ಏರ್‌ಶೋಗೆ ಮೋದಿ: ನಗರದಲ್ಲಿ ಬಿಗಿ ಸರ್ಪಗಾವಲು, ಡ್ರೋನ್‌, ಕಾಪ್ಟರ್‌ ಸಂಚಾರ ನಿಷೇಧ

ಯಲಹಂಕದ ವಾಯು ನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಇಂದು ಉದ್ಘಾಟಿಸುವ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

Air show will inaugurated by Prime Minister Narendra Modi in Bengaluru today Heavy police presence in the city akb

ಬೆಂಗಳೂರು:  ಯಲಹಂಕದ ವಾಯು ನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಇಂದು ಉದ್ಘಾಟಿಸುವ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ. ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಮತ್ತು ವಿಶೇಷ ಪೊಲೀಸ್‌ ಆಯುಕ್ತ ಡಾ. ಎಂ.ಎ.ಸಲೀಂ (M.A. Salim) ನೇತೃತ್ವದಲ್ಲಿ ಭದ್ರತೆ ಹಾಗೂ ಪ್ರಧಾನಿ ಹಾಗೂ ಗಣ್ಯರ ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. 

ಇಬ್ಬರು ಹೆಚ್ಚುವರಿ ಪೊಲೀಸ್‌ ಆಯುಕ್ತರು, ಇಬ್ಬರು ಜಂಟಿ ಪೊಲೀಸ್‌ ಆಯುಕ್ತರು, 30 ಡಿಸಿಪಿ, 60 ಎಸಿಪಿ, 120 ಇನ್‌ಸ್ಪೆಕ್ಟರ್‌ಗಳು, 480 ಸಬ್‌ ಇನ್‌ಸ್ಪೆಕ್ಟರ್‌, 1 ಸಾವಿರ ಎಎಸ್‌ಐ, ಕಾನ್‌ಸ್ಟೇಬಲ್‌, ಹೆಡ್‌ಕಾನ್‌ಸ್ಟೇಬಲ್‌, 20 ಕೆಎಸ್‌ಆರ್‌ಪಿ, 20 ಸಿಎಆರ್‌ ತುಕಡಿ, ಗರುಡ ಪಡೆ, ಹೋಂ ಗಾರ್ಡ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಭಾನುವಾರ ರಾತ್ರಿ 7.40ಕ್ಕೆ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿಯನ್ನು ಪೊಲೀಸ್‌ ಸರ್ಪಗಾವಲಿನಲ್ಲಿ ರಾಜಭವನಕ್ಕೆ (Raj Bhavan) ಕರೆತರಲಾಯಿತು. 

ಏರ್ಪೋರ್ಟ್ ಪ್ರಯಾಣಿಕರೇ ಈ ಸ್ಟೋರಿ ಓದಲೇಬೇಕು: ಫೆಬ್ರವರಿ 17ರವರೆಗೆ ಏರ್ ಶೋ ಹಿನ್ನೆಲೆ ಸಂಚಾರ ದಟ್ಟಣೆ

ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ರಾಜಭವನದ ಸುತ್ತ ಸಿಸಿಟಿವಿ ಕ್ಯಾಮರಾ (CCTV cameras) ಅಳವಡಿಸಿ ನಿಗಾವಹಿಸಲಾಗಿದೆ. ಸೋಮವಾರ ರಾಜಭವನದಿಂದ ಯಲಹಂಕ ವಾಯುನೆಲೆವರೆಗೂ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೋನ್‌, ಕಾಪ್ಟರ್‌ ಸಂಚಾರ ನಿಷೇಧ

ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ ಫೆ.13ರಿಂದ 17ರವರೆಗೆ ಬೆಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಆಕಾಶದಲ್ಲಿ ಡ್ರೋನ್‌, ಖಾಸಗಿ ಹೆಲಿಕಾಪ್ಟರ್‌, ಸಣ್ಣ ವಿಮಾನಗಳು, ಬಲೂನ್‌ಗಳ ಹಾರಾಟ ನಡೆಸದಂತೆ ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ನಿಷೇಧಾಜ್ಞೆ ಹೊರಡಿಸಿದ್ದಾರೆ.

ಎಲ್ಲ ಮಾದರಿ ವಾಹನ ನಿರ್ಬಂಧ

ಬಳ್ಳಾರಿ ರಸ್ತೆಯ ಎಲೆವೇಟೆಡ್‌ ರಸ್ತೆಯಿಂದ ಎಸ್ಟೀಮ್‌ ಮಾಲ್‌ವರೆಗೂ ಬೆಳಗ್ಗೆ 8 ರಿಂದ 11.30ರವರೆಗೆ ಎಲ್ಲ ಮಾದರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಏರ್‌ ಶೋ ಪ್ರವೇಶ ಪತ್ರ ಇರುವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಉಳಿದ ವಾಹನಗಳು ಯಲಹಂಕ ಸರ್ವಿಸ್‌ ರಸ್ತೆ ಬಳಸುವಂತೆ ಸಲಹೆ ನೀಡಲಾಗಿದೆ. ಹೆಣ್ಣೂರು ಜಂಕ್ಷನ್‌ ಕಡೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport) ಸಾಗಲು ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಂಗಳೂರು ಸ್ಟಾರ್‌ ಹೋಟೆಲ್‌ಗಳು ಬಹುತೇಕ ಭರ್ತಿ: ಈ ನಾಲ್ಕು ದಿನ ಹೋಟೆಲ್‌ ರೂಮು ಸಿಗೊಲ್ಲ

Latest Videos
Follow Us:
Download App:
  • android
  • ios