Asianet Suvarna News Asianet Suvarna News

ಬೆಂಗಳೂರು: ಕುಸಿಯುವ ಹಂತದಲ್ಲಿ 178 ಕಟ್ಟಡ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದೋ ಅಥವಾ ನಾಳೆಯೋ ಕುಸಿದು ಬೀಳುವ 178 ಕಟ್ಟಡಗಳಿವೆ ಎಂಬ ಆತಂಕಕಾರಿ ಅಂಶವನ್ನು ಬಿಬಿಎಂಪಿ ಅಧಿಕಾರಿಗಳ ತಂಡ ಪತ್ತೆ ಮಾಡಿದೆ. ಪತ್ತೆಯಾಗಿರುವ 178 ಕಟ್ಟಡಗಳ ಪೈಕಿ 77 ಕಟ್ಟಡಗಳ ಮಾಲಿಕರಿಗೆ ನೋಟಿಸ್ ನೀಡಿ, ಕಟ್ಟಡ ತೆರವುಗೊಳಿಸುವಂತೆ ಸೂಚಿಸಲಾಗಿದೆ.

178 buildings are in collapsing stage in bangalore
Author
Bangalore, First Published Nov 11, 2019, 9:57 AM IST

ಬೆಂಗಳೂರು(ನ. 11): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದೋ ಅಥವಾ ನಾಳೆಯೋ ಕುಸಿದು ಬೀಳುವ 178 ಕಟ್ಟಡಗಳಿವೆ ಎಂಬ ಆತಂಕಕಾರಿ ಅಂಶವನ್ನು ಬಿಬಿಎಂಪಿ ಅಧಿಕಾರಿಗಳ ತಂಡ ಪತ್ತೆ ಮಾಡಿದೆ.

"

ಪತ್ತೆಯಾಗಿರುವ 178 ಕಟ್ಟಡಗಳ ಪೈಕಿ 77 ಕಟ್ಟಡಗಳ ಮಾಲಿಕರಿಗೆ ನೋಟಿಸ್ ನೀಡಿ, ಕಟ್ಟಡ ತೆರವುಗೊಳಿಸುವಂತೆ ಸೂಚಿಸಲಾಗಿದೆ. ಉಳಿದ ಕಟ್ಟಡಗಳಿಗೆ ಶೀಘ್ರದಲ್ಲಿ ನೋಟಿಸ್ ನೀಡಲು ಬಿಬಿಎಂಪಿ ಉದ್ದೇಶಿಸಿದೆ.

ಬೆಂಗಳೂರು: ಕುಸಿದು ಬಿತ್ತು 50 ವರ್ಷ ಹಳೆಯ ಕಟ್ಟಡ

ಕಳೆದ ಜುಲೈನಲ್ಲಿ ನಗರದ ಕಾಕ್ಸ್‌ಟೌನ್‌ನಲ್ಲಿ ಕಟ್ಟಡ ಕುಸಿದು ನಾಲ್ಕು ಮಂದಿ ಮೃತಪಟ್ಟಿದ್ದರು. ಸೆಪ್ಟಂಬರ್‌ನಲ್ಲಿ ಬನಶಂಕರಿಯ 7ನೇ ಹಂತದ ಪುಟ್ಟೇನಹಳ್ಳಿಯ ವಿವೇಕಾನಂದ ಕಾಲೋನಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತವಾಗಿತ್ತು. ಹೀಗಾಗಿ, ಬಿಬಿಎಂಪಿ ಆಯುಕ್ತರು ಸೆಪ್ಟಂಬರ್‌ನಲ್ಲಿ ವಲಯವಾರು ಪ್ರತ್ಯೇಕ ಅಧಿಕಾರಿಗಳ ತಂಡ ರಚಿಸಿ ಶಿಥಿಲಗೊಂಡಿರುವ ಕಟ್ಟಡಗಳನ್ನು ಗುರುತಿಸುವಂತೆ ಸೂಚನೆ ನೀಡಿದ್ದರು.

’ಮೋಸ ಮಾಡಿ ಮಾಜಿ ಸಿಎಂ ಸಿದ್ದರಾಮಯ್ಯ ಪಕ್ಷಾಂತರ’

ಅದರಂತೆ ಸರ್ವೇ ನಡೆಸಿದ ಪಾಲಿಕೆ ಅಧಿಕಾರಿಗಳು, ಎಂಟು ವಲಯಗಳ ಪೈಕಿ ಐದು ವಲಯದಲ್ಲಿ ಬರೋಬ್ಬರಿ ೧೭೮ ಶಿಥಿಲಗೊಂಡಿರುವ ಕಟ್ಟಡಗಳಿವೆ ಎಂಬ ಆತಂಕಕಾರಿ ಅಂಶವನ್ನು ಬಿಚ್ಚಿಟ್ಟಿದ್ದಾರೆ.

‘ಸ್ಟ್ರಕ್ಚರಲ್ ಆಡಿಟ್’:

ಶಿಥಿಲಾವಸ್ಥೆಯಲ್ಲಿರುವ 178 ಕಟ್ಟಡಗಳಲ್ಲಿ ವಾಸಿಸುತ್ತಿರುವವರನ್ನು ಕೂಡಲೇ ಖಾಲಿ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವ ಆಯುಕ್ತರು, ಕಟ್ಟಡಗಳ ಸದೃಢತೆ ಪರೀಕ್ಷೆಗೆ ‘ಸ್ಟ್ರಕ್ಚರಲ್ ಆಡಿಟ್’ಗೆ ತಜ್ಞರನ್ನು ನೇಮಕಕ್ಕೆ ನಿರ್ದೇಶನ ನೀಡಿದ್ದಾರೆ. ‘ಸ್ಟ್ರಕ್ಚರಲ್ ಆಡಿಟ್’ ವರದಿ ಬಂದ ಬಳಿಕ ಗುರುತಿಸಲಾದ ಕಟ್ಟಡದಲ್ಲಿ ರಿಪೇರಿ ಮಾಡಿಕೊಂಡು ವಾಸಿಸಬಹುದಾದ ಕಟ್ಟಡಗಳನ್ನು ಬಿಟ್ಟು ಉಳಿದ ಎಲ್ಲ ಕಟ್ಟಡಗಳನ್ನು ತೆರವುಗೊಳಿಸಲಾಗುವುದು. ಜತೆಗೆ ‘ಸ್ಟ್ರಕ್ಚರಲ್ ಆಡಿಟ್’ ವೆಚ್ಚವನ್ನು ಕಟ್ಟಡ ಮಾಲಿಕರಿಂದಲೇ ವಸೂಲಿ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ಟಿಪ್ಪು ಜಯಂತಿ: ಅಧಿಕಾರಿಗಳು ಸರ್ಕಾರದ ಕೈಗೊಂಬೆ ಎಂದ ತನ್ವೀರ್ ಸೇಠ್.

3 ವಲಯದಲ್ಲಿ ಶಿಥಿಲಗೊಂಡ ಕಟ್ಟಡಗಳಿಲ್ಲ: ನಗರದ ಕೇಂದ್ರ ಭಾಗದ ದಕ್ಷಿಣ ವಲಯದಲ್ಲಿ 33, ಪಶ್ಚಿಮ ವಲಯದಲ್ಲಿ 33, ಪೂರ್ವದಲ್ಲಿ 49, ಯಲಹಂಕದಲ್ಲಿ 61 ಹಾಗೂ ಮಹದೇವಪುರ ವಲಯದಲ್ಲಿ 2 ಶಿಥಿಲಗೊಂಡ ಕಟ್ಟಡಗಳಿವೆ ಎಂದು ಗುರುತಿಸಲಾಗಿದೆ. ಆದರೆ, ದಾಸರಹಳ್ಳಿ, ಬೊಮ್ಮನಹಳ್ಳಿ ಹಾಗೂ ರಾಜರಾಜೇಶ್ವರಿ ನಗರ ವಲಯದಲ್ಲಿ ಒಂದೇ ಒಂದು ಶಿಥಿಲಗೊಂಡ ಕಟ್ಟಡಗಳಿಲ್ಲ ಎಂದು ಪಾಲಿಕೆ ಅಧಿಕಾರಿಗಳು ನೀಡಿರುವ ವರದಿಯಲ್ಲಿ ಉಲ್ಲೇಖಿಸಿರುವುದು ಅಚ್ಚರಿ ಮೂಡಿಸಿದೆ

77 ಕಟ್ಟಡಗಳ ತೆರವಿಗೆ ನೋಟಿಸ್:

ಕೇಂದ್ರ ಭಾಗದಲ್ಲಿ ಅತಿ ಹೆಚ್ಚು ಶಿಥಿಲಗೊಂಡಿರುವ ಕಟ್ಟಡಗಳಿವೆ. ಅದರಲ್ಲಿ ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಯಲಹಂಕ ವಲಯದ ಒಟ್ಟು 77 ಶಿಥಿಲಗೊಂಡ ಕಟ್ಟಡಗಳಿಗೆ ಕೆಎಂಸಿ ಕಾಯ್ದೆ ಅನುಗುಣವಾಗಿ ನೋಟಿಸ್ ನೀಡಲಾಗಿದೆ. ಅಲ್ಲದೇ ಅತಿ ಶೀಘ್ರದಲ್ಲಿ ಕಟ್ಟಡ ತೆರವು ಮಾಡುವಂತೆ ಕಟ್ಟಡ ಮಾಲಿಕರಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಮಾಲಿಕರು ಕಟ್ಟಡ ತೆರವು ಮಾಡದಿದ್ದ ಪಕ್ಷದಲ್ಲಿ ಪಾಲಿಕೆಯಿಂದಲೆ ಕಟ್ಟಡ ತೆರವುಗೊಳಿಸಿ ವೆಚ್ಚವನ್ನು ಕಟ್ಟಡ ಮಾಲಿಕರಿಂದ ವಸೂಲಿಗೆ ಸೂಚಿಸಲಾಗಿದೆ.

ಬೆಂಗಳೂರು: ಸಿಗರೇಟ್‌ನಲ್ಲಿದ್ದದ್ದು ತಂಬಾಕಲ್ಲ, ಗಾಂಜಾ..!

ದಕ್ಷಿಣ 33 ಕಟ್ಟಡಗಳಿದ್ದು 30 ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ. ಪಶ್ಚಿಮದಲ್ಲಿ 33 ಕಟ್ಟಡವಿದ್ದು 06ಕ್ಕೆ, ಪೂರ್ವದಲ್ಲಿ 49 ಕಟ್ಟಡಳಿದ್ದಿ 33ಕ್ಕೆ, ಯಲಹಂಕದಲ್ಲಿ 60 ಕಟ್ಟಡಗಳಿದ್ದು 08ಕ್ಕೆ, ಮಹದೇವಪುರದಲ್ಲಿ 02 ಸೇರಿ ಒಟ್ಟು 178ರಲ್ಲಿ 77 ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ.    

- ವಿಶ್ವನಾಥ ಮಲೇಬೆನ್ನೂರು

Follow Us:
Download App:
  • android
  • ios