ಮಾರತಹಳ್ಳಿ-ಸರ್ಜಾಪುರ ಮೆಟ್ರೋ ಕಾಮಗಾರಿಯ ಕಬ್ಬಿಣದ ಶೀಟ್ ಬಸ್ ಮೇಲೆ ಬಿದ್ದು ಭಾರೀ ಅನಾಹುತ ತಪ್ಪಿದೆ. ಈ ಘಟನೆಯು ಮೆಟ್ರೋ ಸಿಬ್ಬಂದಿಯ ನಿರ್ಲಕ್ಷ್ಯವನ್ನು ತೋರಿಸಿದ್ದು, 2023ರಲ್ಲಿ ಪಿಲ್ಲರ್ ಕುಸಿದು ತಾಯಿ-ಮಗು ಮೃತಪಟ್ಟಿದ್ದ ದುರಂತವನ್ನು ನೆನಪಿಸಿದೆ.

ಬೆಂಗಳೂರು: ಮಾರತಹಳ್ಳಿ ಮತ್ತು ಸರ್ಜಾಪುರ ನಡುವೆ ನಡೆಯುತ್ತಿರುವ ಮೆಟ್ರೋ ಕಾಮಗಾರಿಗೆ ಅಳವಡಿಸಿದ್ದ ಕಬ್ಬಿಣದ ಶೀಟ್ ಹತ್ತಾರು ಮೀಟರ್ ಎತ್ತರದಿಂದ ಕಳಚಿ ನೆಲಕ್ಕೆ ಬಿದ್ದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೆಟ್ರೋ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಕಬ್ಬಿಣದ ಶೀಟ್ ಬಿಎಂಟಿಸಿ ಬಸ್ ಮೇಲೆ ಬಿದ್ದಿದೆ. ಒಂದು ವೇಳೆ ರಸ್ತೆ ಮೇಲೆ ಬಿಎಂಟಿಸಿ ಬಸ್ ಬದಲು ಬೈಕ್ ಸವಾರ ಇದ್ದಿದ್ದರೆ ದೊಡ್ಡ ಅನಾಹುತ ನಡೆಯುವುದು ಖಚಿತವಾಗಿತ್ತು. 2023ರಲ್ಲಿ ಮೆಟ್ರೋ ಪಿಲ್ಲರ್ ಕುಸಿತದಿಂದ ತಾಯಿ ಮತ್ತು ಮಗು ಸಾವನ್ನಪ್ಪಿದ್ದರು. ನಿರ್ಮಾಣಹಂತದ ಮೆಟ್ರೋ ಪಿಲ್ಲರ್ ಕುಸಿತದ ದೃಶ್ಯಗಳು ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ತಾಯಿ ಮತ್ತು ಮಗುವನ್ನು ಬಲಿ ಪಡೆದಿತ್ತು ಮೆಟ್ರೋ ಪಿಲ್ಲರ್

2023 ರ ಜನವರಿ 10 ರಂದು ನಾಗವಾರ ಬಳಿ ನಿರ್ಮಾಣ ಹಂತದಲ್ಲಿರುವ ಮೆಟ್ರೋ ಪಿಲ್ಲರ್ ಬಿದ್ದು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಅರ್ಜಿದಾರರ ಪತ್ನಿ ತೇಜಸ್ವಿನಿ ಎಲ್ ಸುಲಾಖೆ (26) ಮತ್ತು ಅವರ ಎರಡೂವರೆ ವರ್ಷದ ಮಗ ವಿಹಾನ್ ಸಾವನ್ನಪ್ಪಿದರು. ಮೃತ ತೇಜಸ್ವಿನಿ ಸಾಫ್ಟ್‌ವೇರ್ ಇಂಜಿನೀಯರ್ ಅಗಿ ಕೆಲಸ ಮಾಡುತ್ತಿದ್ದರು.

ಇದೇ ಫೆಬ್ರವರಿಯಲ್ಲಿ (2026) ಮುಂಬೈ ಮೆಟ್ರೋ ಕಾಮಗಾರಿ ವೇಳೆ ನಿರ್ಮಾಣ ಹಂತದ ಪಿಲ್ಲರ್ ಆಟೋ ಮತ್ತು ಕಾರ್ ಮೇಲೆ ಕುಸಿದಿತ್ತು. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು.

ಇದನ್ನೂ ಓದಿ: ನಷ್ಟದ ಸುಳಿಯಲ್ಲಿ ನಮ್ಮ ಮೆಟ್ರೋ? ನಿತ್ಯ 11 ಲಕ್ಷ ಪ್ರಯಾಣಿಕರೂ ಓಡಾಡಿದ್ರೂ ಕೋಟಿ ಕೋಟಿ ನಷ್ಟ?

ಇದನ್ನೂ ಓದಿ: ಬೆಂಗಳೂರು: ಭಾನುವಾರ ಬೈಯಪ್ಪನಹಳ್ಳಿ - ಎಂ.ಜಿ. ರಸ್ತೆ ನಡುವೆ ಮೆಟ್ರೋ ಸೇವೆ ತಾತ್ಕಾಲಿಕ ಸ್ಥಗಿತ!