ಬೆಳಗಾವಿ[ನ.4]: ಉಪಚುನಾವಣೆಯ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ವಿಜಯಶಾಲಿಯಾಗಲಿದೆ. ದಿವಾಳಿ ಆಗಿರೋದು ಕಾಂಗ್ರೆಸ್ ಅಲ್ಲ, ಬಿಜೆಪಿ ಪಕ್ಷ ಎಂದು ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರು ಹೇಳಿದ್ದಾರೆ.

ಕಾಂಗ್ರೆಸ್ ದಿವಾಳಿಯಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಆರೋಪಕ್ಕೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು ,  
ಬಿಜೆಪಿ ಸಭೆಯಲ್ಲಿ ರೆಕಾರ್ಡ್ ಮಾಡಿದ್ದು ಯಾರು, ರೆಕಾರ್ಡ್ ಮಾಡಿರೋ ಬಿಜೆಪಿಯವರೇ.  ಬಿಜೆಪಿ ರಾಜ್ಯಾಧ್ಯಕ್ಷ ನಳಿಲ್ ಕುಮಾರ್ ಕಟಿಲ್, ಸವದಿ ಅಥವಾ ಬೊಮ್ಮಾಯಿ ಮಾಡಬೇಕು,ಇದ್ದ ಮೂವರಲ್ಲಿ ಕದ್ದವರು ಯಾರು. ಸತ್ಯ ಬಿಜೆಪಿಯಿಂದಲೇ ಹೊರ ಬಂದಿದೆ, ಯಡಿಯೂರಪ್ಪ ಮೊದಲು ನಾನು ಮಾತನಾಡಿದು ಸತ್ಯ ಎಂದ್ರು ,ವರಿಷ್ಠರು ಬೈದ ಮೇಲೆ ಯಡಿಯೂರಪ್ಪ ಉಲ್ಟಾ ಹೊಡೆದ್ರು‌, ಯಡಿಯೂರಪ್ಪ ಸಿಕ್ಕಿ ಬಿದ್ದಿದ್ದಾರೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಿದ್ದರಾಮಯ್ಯ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾಲಿಗೆ ಬಹಳ ಉದ್ದ ಇದೆ. ಇತಿ ಮೀತಿಯಲ್ಲಿ ಮಾತನಾಡಿದ್ರೆ ಒಳ್ಳೆಯದು. 40 ವರ್ಷದ ರಾಜಕೀಯ ಜೀವನದಲ್ಲಿ ನೇರ ರಾಜಕೀಯ ಮಾಡಿದ್ದೇನೆ. ನೆರೆ ಪೀಡಿತ ಪ್ರದೇಶದಲ್ಲಿ ಪಾದಯಾತ್ರೆ ಮಾಡುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ, ನೆರೆ ಪ್ರದೇಶದಲ್ಲಿ ಪರಿಹಾರ ವಿಚಾರದ ಬಗ್ಗೆ  ಸತ್ಯ ಹೇಳಿದ್ರೆ ಬಿಜೆಪಿಯವರು ಮೈ ಪರಚಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.