ಬೆಂಗಳೂರಿನ ಕೋಣನಕುಂಟೆ ಕ್ರಾಸ್ನಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ 77 ಕೋಟಿ ರೂ. ವೆಚ್ಚದಲ್ಲಿ 600 ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಬಿ-ಸ್ಮೈಲ್ ವತಿಯಿಂದ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಇದರಿಂದ ಸಿಗ್ನಲ್ ಮುಕ್ತ ಸಂಚಾರ ಸಾಧ್ಯವಾಗಲಿದೆ.
ಬೆಂಗಳೂರು: ನಗರದ ಕೋಣನಕುಂಟೆ ಕ್ರಾಸ್ನಲ್ಲಿ ಸಂಚಾರ ಸಮಸ್ಯೆ ನಿವಾರಿಸಲು ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಕೋಣನಕುಂಟೆ ಕ್ರಾಸ್ ಟ್ರಾಫಿಕ್ ನಿವಾರಣೆಗೆ ಮೇಲ್ಸೇತುವೆ ನಿರ್ಮಾಣ
ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಶನಿವಾರ 3ನೇ ಹಂತದ ವಾರ್ಡ್ ಒನ್ ಅಭಿಯಾನಕ್ಕೆ ಕೋಣನಕುಂಟೆ ಕ್ರಾಸ್ನಲ್ಲಿ ಗೋಡೆಗೆ ಬಣ್ಣ ಬಳಿಯುವ ಮೂಲಕ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ-ಸ್ಮೈಲ್ ವತಿಯಿಂದ 600 ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಮೇಲ್ಸೇತುವೆ ನಿರ್ಮಾಣದಿಂದ ಈ ಭಾಗದಲ್ಲಿ ಸಿಗ್ನಲ್ ಮುಕ್ತ ಸಂಚಾರಕ್ಕೆ ಅವಕಾಶವಾಗಲಿದೆ ಎಂದರು.
ಫೋರಂ ಮಾಲ್ ಸಮೀಪ ಮೆಟ್ರೋಗೆ ಸೇರಿದ ಜಾಗವನ್ನು ಖರೀದಿಸಿ ಯಾವುದೇ ತಡೆ ಇಲ್ಲದೆ, ಎಡತಿರುವು ಪಡೆಯುವ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ. ಮಾಲ್ ಮುಂದಿನ ತಡೆಗೋಡೆ ಕೂಡಲೇ ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಮೆಟ್ಟಿಲು ನಿರ್ಮಿಸುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
600 ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ
ಕೋಣನಕುಂಟೆ ಕ್ರಾಸ್, ಬೆಂಗಳೂರಿನಲ್ಲಿ ಬಹಳ ಕಂಜೆಸ್ಟೆಡ್ ಜಂಕ್ಷನ್ನಲ್ಲಿ ಒಂದು. ಇಲ್ಲಿಂದ ಜನಗಳು ಕೂಡ ಸುಮಾರು ಸಮಯ ಈ ಜಂಕ್ಷನ್ನಲ್ಲಿ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಅದಕ್ಕೆ ತಕ್ಷಣಕ್ಕೆ ಇಲ್ಲಿ ಏನು ಸುಧಾರಣೆ ಮಾಡಬಹುದು ಅಂತ ಮಾನ್ಯ ಶಾಸಕರು, ಮಾನ್ಯ ಮುಖ್ಯ ಆಯುಕ್ತರು, ಆಯುಕ್ತರು ಎಲ್ಲರೂ ಸೇರಿ ನಾವು ಸ್ಪಾಟ್ನಲ್ಲಿ ಕೆಲವೆಲ್ಲ ಸಮಸ್ಯೆಗಳನ್ನು ಪರಿಶೀಲನೆ ಮಾಡ್ತಾ ಇದ್ದೇವೆ. ಕೆಲವು ಕಡೆ ಫುಟ್ಪಾತೇ ಇರಲಿಲ್ಲ, ಸೋ ಸಡನ್ ಆಗಿ ಎಂಡ್ ಆಗ್ಬಿಟ್ಟರೆ ಬಹಳ ಜನ ಸಂಖ್ಯೆ ಓಡಾಡುವಂತಹ ಜಾಗದಲ್ಲಿ, ಕನೆಕ್ಟಿವಿಟಿ ಫುಟ್ಪಾತ್ ಇಲ್ಲ ಅಂತ ಹೇಳಿದರೆ ಜನ ರೋಡ್ಗೆ ಬರ್ತಾರೆ, ಆಕ್ಸಿಡೆಂಟ್ ಜಾಸ್ತಿ ಆಗುತ್ತೆ. ಸೋ ಎಲ್ಲೆಲ್ಲಿ ಫುಟ್ಪಾತ್ ಇಲ್ಲ ಅದನ್ನು ಇವತ್ತು ಟ್ಯಾಕಲ್ ಮಾಡ್ತಾ ಇದ್ದೇವೆ ಎಂದು ತಿಳಿಸಿದರು.
ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಂದು ಫ್ರೀ ಲೆಫ್ಟ್ ಕೊಟ್ಟರೆ ಕೋಣನಕುಂಟೆ ಕ್ರಾಸ್ನಲ್ಲಿ ಸ್ವಲ್ಪ ಟ್ರಾಫಿಕ್ ಮೂವ್ಮೆಂಟ್ಗೆ ಅನುಕೂಲ ಆಗುತ್ತೆ ಅಂತ ಹೇಳಿದರು. ಅದಕ್ಕೆ ಇವತ್ತು ಮೆಟ್ರೋದವರು ಸಹ ಜೊತೆಗೆ ಬಂದು, ಮೆಟ್ರೋ ಅವರ ಜಾಗದಲ್ಲಿ ಒಂದು ಫ್ರೀ ಲೆಫ್ಟ್ ಟರ್ನ್ ಕೊಡಲಿಕ್ಕೆ ಮೆಟ್ರೋವರಿಗೂ ಕೂಡ ನಾನು ಸಜೆಸ್ಟ್ ಮಾಡಿದ್ದೀವಿ. ಅವರ ಸಾಮರ್ಥ್ಯದೊಂದಿಗೆ ಒಂದು ಫ್ರೀ ಲೆಫ್ಟ್ ಅನ್ನು ಮಾಡೋದರಿಂದ ಸ್ವಲ್ಪ ಟ್ರಾಫಿಕ್ ಮೂವ್ಮೆಂಟ್ ಜಂಕ್ಷನ್ನಲ್ಲಿ ಇಂಪ್ರೂವ್ ಆಗುತ್ತೆ ಅಂತ, ಅದನ್ನು ಕೂಡ ಇವತ್ತು ಚಾಲನೆ ಕೊಟ್ಟಿದ್ದೇವೆ. ಕೆಲವು ಕಡೆ ಫುಟ್ಪಾತ್ ಅನ್ನು ಲಿಂಕ್ ಮಾಡುವಂತದ್ದು ಮಾಡ್ತಾ ಇದ್ದೇವೆ. ಸಣ್ಣ ಪುಟ್ಟ ಸ್ವಲ್ಪ ಬ್ಯೂಟಿಫಿಕೇಶನ್ ವರ್ಕ್ ಅನ್ನು ಇವತ್ತು ಮಾಡಿಸ್ತಾ ಇದ್ದೇವೆ. ಸೋ ಈ ಜಂಕ್ಷನ್ ಅನ್ನು ಇಂಪ್ರೂವ್ ಮಾಡುವಂತಹ ಕೆಲಸ ಇವತ್ತು ನಡೀತಾ ಇದೆ. ಜೊತೆಗೆ ಲಾಂಗ್ ಟರ್ಮ್ ಸಲ್ಯೂಷನ್ ಬೇಕು ಅಂತ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಇಲ್ಲಿ ಒಂದು ಫ್ಲೈ ಓವರ್ನೇ ಮಾಡಬೇಕು ಅಂತ ಹೇಳಿ, ಸುಮಾರು 600 ಮೀಟರ್ ಉದ್ದದ, ಫ್ಲೈ ಓವರ್ ಅನ್ನು ಮಾಡಬೇಕು ಅಂತ ಪ್ರಸ್ತಾಪ ಮಾಡಿ, ಎಸ್ಟಿಮೇಟ್ ಅನ್ನು ತಯಾರು ಮಾಡಿ, ಈಗಾಗಲೇ ಟೆಂಡರ್ ಸ್ಟೇಜ್ಗೆ ನಾವು ಅದನ್ನು ತಗೊಂಡು ಬಂದಿದ್ದೇವೆ.
77 ಕೋಟಿ ರೂ. ವೆಚ್ಚದಲ್ಲಿ ಫ್ಲೈಓವರ್
ಈಗಾಗಲೇ ಟೆಂಡರ್ ಆದ ಕೂಡಲೇ ಈ ಕೋಣನಕುಂಟೆ ಜಂಕ್ಷನ್ನಲ್ಲಿ ಸ್ವಲ್ಪ ಜಾಗ ಲ್ಯಾಂಡ್ ಅಕ್ವಿಸಿಷನ್ ಬರುತ್ತೆ. ಇರೋ ಜಾಗ ಬಳಸಿಕೊಂಡು ಅಡಿಷನಲ್ ಲ್ಯಾಂಡ್ ಅಕ್ವಿಸಿಷನ್ ಅನ್ನು ಮಾಡಿ, ಸುಮಾರು ಮೆಟ್ರೋ ಲೈನ್ ಇರೋದರಿಂದ. ಎಡಬದಿಗೆ ಒಂದು ಫ್ಲೈ ಓವರ್ ಇರುತ್ತೆ, ಬಲಬದಿಗೆ ಒಂದು ಫ್ಲೈ ಓವರ್ ಸಪರೇಟ್ ಆಗಿರುತ್ತೆ. ಸೋ, ಎರಡೂ ಕಾಂಬಿನೇಷನ್ನಲ್ಲಿ ಈ ಕಡೆ ಒಂದು 600 ಮೀಟರ್, ಆ ಕಡೆ ಒಂದು 600 ಮೀಟರ್. ಎರಡೂ ಸೈಡ್ನಲ್ಲಿ ಫ್ಲೈ ಓವರ್ ಮಾಡುವುದರಿಂದ ಇವತ್ತು ಏನು ಕೋಣನಕುಂಟೆ ಜಂಕ್ಷನ್ನಲ್ಲಿ, ಇಷ್ಟೊಂದು ಟ್ರಾಫಿಕ್ ಜಾಮ್ ಆಗ್ತಾ ಇದೆ. ಇದಕ್ಕೆ ಲಾಂಗ್ ಟರ್ಮ್ ಸಲ್ಯೂಷನ್ ಅನ್ನೋದು ಕೂಡ ಕೊಡ್ತಾ ಇದ್ದೇವೆ. ಒಂದು 77 ಕೋಟಿ ರೂಪಾಯಿ ವೆಚ್ಚದಲ್ಲಿ ಇಲ್ಲಿ ಫ್ಲೈಓವರ್ ಅನ್ನು ಸ್ಯಾಂಕ್ಷನ್ ಮಾಡಿದ್ದೇವೆ. ಅದನ್ನು ಕೂಡ ಈಗ ಟೆಂಡರ್ ಮಾಡಿ, ಆದಷ್ಟು ಶೀಘ್ರದಲ್ಲಿ ಕೆಲಸ ಶುರು ಮಾಡಿ, ಒಂದೂವರೆ ಎರಡು ವರ್ಷದಲ್ಲಿ ಫ್ಲೈ ಓವರ್ ಅನ್ನು ಕೂಡ ಮುಗಿಸಿದರೆ, ಆವಾಗ ಸ್ವಲ್ಪ ಇಲ್ಲಿ ಲಾಂಗ್ ಟರ್ಮ್ ಸಲ್ಯೂಷನ್ ಕೂಡ ಆಗುತ್ತೆ ಎಂದು ಸಚಿವರು ವಿವರಿಸಿದರು.
ಈ ವೇಳೆ ಶಾಸಕ ಕೃಷ್ಣಪ್ಪ, ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್, ಹೆಚ್ಚುವರಿ ಆಯುಕ್ತ ನವೀನ್ ಕುಮಾರ್ ರಾಜು, ಮುಖ್ಯ ಎಂಜಿನಿಯರ್ ಬಸವರಾಜ್ ಕಬಾಡೆ, ಲೋಕೇಶ್ ಉಪಸ್ಥಿತರಿದ್ದರು.
















