Asianet Suvarna News Asianet Suvarna News

ಅಯ್ಯಪ್ಪ ಕೊಲೆ : ಕುಲಪತಿ ಅಲ್ಲ, ತಮ್ಮನಿಂದ ಸುಪಾರಿ?

ಅಲಯನ್ಸ್‌ ವಿಶ್ವವಿದ್ಯಾನಿಲಯ ಮಾಜಿ ಕುಲಪತಿ ಅಯ್ಯಪ್ಪ ದೊರೆ ಅವರ ಹತ್ಯೆಗೆ ಸುಪಾರಿ ನೀಡಿದ್ದು ವಿವಿಯ ಕುಲಪತಿ ಸುಧೀರ್‌ ಅಂಗೂರ್‌ ಅವರ ಸಹೋದರ ಎನ್ನುವ ವಿಚಾರ ಬೆಳಕಿಗೆ ಬಂದಿದೆ. 

VC Brother gave supari For Ayyappa Dore Murder
Author
Bengaluru, First Published Oct 19, 2019, 7:23 AM IST

ಆನೇಕಲ್‌ [ಅ.19]:  ಅಲಯನ್ಸ್‌ ವಿಶ್ವವಿದ್ಯಾನಿಲಯ ಮಾಜಿ ಕುಲಪತಿ ಅಯ್ಯಪ್ಪ ದೊರೆ ಅವರ ಹತ್ಯೆಗೆ ಸುಪಾರಿ ನೀಡಿದ್ದು ವಿವಿಯ ಕುಲಪತಿ ಸುಧೀರ್‌ ಅಂಗೂರ್‌ ಅವರ ಸಹೋದರ ಮಧುಕರ್‌ ಅಂಗೂರ್‌ ಎನ್ನುವ ಅನುಮಾನ ವ್ಯಕ್ತವಾಗಿದೆ.

ವಿವಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿದ್ದ ಪ್ರಕರಣಗಳು ಸುಧೀರ್‌ ಪರವಾಗಿ ಬಂದಿವೆ. ಆದರೂ ವಿವಿಯನ್ನು ವಿವಾದಿತ ಕೇಂದ್ರವನ್ನಾಗಿಸಲು ಮಧುಕರ್‌ ಪ್ರಯತ್ನಿಸುತ್ತಿದ್ದು, ಅಯ್ಯಪ್ಪ ದೊರೆ ಹತ್ಯೆಗೆ ಯೋಜಿತವಾಗಿ ಸಂಚು ರೂಪಿಸಿ, ಪ್ರಕರಣದಲ್ಲಿ ಸುಧೀರ್‌ ಅವರನ್ನು ಮಧುಕರ್‌ ಸಿಲುಕಿಸಿದ್ದಾನೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಈ ಸಂಬಂಧ ಆನೇಕಲ್‌ನ ಅಲಯನ್ಸ್‌ ವಿವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿವಿ ನಿರ್ದೇಶಕಿ ಹಾಗೂ ಸುಧೀರ್‌ ಅಂಗೂರ್‌ ಸಹೋದರಿ ಶೈಲಜಾ ಛಬ್ಬಿ, ನನ್ನ ತಮ್ಮ ಸುಧೀರ್‌ ಅಂಗೂರ್‌ ವಿದ್ಯಾವಂತನಾಗಿದ್ದು, ಶ್ರೀರಾಮನಂತಹ ವ್ಯಕ್ತಿತ್ವ. ಆದರೆ ಮಧುಕರ್‌ ರಾವಣನ ವ್ಯಕ್ತಿತ್ವದವನು ಎಂದು ವ್ಯಗ್ರರಾದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಯ್ಯಪ್ಪ ದೊರೆ ಹಂತಕ ಸೂರಜ್‌ ಸಿಂಗ್‌, ಮಧುಕರ್‌ ಆಪ್ತರಾಗಿದ್ದು ತನಿಖೆಯ ದಿಕ್ಕು ತಪ್ಪಿಸಲು ಕುತಂತ್ರ ಹೆಣೆಯಲಾಗಿದೆ. ಅನ್ಯಾಯವಾಗಿ ನನ್ನ ತಮ್ಮ ಸುಧೀರ್‌ ಅವರಿಂದ ಬಲವಂತವಾಗಿ ಹೇಳಿಕೆ ಪಡೆಯಲಾಗಿದೆ. ಇದೆಲ್ಲಾ ಮಧುಕರ್‌ ಅಂಗೂರ್‌ನ ಪೂರ್ವ ನಿಯೋಜಿತ ಕೃತ್ಯ. ಕಾನೂನು ಕಾಲೇಜು ನಡೆಸುವ ನಾವು ಅಯ್ಯಪ್ಪ ದೊರೆ ಅವರನ್ನು ಕೊಲೆ ಮಾಡಲು ಸುಪಾರಿ ನೀಡಿದ್ದೇವೆ ಎಂಬ ಹೇಳಿಕೆಯೇ ಖಂಡನೀಯ. ನಾವು ಕಾನೂನು ಹೋರಾಟ ಮಾಡಿ ವಿವಿ ಹೆಸರಿಗೆ ಅಂಟಿಕೊಂಡಿರುವ ಕಳಂಕವನ್ನು ತೊಳೆಯಲು ಕಂಕಣಬದ್ಧರಾಗಿದ್ದೇವೆ ಎಂದರು.

ಕುಲಪತಿ ಸುಧೀರ್‌ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನನ್ನ ಸಹೋದರ ಮೃದು ಹೃದಯಿ. ಎಲ್ಲದರ ಬಗ್ಗೆ ಅತಿಯಾದ ಕಾಳಜಿ ವಸುವ ಸರಳ ವ್ಯಕ್ತಿ. ಕೆಲವೇ ದಿನಗಳಲ್ಲಿ ಯ ಘಟಿಕೋತ್ಸವ ನಡೆಯಲಿದೆ. ಆ ಕಾರ್ಯಭಾರದಲ್ಲಿ ಎಲ್ಲರೂ ನಿರತರಾಗಿದ್ದೆವು. ಇಂತಹ ಕ್ಷುಲ್ಲಕ ಹಾಗೂ ಅಮಾನವೀಯ ಆಲೋಚನೆ ಕೂಡ ಸುಧೀರ್‌ ಅವರಲ್ಲಿ ಸುಳಿಯದು ಎಂದರು.

ಸಿಬಿಐಗೆ ವಹಿಸಿ:

ಅಲಯನ್ಸ್‌ ನೂರಾರು ಕೋಟಿ ರುಪಾಯಿ ಆಸ್ತಿಯಾಗಿದ್ದು, ಅಯ್ಯಪ್ಪ ದೊರೆ ಕೊಲೆ ಪ್ರಕರಣ ಯೊಂದಿಗೆ ತಳುಕು ಹಾಕಿಕೊಂಡಿರುವುದು ಬೇಸರ ಸಂಗತಿ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ವಿಶ್ರಾಂತ ಕುಲಪತಿ ಅಯ್ಯಪ್ಪ ಅವರು ಸಂಭಾತ ವ್ಯಕ್ತಿಯಾಗಿದ್ದರು. ಅಲಯನ್ಸ್‌ ವಿಶ್ವಮಟ್ಟದಲ್ಲಿ ಬೆಳೆಯುವಲ್ಲಿ ಅವರ ಪಾತ್ರ ಸ್ಮರಣೀಯವಾಗಿದೆ. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದ ಅವರು, ಅಯ್ಯಪ್ಪ ದೊರೆ ಅವರ ಕೊಲೆ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಬೇಧಿಸಿದ ನಗರ ಪೊಲೀಸರ ಕಾರ್ಯವೈಖರಿಯನ್ನು ಗೌರಸುತ್ತೇವೆ ಎಂದು ಹೇಳಿದರು.

ಉಪಕುಲಪತಿ ಸಂಜೀವ ಬಡಾ ಶೆಟ್ಟಿ, ರಿಜಿಸ್ಟ್ರಾರ್‌ ಮಧುಸೂದನ್‌, ಡಾ. ಕಿರಣ್‌ ಗೌತಮ್‌ ಸುದ್ದಿಗೋಷ್ಠಿಯಲ್ಲಿದ್ದರು.

Follow Us:
Download App:
  • android
  • ios