರ್ಮ ಸಂಘರ್ಷ ಕುರಿತು ಎಚ್‌ಡಿಕೆ ಖಡಕ್ ಮಾತು

Follow Us:
Download App:
  • android
  • ios