ಬೆಂಗಳೂರಿನ ಸರ್ಜಾಪುರ-ವರ್ತೂರು ರಸ್ತೆಯಲ್ಲಿ ಅಭೀ ವೆಂಚರ್ಸ್ ಸಂಸ್ಥೆಯು 45 ಎಕರೆ ವಿಸ್ತೀರ್ಣದಲ್ಲಿ 'ಅಭೀ ಸಿಟಿ ಅರ್ಬನ್ ಗ್ಲೆನ್' ಎಂಬ ಬೃಹತ್ ಟೌನ್‌ಶಿಪ್ ನಿರ್ಮಿಸುತ್ತಿದೆ. ಸ್ಕಾಟ್‌ಲ್ಯಾಂಡ್ ಶೈಲಿಯ ಈ ಯೋಜನೆಯಲ್ಲಿ 140ಕ್ಕೂ ಹೆಚ್ಚು ಸೌಲಭ್ಯಗಳಿದ್ದು, ಫ್ಲ್ಯಾಟ್‌ಗಳ ಬೆಲೆ ₹1.3 ಕೋಟಿಯಿಂದ ಆರಂಭವಾಗುತ್ತದೆ. ಕಂಪ್ಲೀಟ್ ಮಾಹಿತಿ ಸ್ಟೋರಿಯಲ್ಲಿದೆ.

ಬೆಂಗಳೂರು: ರಿಯಲ್ ಎಸ್ಟೇಟ್ ವಿಚಾರದಲ್ಲಿ ಸರ್ಜಾಪುರ-ವರ್ತೂರು ರಸ್ತೆ ಯಾವಾಗಲೂ ಭಾರೀ ಬೇಡಿಕೆಯಲ್ಲಿರುವ ಜಾಗ. ಇದೀಗ ಇದೇ ಭಾಗದ ಚಿಕ್ಕವಾಡೇರಪುರದಲ್ಲಿ, ಗ್ರೀನ್‌ವುಡ್ ಹೈಸ್ಕೂಲ್ ಹಿಂಭಾಗದಲ್ಲಿ ಅಭೀ ವೆಂಚರ್ಸ್ (Abhee Ventures) ಸಂಸ್ಥೆಯು 'ಅಭೀ ಸಿಟಿ ಅರ್ಬನ್ ಗ್ಲೆನ್' (Abhee City Urban Glenn) ಎಂಬ ಬೃಹತ್ ಟೌನ್‌ಶಿಪ್ ಪ್ಲಾನ್ ಆರಂಭಿಸಿದೆ.

ಹೈಲೈಟ್ಸ್‌ ಏನು?

ಸುಮಾರು 45 ಎಕರೆ ವಿಸ್ತೀರ್ಣದಲ್ಲಿ (Abhee City Urban Glenn ತಲೆ ಎತ್ತಲಿದೆ. ಈ ಯೋಜನೆಗೆ ಸ್ಕಾಟ್‌ಲ್ಯಾಂಡ್ ಶೈಲಿಯ ಥೀಮ್ ನೀಡಲಾಗಿದೆ. ಒಟ್ಟು 14 ಟವರ್‌ಗಳು ಮತ್ತು ಸುಮಾರು 3,000 ಫ್ಲ್ಯಾಟ್‌ಗಳನ್ನು ನಿರ್ಮಿಸಲು ಯೋಜಿಸಲಾಗಿದೆ. 3 ಎಕರೆ ವಿಸ್ತೀರ್ಣದ ಗಾಲ್ಫ್ ರೇಂಜ್, 4 ಭವ್ಯ ಕ್ಲಬ್‌ಹೌಸ್‌ಗಳು, ಕೃತಕ ಕೆರೆ, ವಾಕಿಂಗ್ ಮತ್ತು ಸೈಕ್ಲಿಂಗ್ ಟ್ರ್ಯಾಕ್ ಸೇರಿದಂತೆ ಬರೋಬ್ಬರಿ 140ಕ್ಕೂ ಹೆಚ್ಚು ಅತ್ಯಾಧುನಿಕ ಸೌಲಭ್ಯಗಳಿವೆ. ಮೊದಲ ಹಂತದಲ್ಲಿ 3 ಟವರ್‌ಗಳು ಮತ್ತು 566 ಅಪಾರ್ಟ್‌ಮೆಂಟ್‌ಗಳು (2, 2.5, 3, 3.5 ಮತ್ತು 4.5 BHK) ರೇರಾ (RERA) ನೋಂದಣಿ ಪಡೆದುಕೊಂಡಿವೆ.

ಫ್ಲ್ಯಾಟ್‌ಗಳ ಬೆಲೆ ಎಷ್ಟು?

ಪ್ರಸ್ತುತ ಇಲ್ಲಿ ಚದರ ಅಡಿಗೆ ₹11,000 ದಿಂದ ₹11,600 ದರವಿದೆ. ಈ ಪ್ರಕಾರ 2 BHK ಮನೆ ₹1.3 ರಿಂದ ₹1.4 ಕೋಟಿ, 3 BHK ಮನೆ ₹1.6 ರಿಂದ ₹2 ಕೋಟಿ ಹಾಗೂ 4.5 BHK ಮನೆ ₹2.8 ರಿಂದ ₹3 ಕೋಟಿಯವರೆಗೆ ಸಿಗಲಿದೆ. ಇನ್ನು, ಜಿಎಸ್‌ಟಿ ಮತ್ತು ನೋಂದಣಿ ಶುಲ್ಕ ಪ್ರತ್ಯೇಕವಾಗಿ ನೀಡಬೇಕಾಗುತ್ತದೆ. ಪ್ರತಿಷ್ಠಿತ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ಇಲ್ಲಿ ಬೆಲೆ ಮಧ್ಯಮ ಶ್ರೇಣಿಯಲ್ಲಿದೆ.

ಈ ಸ್ಥಳದಿಂದ ವೈಟ್‌ಫೀಲ್ಡ್, ವಿಪ್ರೋ ಸೆಜ್ ಮತ್ತು ಔಟರ್ ರಿಂಗ್ ರೋಡ್‌ಗಳು ಕೇವಲ 10 ರಿಂದ 12 ಕಿ.ಮೀ ದೂರದಲ್ಲಿದೆ. ಹೀಗಾಗಿ ಇದು ಉತ್ತಮ ಕನೆಕ್ಟಿವಿಟಿಯನ್ನ ಹೊಂದಿವೆ. ಆದರೆ ವರ್ತೂರು ರಸ್ತೆ ಹಾಗೂ ದೊಮ್ಮಸಂದ್ರ ಜಂಕ್ಷನ್‌ನಲ್ಲಿ ಪೀಕ್ ಅವರ್‌ಗಳಲ್ಲಿ ಟ್ರಾಫಿಕ್ ಹೆಚ್ಚಾಗಿರುತ್ತದೆ. ರೇರಾ ದಾಖಲೆಗಳ ಪ್ರಕಾರ.. ಮೊದಲ ಹಂತದ ಕಾಮಗಾರಿ ಮುಕ್ತಾಯಕ್ಕೆ 2033ರ ಡಿಸೆಂಬರ್ ಗಡುವು ನೀಡಲಾಗಿದೆ. ನಿಧಾನವಾಗಿ ಗೃಹಪ್ರವೇಶ ಮಾಡುವ ಯೋಜನೆ ಇರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಬುಕಿಂಗ್ ಮಾಡುವ ಮುನ್ನ ಸ್ಥಳಕ್ಕೆ ಭೇಟಿ ನೀಡಿ ಕಾಗದಪತ್ರಗಳನ್ನು ಪರಿಶೀಲಿಸುವುದು ಒಳ್ಳೆಯದು.

ಅಭೀ ವೆಂಚರ್ಸ್ ಸಂಸ್ಥೆಯು 2009 ರಿಂದ ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಗುಂಜೂರಿನ Abhee Aaria ಮತ್ತು ಸರ್ಜಾಪುರದ ‘ಅಭೀ ಸೆಲೆಸ್ಟಿಯಲ್ ಸಿಟಿ’ಯಂತಹ ಯೋಜನೆಗಳನ್ನು ನಿರ್ಮಿಸಿದೆ. ಶೋಭಾ ಅಥವಾ ಪ್ರೆಸ್ಟಿಜ್‌ನಂತಹ ದೈತ್ಯ ಸಂಸ್ಥೆಗಳಿಗೆ ಹೋಲಿಸಿದರೆ ಇದು ಮಧ್ಯಮ ಗಾತ್ರದ ಸಂಸ್ಥೆಯಾಗಿದೆ. ಇವರ ಹಿಂದಿನ ಪ್ರಾಜೆಕ್ಟ್‌ಗಳಿಗೆ ಖುದ್ದು ಭೇಟಿ ನೀಡಿ ಗುಣಮಟ್ಟ ಪರಿಶೀಲಿಸುವುದು ಒಳ್ಳೆಯದು.

ವರ್ತೂರು ಮತ್ತು ಸರ್ಜಾಪುರ ರಸ್ತೆಯ ಕೆಲವು ತಗ್ಗು ಪ್ರದೇಶಗಳಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವ ಸಮಸ್ಯೆ ಕಾಮನ್. ಪ್ರಾಜೆಕ್ಟ್ ಆವರಣದ ಸುತ್ತಮುತ್ತ ಹೈ-ಟೆನ್ಷನ್ ವಿದ್ಯುತ್ ತಂತಿಗಳು ಹಾದುಹೋಗಿವೆಯೇ ಎಂಬುದನ್ನು ಸೈಟ್ ವಿಸಿಟ್ ವೇಳೆ ಖಚಿತಪಡಿಸಿಕೊಳ್ಳಿ.