ಬೆಳಗಾವಿ[ನ.6]: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಆಡಿಯೋ ರೆಕಾರ್ಡ್‌ ಅನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಇಲ್ಲವೇ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಮಾಡಿಸಿರಬಹುದು. ಸಿದ್ದರಾಮಯ್ಯಗೆ ಎಲ್ಲೆಡೆ ಲಿಂಕ್‌ ಇದೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಆರೋಪಿಸಿದ್ದಾರೆ. 

ಮಂಗಳವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರವಾಹ ಸಂತ್ರಸ್ತರಿಗಾಗಿ ಸಿದ್ದರಾಮಯ್ಯ ಪಾದಯಾತ್ರೆ ಮಾಡುವುದಾದರೆ ಮಾಡಲಿ ಬಿಡಿ. ಅದರಿಂದ ಅವರ ಆರೋಗ್ಯ ಸುಧಾರಿಸುತ್ತದೆ. ಬಿಪಿ, ಶುಗರ್‌ ಕಡಿಮೆಯಾಗುತ್ತದೆ ಎಂದು ವ್ಯಂಗ್ಯ ಮಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಿಎಸ್‌ವೈ ಹೇಳಿಕೆಗಳನ್ನು ಬಿಜೆಪಿ ರಾಜಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಾಡಿರಬಹುದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಕೈಯಲ್ಲಾಗದವರೂ ಮೈ ಪರಚಿಕೊಂಡಂತೆ ಎನ್ನುವ ಸ್ಥಿತಿ ಅವರದ್ದಾಗಿದೆ. ರೆಕಾರ್ಡ್‌ ಮಾಡಿದವರು ಯಾರು ಎಂದು ಸಿದ್ದರಾಮಯ್ಯ ಅವರಿಗೆ ಹೇಗೆ ಗೊತ್ತಾಯಿತು. ಅವರೇನು ದೇವರಾ ಅಥವಾ ಶಾಸ್ತ್ರ ಹೇಳ್ತಾರಾ ಎಂದು ಪ್ರಶ್ನಿಸಿದ ಅವರು, ಅಷ್ಟು ದೊಡ್ಡವರಾದವರು ಇಂತಹದನ್ನು ಮಾತನಾಡಬಾರದು. ಗಾಂಭೀರ್ಯ ಕಾಯ್ದುಕೊಳ್ಳಬೇಕು ಎಂದರು. ಗುಂಡೂರಾವ್‌ ಅವರು ಬೇರೆಯವರ ಧ್ವನಿಯಲ್ಲಿ ಮಿಮಿಕ್ರಿ ಮಾಡಿಸಿ, ಮಜಾ ತೆಗೆದು ಕೊಂಡಿರಬಹುದು ಎಂದು ದೂರಿದರು.

ಆಡಿಯೋ ರೆಕಾರ್ಡ್ ಮಾಡಿರೋದು ಬಿಜೆಪಿಯವರೆ ಎಂದ ಮಾಜಿ ಸಿಎಂ

ಪ್ರವಾಹ ಸಂತ್ರಸ್ತರಿಗಾಗಿ ಸಿದ್ದರಾಮಯ್ಯ ಪಾದಯಾತ್ರೆ ಮಾಡುವುದಾದರೆ ಮಾಡಲಿ ಬಿಡಿ. ಅದರಿಂದ ಅವರ ಆರೋಗ್ಯ ಸುಧಾರಿಸುತ್ತದೆ. ಬಿಪಿ, ಶುಗರ್‌ ಕಡಿಮೆಯಾಗುತ್ತದೆ ಎಂದು ವ್ಯಂಗ್ಯ ಮಾಡಿದರು. ಆಡಿಯೋ ನೈಜತೆ ಬಗ್ಗೆಯೇ ಅನುಮಾನ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಭಯಭೀತಿ ಆರಂಭಗೊಂಡಿದೆ ಎಂದು ದೂರಿದರು.

ಮನೆ ಅವ್ಯವಹಾರ ತನಿಖೆಗೆ

ವಿವಿಧ ವಸತಿ ಯೋಜನೆಗಳಡಿ ನಿರ್ಮಿಸಲಾದ ಮನೆಗಳ ಹಂಚಿಕೆಯಲ್ಲಿ ಅವ್ಯವಹಾರ ಪ್ರಕರಣದ ತನಿಖೆಗೆ ಆದೇಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ರಾಜ್ಯದ ಎಲ್ಲೆಡೆ ವಸತಿ ಯೋಜನೆಗಳ ಮನೆ ಹಂಚಿಕೆಯಲ್ಲಿ ಅವ್ಯವಹಾರ ನಡೆದಿರುವ ಕುರಿತು ವ್ಯಾಪಕ ದೂರು ಬಂದಿವೆ. ಒಂದೇ ಮನೆಗೆ ವಿವಿಧ ವಸತಿ ಯೋಜನೆಗಳ ಸೌಲಭ್ಯವನ್ನು ಪಡೆದಿರುವುದು ನನ್ನ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ವಸತಿ ಯೋಜನೆಗಳ ಮನೆ ಹಂಚಿಕೆ ಸಂಬಂಧ ತನಿಖೆಗೆ ರಾಜೀವ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಮನೆಗಳ ಹಂಚಿಕೆಯಲ್ಲಿ ಅವ್ಯವಹಾರವಾದ ಕುರಿತು ಸಮರ್ಪಕ ಮಾಹಿತಿ ನೀಡದಿದ್ದಲ್ಲಿ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಹೇಳಿದ್ದಾರೆ.