Asianet Suvarna News Asianet Suvarna News

Bengaluru: ಏರ್‌ಪಾಡ್‌ ಬಿಟ್ಟು ಹೋದ ಮಹಿಳೆ ಟ್ರ್ಯಾಕ್‌ ಮಾಡಿ ಹಿಂದಿರುಗಿಸಿದ ಆಟೋಚಾಲಕ: ನೆಟ್ಟಿಗರ ಮೆಚ್ಚುಗೆ..!

ಈ ಆಟೋರಿಕ್ಷಾ ಚಾಲಕ ಎಷ್ಟು ಟೆಕ್‌ ಸೇವಿಯಾಗಿದ್ದಾನೆ ಅಂದರೆ ತಂತ್ರಜ್ಞಾನ ವಿಚಾರದಲ್ಲಿ ಎಷ್ಟು ಬುದ್ಧಿವಂತನಾಗಿದ್ದಾನೆ ಎಂದು ನೆಟ್ಟಿಗರು ಆಶ್ಚರ್ಯ ಪಟ್ಟಿದ್ದಾರೆ. 

autorickshaw driver tracks down woman to return her airpods in bengaluru ash
Author
First Published Nov 17, 2022, 3:17 PM IST | Last Updated Nov 17, 2022, 3:36 PM IST

ತಂತ್ರಜ್ಞಾನ ಬಳಕೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಸಾಮಾನ್ಯ ಜನರೂ ಸಹ ಈಗ ಅವಲಂಬಿಸುತರಾಗಿದ್ದು, ತಂತ್ರಜ್ಞಾನವಿಲ್ಲದೆ ಜೀವನ ಮಾಡಲೂ ಸಾಧ್ಯವಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಇನ್ನು, ಜನರು ಇತರರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಕಳೆದುಕೊಂಡಿದ್ದನ್ನು ಹಿಂದಿರುಗಿಸಲು ತಂತ್ರಜ್ಞಾನವನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಸಹ  ಹಲವಾರು ಘಟನೆಗಳು ಸಾಬೀತುಪಡಿಸುತ್ತವೆ. ಅಂಥದ್ದೊಂದು ಘಟನೆ ಈಗ ವೈರಲ್ ಆಗಿದೆ. ಅದೂ ನಮ್ಮ ಬೆಂಗಳೂರಲ್ಲಿ ಎಂಬುದು ವಿಶೇಷ. ಮಹಿಳೆಯೊಬ್ಬರು ತಮ್ಮ "ಪೀಕ್ ಬೆಂಗಳೂರು ಮೊಮೆಂಟ್‌" ಅನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆಟೋರಿಕ್ಷಾ ಚಾಲಕ ಮಹಿಳೆ ಆಪಲ್ ಏರ್‌ಪಾಡ್‌ಗಳನ್ನು ಬಿಟ್ಟು ಹೋದ ಬಳಿಕ ಆಕೆಯನ್ನು ಪತ್ತೆಹಚ್ಚಿ ಅರ್ಧ ಗಂಟೆಯೊಳಗೆ ಅದನ್ನು ವಾಪಸ್‌ ಮಾಡಿದ್ದಾನೆ. 

ಶಿಡಿಕಾ ಉಬ್ರ್ ಎಂಬ ಮಹಿಳೆ ಕೆಲಸಕ್ಕೆ ಹೋಗುವಾಗ ಆಟೋದಲ್ಲಿ ಪ್ರಯಾಣ ಮಾಡುತ್ತಿರುವಾಗ ತನ್ನ ಏರ್‌ಪಾಡ್‌ಗಳನ್ನು ಕಳೆದುಕೊಂಡಿರುವ ಬಗ್ಗೆ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅದೇ ಮಹಿಳೆಗೆ ಆಟೋ ಚಾಲಕ ಆಕೆಯನ್ನು ಟ್ರ್ಯಾಕ್‌ ಮಾಡಿ, ದುಬಾರಿ ಗ್ಯಾಜೆಟ್‌  ಆದ ಆಪಲ್‌ ಏರ್‌ಪಾಡ್‌ ಅನ್ನು ಹಿಂದಿರುಗಿಸಿದ್ದಾನೆ. 

ಇದನ್ನು ಓದಿ: ಆಪಲ್ ಫೋನ್‌ಗಿಂತ ನೂರು ಪಾಲು ಅಧಿಕ ಮೊತ್ತಕ್ಕೆ ಹರಾಜಾಯ್ತು Steve Jobs ಚಪ್ಪಲಿ

ಏರ್‌ಪಾಡ್‌ಗಳನ್ನು ಕನೆಕ್ಟ್‌ ಮಾಡುವ ಮೂಲಕ ಹಾಗೂ ಫೋನ್‌ಪೇ ಟ್ರಾನ್ಸಾಕ್ಷನ್ಸ್‌ಗಳನ್ನು ಬಳಸಿಕೊಂಡು ಆ ಏರ್‌ಪಾಡ್‌ ಮಾಲೀಕರ ಹೆಸರನ್ನು ಹುಡುಕಿ ಪ್ತತೆ ಹಚ್ಚಿದ್ದಾನೆ. ಅಲ್ಲದೆ, ಆಕೆಯನ್ನು ಸಹ ಟ್ರ್ಯಾಕ್‌ ಮಾಡಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಸಹ ಶಿಡಿಕಾ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ. ಅವನು ತನ್ನನ್ನು ಡ್ರಾಪ್‌ ಮಾಡಿದ್ದ ಸ್ಥಳ ಅಂದರೆ, ತಾನು ಕೆಲಸ ಮಾಡುವ ಕಚೇರಿಗೆ ಬಂದು ಏರ್‌ಪಾಡ್‌ ಅನ್ನು ಆಫೀಸ್‌ ಸೆಕ್ಯುರಿಟಿಗೆ ಕೊಟ್ಟಿದ್ದಾನೆ ಎಂದೂ ಮಹಿಳೆ ವಿವರಿಸಿದ್ದಾರೆ. 

“ಆಟೋದಲ್ಲಿ ಪ್ರಯಾಣಿಸುವಾಗ ನನ್ನ ಏರ್‌ಪಾಡ್‌ಗಳನ್ನು ಕಳೆದುಕೊಂಡೆ. ಅರ್ಧ ಗಂಟೆಯಲ್ಲಿ, ನನ್ನನ್ನು WeWork ನಲ್ಲಿ ಡ್ರಾಪ್ ಮಾಡಿದ ಈ ಆಟೋ ಡ್ರೈವರ್ ಪ್ರವೇಶದ್ವಾರಕ್ಕೆ ಬಂದು ಮತ್ತು ಅದನ್ನು ಸೆಕ್ಯುರಿಟಿಗೆ ಹಿಂತಿರುಗಿಸಿದ್ದಾನೆ. ಮಾಲೀಕರ ಹೆಸರನ್ನು ಹುಡುಕಲು ಅವನು ಏರ್‌ಪಾಡ್‌ಗಳನ್ನು ಕನೆಕ್ಟ್ ಮಾಡಿದ್ದಾನೆ ಮತ್ತು ನನ್ನನ್ನು ಪತ್ತೆಹಚ್ಚಲು ಫೋನ್‌ಪೇ ಟ್ರಾನ್ಸಾಕ್ಷನ್‌ ಬಳಸಿದ್ದಾನೆ” ಎಂದು ಮಹಿಳೆಯ ಟ್ವೀಟ್‌ನ ಕ್ಯಾಪ್ಷನ್‌ ಹೇಳುತ್ತದೆ.

ಇದನ್ನೂ ಓದಿ: Caviar iPhone 14 Pro Max: ಇದು 1 ಕೋಟಿ ಮೌಲ್ಯದ Apple ಮೊಬೈಲ್‌..!

ಆಟೋರಿಕ್ಷಾ ಚಾಲಕನನ್ನು ‘ಟೆಕ್‌ ಸೇವಿ’ ಎಂದ ನೆಟ್ಟಿಗರು
ಮಹಿಳೆಯ ಟ್ವಿಟ್ಟರ್‌ ಪೋಸ್ಟ್‌ ಸುಮಾರು 10,000 ಲೈಕ್‌ಗಳನ್ನು ಹಾಗೂ  600 ರೀಟ್ವೀಟ್‌ಗಳನ್ನು ಪಡೆದುಕೊಂಡಿದೆ. ಇನ್ನು, ಈ ಆಟೋರಿಕ್ಷಾ ಚಾಲಕ ಎಷ್ಟು ಟೆಕ್‌ ಸೇವಿಯಾಗಿದ್ದಾನೆ ಅಂದರೆ ತಂತ್ರಜ್ಞಾನ ವಿಚಾರದಲ್ಲಿ ಎಷ್ಟು ಬುದ್ಧಿವಂತನಾಗಿದ್ದಾನೆ ಎಂದು ನೆಟ್ಟಿಗರು ಆಶ್ಚರ್ಯ ಪಟ್ಟಿದ್ದಾರೆ. ಹಾಗೂ, ಹಲವರು ಕಮೆಂಟ್‌ಗಳ ಮೂಲಕ ಹಾಗೂ ಟ್ವೀಟ್‌ಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಎಂಜಿನಿಯರ್‌ಗಳಿಗಿಂತ "ಆಟೋ ಡ್ರೈವರ್‌ಗಳು ಹೆಚ್ಚು ಟೆಕ್ ಉತ್ಸಾಹಿಗಳಾ ಹೇಗೆ (ವಿಶೇಷವಾಗಿ ಬೆಂಗಳೂರಿನಲ್ಲಿ)," ಎಂದು ಒಬ್ಬ ವ್ಯಕ್ತಿ ಟ್ವೀಟ್‌ ಮಾಡಿದ್ದಾನೆ. 
 "ಬೆಂಗಳೂರಿನಲ್ಲಿ ಆಟೋ ಚಾಲಕರು ನಿಜವಾದ OG ಗಳು. ನಾನು ಈ ರೀತಿ ಕೇಳುತ್ತಿರುವ ಮೊದಲ ಕತೆ ಇದಲ್ಲ. ಬೆಂಗಳೂರು ಉದ್ಯಮಿಗಳಿಗೆ ಏಕೆ ಪರಿಪೂರ್ಣ ತಾಣವಾಗಿದೆ ಎನ್ನುವುದಕ್ಕೆ ಇದು ಉದಾಹರಣೆ’’ ಎಂದು ಇನ್ನೊಬ್ಬ ವ್ಯಕ್ತಿ ಹೇಳಿದ್ದಾರೆ. 

ಇದನ್ನೂ ಓದಿ: ವಾಚ್ಒಎಸ್ 9.1 ಬಿಡುಗಡೆ ಮಾಡಿದ ಆಪಲ್, ಏನೆಲ್ಲ ವಿಶೇಷತೆಗಳು?

"ಮೊದಲನೆಯದಾಗಿ ಈ ರೀತಿಯ ಕೆಲಸವನ್ನು ಮಾಡಲು ಅವನು ಉತ್ತಮ ವ್ಯಕ್ತಿಯಾಗಬೇಕು ಮತ್ತು ಎರಡನೆಯದಾಗಿ ಯಾವ ಗ್ರಾಹಕನು ಅದನ್ನು ಕಳೆದುಕೊಂಡಿದ್ದಾನೆಂದು ಲೆಕ್ಕಾಚಾರ ಮಾಡಲು ಅವನು ಬುದ್ಧಿವಂತನಾಗಿರಬೇಕು - ಭಾಯಿ ಹ್ಯಾಟ್ಸ್ ಆಫ್!" ಎಂದು ಮತ್ತೊಬ್ಬ ನೆಟ್ಟಿಗ ಟ್ವೀಟ್‌ ಮಾಡಿದ್ದಾನೆ. 

"ಅಂತಹ ಟೆಕ್ ಜ್ಞಾನ ಕೌಶಲ್ಯ ಹೊಂದಿರುವ ಅವನು ನಿಜವಾಗಲೂ ಆಟೋ ಡ್ರೈವರ್ ಆಗಿದ್ದಾನಾ, ಬಹುಶಃ ಅವನು ಮೂನ್‌ಲೈಟಿಂಗ್‌ ಮಾಡುತ್ತಿದ್ದಾನೆ" ಎಂದು ಮತ್ತೊಬ್ಬ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: iPhone 14 Pro ಸ್ಟಾಕ್‌ ಖಾಲಿ, ಆಪಲ್‌ ಜೊತೆ ಮಾತನಾಡಿದ ಕೇಂದ್ರ ಸಚಿವ!

Latest Videos
Follow Us:
Download App:
  • android
  • ios