ನೆಲಮಂಗಲ [ನ.07]: ಒಂದೇ ನಂಬರ್‌ನಲ್ಲಿ ಸಂಚರಿ ಸುತ್ತಿದ್ದ ಎರಡರಿಂದ ಮೂರು ಖಾಸಗಿ ಬಸ್ ಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಬುಧವಾರ ವಶಪಡಿಸಿಕೊಂಡಿದ್ದಾರೆ. 

ಇದರೊಂದಿಗೆ ಸರ್ಕಾರಕ್ಕೆ ಕೋಟ್ಯಂತರ ರು. ವಂಚಿಸುತ್ತಿದ್ದ ಬಸ್ ಕಂಪನಿಗೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಪ್ರತಿನಿತ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬಸ್‌ಗಳನ್ನು ಗಮನಿಸುತ್ತಿದ್ದ ಅಧಿಕಾರಿಗಳು, ಅನುಮಾನದ ಮೇರೆಗೆ ತಪಾಸಣೆ ನಡೆಸಿದಾಗ ಖಾಸಗಿ ಬಸ್ ಸಂಸ್ಥೆ ಮಾಡಿರುವ ಮೋಸ ಬೆಳಕಿಗೆ ಬಂದಿದ್ದು, ಬಸ್‌ಗಳನ್ನು ವಶಕ್ಕೆ ಪಡೆದು ಮಾಲೀಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಭಾಗದಲ್ಲಿ ಸಂಚರಿಸುವ ಅನೇಕ ಬಸ್ ಗಳ ಮಾಲೀಕರು, ಒಂದೇ ನಂಬರ್‌ಗಳನ್ನು ಹಲವು ಬಸ್‌ಗಳಿಗೆ ಬಳಸಿ ಸರ್ಕಾರಕ್ಕೆ ಪ್ರತಿವರ್ಷ ಕೋಟ್ಯಂತರ ರು. ವಂಚನೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.