ಬೆಂಗಳೂರು(ನ.11): ನಗರದಲ್ಲಿ ಶನಿವಾರ ಸುರಿದ ಭಾರೀ ಮಳೆಗೆ ಸುಬ್ರಹ್ಮಣ್ಯ ನಗರದಲ್ಲಿ ಎರಡು ಮಹಡಿಯ ಕಟ್ಟಡ ಕುಸಿತ ಉಂಟಾಗಿದ್ದು, ಕಟ್ಟಡ ಮಾಲಿಕರಿಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ.

ಪಶ್ಚಿಮ ವಲಯದ ಸುಬ್ರಹ್ಮಣ್ಯ ನಗರ ವಾರ್ಡ್‌ನ 13ನೇ ಮುಖ್ಯರಸ್ತೆಯ ಕೃಷ್ಣಮೂರ್ತಿ ಎಂಬುವರಿಗೆ ಸೇರಿದ ಸುಮಾರು 50 ವರ್ಷದ ಹಳೇ ಕಟ್ಟಡ ಶನಿವಾರ ಸುರಿದ ಮಳೆಗೆ ಕುಸಿದಿದೆ. ಕಳೆದ ಕೆಲವು ದಿನಗಳ ಹಿಂದೆ ಕೃಷ್ಣ ಮೂ ರ್ತಿ ಅವರ ಕಟ್ಟಡದ ಪಕ್ಕದ ನಿವೇಶನ ಮಾಲಿಕರಾದ ಡಾ.ಸುನೀತಾ ಎಂಬುವ ರು ಕಟ್ಟಡ ನಿರ್ಮಾಣಕ್ಕೆ ಪಾಯ ತೆಗೆದಿದ್ದ ರು. ಶನಿವಾರ ಮಳೆ ಸುರಿದ ಹಿನ್ನೆಲೆಯಲ್ಲಿ ಮಣ್ಣು ಸಡಿಲಗೊಂಡು ಕಟ್ಟಡ ಕುಸಿತವಾಗಿದೆ.

ಬೆಂಗಳೂರು: ಸಿಗರೇಟ್‌ನಲ್ಲಿದ್ದದ್ದು ತಂಬಾಕಲ್ಲ, ಗಾಂಜಾ..!

ಡಾ.ಸುನೀತಾ ಹಾಗೂ ಕೃಷ್ಣಮೂರ್ತಿ ಇಬ್ಬರಿಗೂ ಬಿಬಿಎಂಪಿಯಿಂದ ನೋಟಿಸ್ ಜಾರಿ ಮಾಡಲಾಗಿದೆ ಎಂದು ವಾರ್ಡ್ ಎಂಜಿನಿಯರ್ ಮುಕುಂದ ಮಾಹಿತಿ ನೀಡಿದ್ದಾರೆ. ಅಲ್ಲದೇ ಕಟ್ಟಡವನ್ನು ಸಂಪೂರ್ಣವಾಗಿ ತೆರವು ಮಾಡುವುದಕ್ಕೆ ಮಾಲಿಕರಿಗೆ ಸೂಚನೆ ನೀಡಲಾಗಿದೆ.

ಡೆತ್ ನೋಟ್ ಆರೋಪಗಳೂ ಸಾಕ್ಷ್ಯವಲ್ಲ

ತಾತ್ಕಾಲಿಕವಾಗಿ ಕಟ್ಟಡ ಇನ್ನಷ್ಟು ಕುಸಿಯದಂತೆ ಮರಳಿನ ಚೀಲ ಹಾಗೂ ಇನ್ನಿತರ ಮುನ್ನೆಚ್ಚರಿಕೆ ಕ್ರಮ ವಹಿಸುವುದಕ್ಕೆ ಸೂಚನೆ ನೀಡ ಲಾಗಿದೆ ಎಂದು ತಿಳಿಸಿದ್ದಾರೆ. ವಾಲಿದ ಕಟ್ಟಡಕ್ಕೂ ನೋಟಿಸ್: ಕಳೆದ ಶುಕ್ರವಾರ ಮಹಾಲಕ್ಷ್ಮಿಪುರ ವಾರ್ಡ್ ನಲ್ಲಿ ಸುಮಾರು ೩೦ ಸೆಂ.ಮೀ. ವಾಲಿದ ಕಟ್ಟಡದ ಮಾಲಿಕರಿಗೂ ಬಿಬಿಎಂಪಿ ನೋಟಿಸ್ ನೀಡಿದ್ದು, ತಕ್ಷಣವೇ ಕಟ್ಟಡ ತೆರವು ಮಾಡುವಂತೆ ಸೂಚಿಸಿದೆ.

ಜೋಕೆ! ಸೆಕ್ಸ್‌ನಿಂದಲೂ ಹರಡುತ್ತೆ ಢೆಂಘೀ!