ಬೆಳಗಾವಿ(ನ.15): ಉಪಚುನಾವಣೆಯ ಕಾವು ದಿನದಿಂದ ಏರುತ್ತಲೇ ಇದೆ. ಜಿಲ್ಲೆಯ ಗೋಕಾಕ್ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರ ರಾಜಕೀಯ ಚಟುವಟಿಕೆಗಳು ಭಾರಿ ತುರುಸಿನಿಂದ ನಡೆಯುತ್ತಿವೆ. ಗೋಕಾಕ್ ನಿಂದ ಲಖನ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗಲಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ. 

ಶುಕ್ರವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಲಖನ್ ಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡುವ ಬಗ್ಗೆ ಇಂದು ಸಂಜೆ ಅಥವಾ ನಾಳೆ ಅಧಿಕೃತವಾಗಿ ಘೋಷಣೆಯಾಗಲಿದೆ. ರಮೇಶ್ ನನ್ನು ಸೊಲಿಸಲು ಮೊದಲಿನಿಂದಲೂ ಪ್ರಚಾರ ಮಾಡ್ತಿದ್ದೇವೆ. ರಮೇಶ್ ಜಾರಕಿಹೊಳಿ‌ ಕುತಂತ್ರಕ್ಕೆ ಇಡೀ ಜಿಲ್ಲೆ ಬಲಿಯಾಗಿದೆ ಎಂದು ರಮೇಶ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

‘ಸತೀಶ್ ಜೊತೆ 40 ವರ್ಷದಿಂದ ಮಾತಾಡಿಲ್ಲ : ಲಖನ್ ಕೂಡ ಬೆನ್ನಿಗೆ ಚೂರಿ ಹಾಕಿದ’

ಶಾಸಕ ಹೆಚ್.ವಿಶ್ವನಾಥ್ ನಮ್ಮ ಗುರುಗಳ ಅಂತಾ ರಮೇಶ್ ಜಾರಕಿಹೊಳಿ ಅವರ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ ಅವರು, ಮೊದಲು ಎಸ್.ಎಂ ಕೃಷ್ಣ, ಸೋನಿಯಾ ಗಾಂಧಿ ಹೀಗೆ 40 ಜನರ ಹೆಸರು ರಮೇಶ್ ಹೇಳುತ್ತಾನೆ. ರಮೇಶ್ ಜಾರಕಿಹೊಳಿ‌ ಒಬ್ಬ ಅವಕಾಶವಾದಿ ರಾಜಕಾರಣಿಯಾಗಿದ್ದಾನೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇಪ್ಪತ್ತು ವರ್ಷದ ಇತಿಹಾಸ ತೆಗೆದು‌ ನೋಡಿದ್ರೇ ಗೊತ್ತಾಗುತ್ತೆ, ಎಷ್ಟು ಜನ ಗುರುಗಳಿದ್ದಾರೆಂದು ಗೊತ್ತಾಗುತ್ತದೆ. ಗೋಕಾಕ್ ಕ್ಷೇತ್ರದ ಜನರು ನಮ್ಮ ಪರವಾಗಿ ಇದ್ದಾರೆ ಎಂದು ಹೇಳಿದ್ದಾರೆ. ರಮೇಶ್ ಜಾರಕಿಹೊಳಿ‌ ಜತೆಗೆ ಮುಂದೆ ಯಾವತ್ತೂ ಮಾತಾಡಲ್ಲ. ಒಂದು‌ ಲಕ್ಷ ಜನರನ್ನ ಸೇರಿಸಬೇಕಾದ್ರೆ ನಾಲ್ಕು ಜಿಲ್ಲೆಯ ಜನರನ್ನ ರಮೇಶ್ ತರುತ್ತಾರೆ. ಗೋಕಾಕ್ ನಲ್ಲಿ ಲಖನ್ ನನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ. 

ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, 9 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.