ರಾಜ್ಯದಲ್ಲಿ ಹಾಲಿನ ದರ ಏರಿಕೆಯಿಂದ ಶುರುವಾದ ಬೆಲೆ ಏರಿಕೆ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಬೆಂಗಳೂರಿನ ಹೊಟೆಲ್, ರೆಸ್ಟೋರೆಂಟ್ಗಳಲ್ಲಿ ತಿನಿಸುಗಳ ಬೆಲೆ ಏರಿಕೆಯಾಗಿದೆ. ಇಡ್ಲಿ, ದೋಸೆ ಸೇರಿ ಎಲ್ಲಾ ತಿನಿಸುಗಳು ದುಬಾರಿಯಾಗಿದೆ.
ಬೆಂಗಳೂರು (ನ.05) ಕರ್ನಾಟಕದಲ್ಲಿ ದರ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಇಷ್ಟು ದಿನ ಫ್ರೀ ಫ್ರೀ ಫ್ರೀ ಎಂದಿದ್ದ ಜನತೆ ಇದೀಗ ದುಬಾರಿ ಜೀವನದಿಂದ ಕಂಗಾಲಾಗಿದ್ದಾರೆ. ಹಾಲಿನ ದರ ಏರಿಕೆ, ಮೊಸರು ದರ ಏರಿಕೆ ಬೆನ್ನಲ್ಲೇ ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ. ಇತ್ತ ಬಸ್ ದರ ಏರಿಕೆಯಾಗಿದೆ. ಈ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಬೆಂಗಳೂರಿನ ಹೊಟೆಲ್ ಹಾಗೂ ರೆಸ್ಟೋರೆಂಟ್ಗಳಲ್ಲಿ ಇಡ್ಲಿ ದೋಸೆ ಸೇರಿದಂತೆ ಎಲ್ಲಾ ತಿನಿಸುಗಳು, ಟಿ, ಕಾಫಿ ಬೆಲೆ ಏರಿಕೆಯಾಗಿದೆ.
ಬೆಲೆ ಏರಿಕೆಗೆ ಕಾರಣವೇನು?
ಪ್ರತಿ ದಿನ ಹೊಟೆಲ್ ಆಹಾರ ನೆಚ್ಚಿಕೊಂಡಿರುವ ಗ್ರಾಹಕರು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಹೊಟೆಲ್ ತಿನಿಸುಗಳ ದರದಲ್ಲಿ ಶಕೇಡಾ 10 ರಿಂದ 15ರಷ್ಟು ಬೆಲೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ದೊಸೆ, ಇಡ್ಲಿ, ವಡೆ ಸೇರಿದಂತೆ ಎಲ್ಲಾ ತಿಂಡಿಗಳ ಬೆಲೆ ಏರಿಕೆಯಾಗಿದೆ. ಹಾಲಿನ ಬೆಲೆ ಏರಿಕೆ ಬೆನ್ನಲ್ಲೇ ಟೀ ಕಾಫಿ ಬೆಲೆ ಏರಿಕೆಯಾಗಿತ್ತು. ಇದರ ಬೆನ್ನಲ್ಲೇ ತಿನಿಸುಗಳ ಬೆಲೆಯೂ ದುಬಾರಿಯಾಗಿದೆ.ಬೆಂಗಳೂರು ಹೊಟೆಲ್ ಸಂಘ (BBHA) ಅಧ್ಯಕ್ಷ ಪಿಸಿ ರಾವ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಹೊಟೆಲ್ ತಿನಿಸುಗಳ ಬೆಲೆ ಅನಿವಾರ್ಯವಾಗಿ ಏರಿಕೆ ಮಾಡಬೇಕಾಗಿದೆ. ಕಚ್ಚಾ ವಸ್ತುಗಳ ಬೆಲೆ ತೀವ್ರ ಏರಿಕೆಯಾಗಿದೆ. ಇದು ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಪಿಸಿ ರಾವ್ ಹೇಳಿದ್ದಾರೆ. ಹೊಟೆಲ್ ಉದ್ಯಮ ಬಳಸುತ್ತಿರುವ ಅಕ್ಕಿ ಬೆಲೆ 65 ರೂಪಾಯಿಯಿಂದ 95 ರೂಪಾಯಿಗೆ ಏರಿಕೆಯಾಗಿದೆ. ಹಾಲಿನ ದರ ಏರಿಕೆ, ಹಾಲಿನ ಉತ್ಪನ್ನಗಳಾದ ಮೊಸರು, ಬೆಣ್ಣೆ, ತುಪ್ಪ, ಪನ್ನೀರ್ ಸೇರಿದಂತೆ ಇತರ ಬೆಲೆ ಏರಿಕೆಯಾಗಿದೆ. ವಾಣಿಜ್ಯ ಎಲ್ಪಿಜಿ ಬೆಲೆ ಏರಿಕೆ, ತರಕಾರಿ, ಬೇಳೆಕಾಳು ಬೆಲೆ ಏರಿಕೆಯಿಂದ ಹೊಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಹಲವು ಹೊಟೆಲ್ಗಳು ನಷ್ಟದಲ್ಲಿದೆ. ಹೀಗಾಗಿ ಬೆಲೆ ಏರಿಕೆ ಅನಿವಾರ್ಯ ಎಂದು ಪಿಸಿ ರಾವ್ ಹೇಳಿದ್ದಾರೆ.
ಹೊಸ ದರ ಪಟ್ಟಿ
ಸಣ್ಣ ಹೊಟೆಲ್, ದರ್ಶಿನಿಗಳಲ್ಲಿ ಟೀ ಕಾಫಿ ಬೆಲೆ 5 ರೂಪಾಯಿ ಏರಿಕೆಯಾಗಿದೆ. ದೊಟ್ಟ ಹೊಟೆಲ್ಗಳಲ್ಲಿ 10 ರಿಂದ 20 ರೂಪಾಯಿ ಏರಿಕೆಯಾಗಿದೆ. 100 ರೂಪಾಯಿ ದೋಸೆ ಬೆಲೆ 110 ರಿಂದ 115 ರೂಪಾಯಿಗೆ ಏರಿಕೆಯಾಗಿದೆ. 60 ರೂಪಾಯಿ ಇದ್ದ ಪಲಾವ್ ಸೇರಿದಂತೆ ಇತರ ಆಹಾರಗಳು 70ರಿಂದ 75 ರೂಪಾಯಿ ಆಗಿದೆ. 80 ರಿಂದ 100 ರೂಪಾಯಿ ಇದ್ದ ಊಟದ ಬೆಲೆ 110 ರಿಂದ 120 ರೂಪಾಯಿ ಆಗಿದೆ. ಇಡ್ಲಿ-ವಡೆ ಬೆಲೆಯೂ ದುಬಾರಿಯಾಗಿದೆ. ಆಯಾ ಹೊಟೆಲ್ಗಳಲ್ಲಿ ಬೆಲೆಗಳು ವ್ಯತ್ಯಸಾವಿದೆ.
ಬೆಲೆ ಏರಿಕೆಯಿಂದ ಕರ್ನಾಟಕ ಜನತೆ ಕಂಗಾಲಾಗಿದ್ದಾರೆ. ಸರದಿ ಸಾಲಿನಲ್ಲಿ ಬೆಲೆಗಳು ಏರಿಕೆಯಾಗಿದೆ. ಸಾರಿಗೆ ಬಸ್ ಬೆಲೆ ಏರಿಕೆಯಿಂದ ಇದೀಗ ಇತರ ಸಾರಿಗೆಗಳ ಬೆಲೆಯೂ ಏರಿಕೆಯಾಗಲಿದೆ. ಇದೀಗ ಹೊಟೆಲ್ ತಿಂಡಿಗಳ ಬೆಲೆ ಏರಿಕೆಯಿಂದ ವಿದ್ಯಾರ್ಥಿಗಳು, ಪ್ರತಿ ನಿತ್ಯ ಹೊಟೆಲ್ ಆಹಾರ ಸೇವಿಸುವ ಮಂದಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.






